ನೇಸರಗಿ. ನೂತನವಾಗಿ ಪ್ರತಿ ಶನಿವಾರದಂದು ಸುತಗಟ್ಟಿ ಗ್ರಾಮದಲ್ಲಿ ಇಂದಿನಿಂದ ಪ್ರಾರಂಭ ಅಗಿದ್ದು ಇದರ ಪ್ರಯೋಜನವನ್ನು ಸುತಗಟ್ಟಿ, ಮತ್ತಿಕೊಪ್ಪ, ಹೋಗರ್ತಿ, ಕೊಳ್ಳನಟ್ಟಿ, ಹನುಮನಹಟ್ಟಿ, ದೇಶನೂರ ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆ ವ್ಯಾಪಾರ, ವಹಿವಾಟು ಮಾಡಿ ಸಂತೆಯ ಸದುಪಯೋಗ ಪಡೆಯಬೇಕೆಂದು ಮಾಜಿ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ತುಬಾಕಿ ಹೇಳಿದರು.
ಅವರು ಸಮೀಪದ ಸುತಗಟ್ಟಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗಿರುವ ವಾರದ ಸಂತೆ ಉದ್ಘಾಟನೆ ಮಾಡಿ ಮಾತನಾಡಿದರು.
ಗ್ರಾಮ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವನಜಾಕ್ಷಿ ಪಾಟೀಲ ಮಾತನಾಡಿ ತರಕಾರಿ, ಪ್ರಮುಖ ಬೆಳೆಗಳನ್ನು ಬೆಳೆಯುವ ಪ್ರಮುಖ ಕೇಂದ್ರವಾಗಿದ್ದು, ಈ ಭಾಗದ ಜನ ಸಂತೆಯನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ನೇಸರಗಿ ಕೆನರಾ ಬ್ಯಾಂಕ ವ್ಯವಸ್ಥಾಪಕರಾದ ಗಂಗಪ್ಪ ಪಾಲಬಾವಿ, ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಶಾಂತವ್ವ ದೇಯಣ್ಣವರ, ಸದಸ್ಯರಾದ ನಿಂಗಣ್ಣ ಚೋಭಾರಿ, ಅನಸೂಯಾ ಬಾಳಿಗಡ್ಡಿ, ಭೀಮಸಿ ಕಲನಾಯ್ಕರ,ಸುವರ್ಣಾ ಜಮಾದಾರ ಸೇರಿದಂತೆ ಸುತಗಟ್ಟಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.