ಬಳ್ಳಾರಿ,ಆ.16 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ
ಆಚರಿಸಲಾಯಿತು.ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅನೇಕ ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಪ್ರತಿಫಲವಾಗಿ ಇಂದು ನಮಗೆಲ್ಲರಿಗೂ ಸ್ವಾತಂತ್ರö್ಯ ಲಭಿಸಿದೆ. ಅಂತಹ ಮಹನೀಯರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸ್ವಾತಂತ್ರö್ಯ ದಿನಾಚರಣೆಯ ಶುಭಾಷಯ ತಿಳಿಸಿದರು.
ಈ ವೇಳೆ ಕಚೇರಿಯ ಸಿಬ್ಬಂದಿಗಳಾದ ವಿಜಯಕುಮಾರ, ವಿ.ಹನುಮಂತ, ಮಲ್ಲೇಶಪ್ಪ, ಹನುಮೇಶ.ಹೆಚ್., ತೇಜ, ದಿವಾಕರ ಮತ್ತು ಪತ್ರಕರ್ತರಾದ ಮಲ್ಲಿಕಾರ್ಜುನ ಚಿಲ್ಕರಾಗಿ, ಪೀರಸಾಬ್, ಮುರಳಿಕಾಂತ್ ಇದ್ದರು.