ಪ್ರವಾಹ ಮುನ್ನೆಚ್ಚರಿಕೆ: ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಯ ದಡದಲ್ಲಿಯ ಗ್ರಾಮಗಳ ಜನ- ಜಾನುವಾರಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ  ಸೂಚನೆ 

Hasiru Kranti
ಪ್ರವಾಹ ಮುನ್ನೆಚ್ಚರಿಕೆ: ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಯ ದಡದಲ್ಲಿಯ ಗ್ರಾಮಗಳ ಜನ- ಜಾನುವಾರಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ  ಸೂಚನೆ 
WhatsApp Group Join Now
Telegram Group Join Now

ಬೆಳಗಾವಿ 18- ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿಯ ದಡದಲ್ಲಿ ಬರುವ ಎಲ್ಲ ಗ್ರಾಮಗಳ ಗ್ರಾಮಸ್ಥರು ಹಾಗೂ ತಮ್ಮ ಜಾನುವಾರಗಳ ಸಮೇತ ನದಿಯ ಪಾತ್ರದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮಸ್ಥರಿಗೆ ಸೂಚಿಸಿದೆ.

:ಪ್ರವಾಹ ಮುನ್ನೆಚ್ಚರಿಕೆ:

ಹಿಡಕಲ್ (ಘಟಪ್ರಭಾ) ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆ ಆಗುತ್ತಿರುವುದರಿಂದ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದೆ. ಇದರಿಂದ ಹಿಡಕಲ್ ಜಲಾಶಯವು ಶೇಕಡಾ 99.8 ರಷ್ಟು ಭರ್ತಿಯಾಗಿದ್ದು, ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಏರತೊಡಗಿದ್ದು, ಜಲಾಶಯದ ಗರಿಷ್ಟ ಮಟ್ಟ 2175.00 ಅಡಿಗಳಿರುತ್ತದೆ. ದಿನಾಂಕ:18-08-2025 ರಂದು ಮುಂಜಾನೆ 8.30 ಕ್ಕೆ ಜಲಾಶಯದ ಮಟ್ಟ 2174.667 ಅಡಿಗಳು ಇದ್ದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ 13337 ಕ್ಯೂಸೆಕ್ಸ್ ಇದ್ದು, ಘಟಪ್ರಭಾ ನದಿಗೆ ಇಂದು ದಿನಾಂಕ:18-08-2025 ರಂದು ಮಧ್ಯಾಹ್ನ 12.00 ಗಂಟೆಗೆ ಕ್ಲಸ್ಟ ಗೇಟುಗಳ ಮೂಲಕ 6000 ಕ್ಯೂಸೆಕ್ಸ್ ವರೆಗೆ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುವುದು. ಹಾಗೂ ಜಲಾಶಯದ ಒಳಹರಿವು ಹೆಚ್ಚಾದಂತೆ ಮತ್ತೆ 20000 ಕ್ಯೂಸೆಕ್ಸ್ ವರೆಗೆ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುವುದು, ಆದ್ದರಿಂದ ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿಯ ದಡದಲ್ಲಿ ಬರುವ ಎಲ್ಲ ಗ್ರಾಮಗಳ ಗ್ರಾಮಸ್ಥರು ಹಾಗೂ ತಮ್ಮ ಜಾನುವಾರಗಳ ಸಮೇತ ನದಿಯ ಪಾತ್ರದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮಸ್ಥರಿಗೆ ಸೂಚಿಸಲು ಈ ಮೂಲಕ ವಿನಂತಿಸಲಾಗಿದೆ ಎಂದು ಕ.ನೀ.ನಿ.ನಿ ಸಿ.ಬಿ.ಸಿ. ಉಪ ವಿಭಾಗ ನಂ-2 ಹಿಡಕಲ್ ಡ್ಯಾಮ್ ದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article