ರಾಮದುರ್ಗ,ಆ.೧೮: ಎರಡು ವರ್ಷದ ಮಗುವಿನೊಂದಿಗೆ ಗರ್ಭೀಣಿ ಹೆಂಡತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ರಾಮದುರ್ಗದ ಖಾಸಗಿ ಆಸ್ಪತ್ರೆಗೆ ಹೊರಟಿದ್ದ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತವಾಗಿ ಗರ್ಭೀಣಿ ಮಹಿಳೆ ಸ್ಥಳದಲ್ಲೇ ಮೃತ ಪಟ್ಟ ಘಟನೆ ರಾಮದುರ್ಗ ಪಟ್ಟಣದ ಹುತಾತ್ಮ ವೃತ್ತದ ಸಮೀಪದ ಕರ್ನಾಟಕ ಝರಾಕ್ಸ್ ಅಂಗಡಿ ಹತ್ತಿರ ನಡೆದಿದೆ.
ಮೃತ ಮಹಿಳೆ ತಾಲೂಕಿನ ಹಳೇತೊರಗಲ್ಲ ಗ್ರಾಮದ ಗೀತಾ ಚಂದನಗೌಡ ಪಾಟೀಲ(೨೬) ಎಂದು ಗುರ್ತಿಸಲಾಗಿದೆ. ಬೈಕ್ ಮೇಲೆ ತನ್ನ ಎರಡು ವರ್ಷದ ಮಗುವಿನೊಂದಿಗೆ ಹೆಂಡತಿಯನ್ನು ಕೂರಿಸಿಕೊಂಡು ಹಳೇ ತೋರಗಲ್ಲ ಗ್ರಾಮದ ರಾಮದುರ್ಗ ಪಟ್ಟಣದ ಖಾಸಗಿ ಆಸ್ಪತ್ರೆಗೆ ಹೊರಟಿರುವ ಸಂದರ್ಭದಲ್ಲಿ ಸಾರಿಗೆ ಬಸ್ ಹಾಗೂ ಬೈಕ ಮಧ್ಯೆ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಬಸ್ಸಿನ ಹಿಂದಿನ ಗಾಲಿ ಮಹಿಳೆ ಹಾಯ್ದು ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ.
ಈ ಘಟನೆ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.