ಯರಗಟ್ಟಿ,ಆ.೧೮ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ದೇವಾಲಯಗಳು, ನಮ್ಮ ಮೂಲ ಸಂಸ್ಕೃತಿ ಸಂಸ್ಕಾರ ಉಳಿಸಿ ಬೆಳಿಸುವ ತಾಣವಾಗಲಿ ಎಂದು ನೇಸರಗಿ ಮಲ್ಲಾಪೂರ ಗಾಳೇಶ್ವರಮಠದ ಶ್ರೀಚಿದಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಸುಕ್ಷೇತ್ರ ಜಾಲಿಕಟ್ಟಿ ಜೀವಾಪೂರ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ದಂದು ಜರುಗಿದ ಶ್ರೀ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಸ್ಪರ ದ್ವೇ?, ಕೆಟ್ಟ ಭಾವನೆ ತೊಡೆದು ಹಾಕಿ ಉತ್ತಮರಾಗಿ ಜೀವನ ನಡೆಸಬೇಕು. ದೇವರು, ಗುರುಗಳ ಕುರಿತು ಶ್ರದ್ಧಾ ಭಕ್ತಿ ಬೆಳೆಸಿಕೊಳ್ಳಬೇಕು ಎಂದರು.ಬೆಳಿಗ್ಗೆ ಶ್ರೀಬಸವೇಶ್ವರ ದೇವರಿಗೆ ರುದ್ರಾಭಿಷಕ, ಪುಷರ್ಚನೆ, ಬಿಲ್ವಾರ್ಚನೆ, ಪಂಚಾಮೃತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಬೆಳಗ್ಗೆಯಿಂದ ಭಕ್ತರ ದಂಡು ಪಾದಯಾತ್ರೆ ಮುಖಾಂತರ ಆಗಮಿಸಿ ದೇವರಿಗೆ ನೈವೇದ್ಯ, ಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದರು.
ಸಾಯಂಕಾ ಶ್ರೀ ಬಸವೇಶ್ವರ ರಥೋತ್ಸವವು ಅಪಾರ ಭಕ್ತರ ಮಧ್ಯೆ ಹರ ಹರ ಮಹಾದೇವ ಎಂಬ ಘೋ?ಣೆಯೊಂದಿಗೆ ಜರುಗಿತು. ಅನೇಕ ಭಕ್ತರು ಹೂ ಮಾಲೆಗಳಿಂದ ಅಲಂಕರಿಸಿದ ರಥೋತ್ಸವಕ್ಕೆತೆಂಗಿನಕಾಯಿ, ಉತ್ತತ್ತಿ ಹಾಗೂ ಬಾಳೆಹಣ್ಣು ಅರ್ಪಿಸಿ ತಮ್ಮ ಭಕ್ತಿ ಮೆರೆದರು.ಮುಖಂಡ ಸಂಗಯ್ಯ ಹಿರೇಮಠ, ಬಸಯ್ಯ ಗೌಡರ, ಮಲನಾಯ್ಕ ನಾಯ್ಕರ, ಮಲ್ಲಿಕಾರ್ಜುನ ಯಡಳ್ಳಿ, ಮಹಾದೇವಯ್ಯ ಪೂಜೇರ, ಮಲ್ಲಪ್ಪ ಬಡಿಗೇರ, ಬಾಲನಾಯ್ಕ ಕಡಬಿ, ಬಸಪ್ಪ ಬಂಡ್ರೊಳ್ಳಿ, ಶಿವಾನಂದ ಅಟಿಗಲ್ಲಮಟ, ಈರಣ್ಣ ಕಂಬಾರ, ವೈ.ಎಫ್.ನಾಯ್ಕರ, ನೀಲಕಂಠ ಕಂಬಾರ, ಮಹಾಂತೇಶ ಗೌಡರ, ಸಿದ್ದಯ್ಯ ಪೂಜೇರ, ಉಳವಯ್ಯ ಗೌಡರ, ಮಲ್ಲಿಕಾರ್ಜುನ ಅಂಗಡಿ, ವೇಂಕನ್ನ ಯರಡ್ಡಿ, ರಮೇಶ ನರಿ, ಮುತ್ತನಗೌಡ ನಾಯ್ಕರ, ಶಿವಪ್ಪ ಕುರಿ, ಬಸಪ್ಪ ಅಂಗಡಿ, ಬಸವರಾಜ ಕಡಬಿ ಸೇರಿದಂತೆ ಇತರರಿದ್ದರು.