ಹುನಗುಂದ; ಕೇಂದ್ರ ಮತ್ತು ಸಮಾಜ ಕೇಂದ್ರ ಶಾಲೆಯು ಮೂಲಭೂತ ಸೌಲಭ್ಯಗಳಿಲ್ಲದೆ ಮತ್ತು ಸಂಪೂರ್ಣ ಕಳೆ ಕಟ್ಟಡವಾಗಿದ್ದರಿಂದ ಇಡೀ ಕಟ್ಟಡವೆ ಶಿಥಿಲಾವಸ್ಥೆಯಲ್ಲಿದ್ದು, ಸಧ್ಯ ಅವಶ್ಯವಿದ್ದಷ್ಟು ಕಟ್ಟಡ ತೆರವುಗೊಳಿಸಿ ಕಾಲಕಾಲಕ್ಕೆ ಬರುವ ಅನುದಾನದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಲಾಗುವದೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದ ವಿಶಾಲವಾದ ಬಯಲು ಹೊಂದಿದ ಕೇಂದ್ರ ಮತ್ತು ಸಮಾಜ ಕೇಂದ್ರ ಶಾಲೆ ಆವರಣದಲ್ಲಿ ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ ಎಸ್ಎಫ್ಸಿ ಯೋಜನೆಯ ರೂ. ೫೦ಲಕ್ಷ ಅನುದಾನದಲ್ಲಿ ೩ಕೊಠಡಿಗಳನ್ನು ನಿರ್ಮಿಸುವ ಉದ್ದೇಶದದಿಂದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತ ೧೯೯೦ರಲ್ಲಿ ಶಾಸಕ ಸಚಿವ ಲಿಂ. ಎಸ್.ಆರ್. ಕಾಶಪ್ಪನವರ ಕಾಲದಲ್ಲಿ ಲೋಕೋಪಯೋಗಿ ಸಚಿವ ರಾಜಶೇಖರ ಮೂರ್ತಿಯವರು ಈ ಜಾಗೆಯಲ್ಲಿ ನೂತನ ಶಾಲಾ ಕಟ್ಟಡವನ್ನು ಉದ್ಘಾಟನೆಗೊಳಿಸಿದ್ದರು. ೪ದಶಕಗಳು ಗತಿಸಿರುವದರಿಂದ ಈ ಕಟ್ಟಡ ಶಿಥೀಲಾವಸ್ಥೆಗೆ ಬಂದಿದೆ. ಇದನ್ನು ಹಂತಹಂತವಾಗಿ ಅನುದಾನ ಪಡೆದು ಇಗಿರುವಂತೆ ಸಂಪೂರ್ಣ ಕಟ್ಟಡವನ್ನು ನಿರ್ಮಿಸಿ ಒಂದು ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಹೊಂದಿರುವದಾಗಿ ಶಾಸಕರು ತಿಳಿಸಿದರು. ಈಗಾಗಲೆ ಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ದಿಗಾಗೆಯೆ ಪ್ರೌಢ ಮತ್ತು ಕಾಲೇಜು ಹಂತದಲ್ಲಿ ಸುಧಾರಣೆ ಮತ್ತು ವಸತಿ ನಿಲಯಗಳು ಸೇರಿದಂತೆ ಅಂದಾಜು ರೂ. ೧೩ಕೋಟಿ ಅನುದಾನ ಬಳಸಲಾಗಿದೆ. ಈಗಾಗಲೆ ಇಲ್ಲಿರುವ ಅಬ್ದುಲ್ ಕಲಾಂ ಉರ್ದು ಶಾಲೆ ಇರರುವದರಿಂದ ಅದಕ್ಕೂ ಹೆಚ್ಚಿನ ಸೌಲಭ್ಯ ಒದಗಿಸಬೇಕಾಗಿದೆ. ಇನ್ನೂ ಹೆಚ್ಚಿನ ಅನುದಾನ ತಂದು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿರುವದಾಗಿ ಶಾಸಕ ಕಾಶಪ್ಪನವರ ತಿಳಿಸಿದರು. ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಮಹದೇವ ಕಲಾಲ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ, ಬಿಆರ್ಸಿ ಅಮರೇಶ ಗುಡಗುಂಟಿ, ಮುಖ್ಯ ಶಿಕ್ಷಕ ಕೆ.ವ್ಹಿ. ಮಡಿವಾಳರ, ಮುಖಂಡರಾದ ಸಂಗಣ್ಣ ಗಂಜಿಹಾಳ, ಜಬ್ಬಾರ ಕಲಬುರ್ಗಿ, ಮಹಿಬೂಬ ಸರಕಾವಸ್, ಬಸವರಾಜ ಅಂಟರತಾನಿ, ಜೈನಸಾಬ ಹಗೇದಾಳ, ಬಸವರಾಜ ಬಂಗಾರಿ ಸೇರಿದಂತೆ ಇತರರು ಇದ್ದರು.