ಹುಬ್ಬಳ್ಳಿ, 15, ಆಗಸ್ಟ್ 2025 : ಸಕ್ರಾ ವರ್ಲ್ಡ್ ಆಸ್ಪತ್ರೆಯು, ಇಂಟರ್ನ್ಯಾಷನಲ್ ನೀ ಮತ್ತು ಆರ್ಥೋಪೆಡಿಕ್ ಸೆಂಟರ್ ಸಹಯೋಗದೊಂದಿಗೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ 50 ಹಾಸಿಗೆಗಳ ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಭಾಗವಹಿಸಿದ್ದರು.
ಈ ಕೇಂದ್ರವು ಮೂಳೆ ಚಿಕಿತ್ಸೆ, ಬೆನ್ನುಮೂಳೆ ಚಿಕಿತ್ಸೆ, ಜನರಲ್ ಸರ್ಜರಿ, ಹೃದಯ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ ಮತ್ತು ನರಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ವಿಭಾಗಗಳಲ್ಲಿ ತಜ್ಞ ವೈದ್ಯಕೀಯ ಆರೈಕೆ ಒದಗಿಸಲಿದೆ. ವೈದ್ಯಕೀಯ ಶ್ರೇಷ್ಠತೆ, ರೋಗಿ ಕೇಂದ್ರಿತ ಆರೈಕೆ ಮತ್ತು ನಾವೀನ್ಯತೆಗೆ ಬದ್ಧವಾಗಿರುವ ಈ ಸಹಯೋಗವು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಸಚಿವರಾದ ಎಂ. ಬಿ. ಪಾಟೀಲ್ ಮಾತನಾಡಿ, “ಈ ಅತ್ಯಾಧುನಿಕ ಸೌಲಭ್ಯವನ್ನು ಪ್ರಾರಂಭಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಡಾ. ಚಂದ್ರಶೇಖರ್ ಮತ್ತು ಸಕ್ರಾ ವರ್ಲ್ಡ್ ಆಸ್ಪತ್ರೆಗೆ ಅಭಿನಂದನೆಗಳು. ಇದು ವಿಶ್ವದರ್ಜೆಯ ಕೀಲು ಮತ್ತು ಬೆನ್ನುಮೂಳೆ ಚಿಕಿತ್ಸೆಯಲ್ಲಿ ಹೊಸ ಭರವಸೆ ಮೂಡಿಸಿದ್ದು, ಹೊಸ ಯುಗದ ಆರಂಭ ಸೂಚಿಸುತ್ತದೆ. ಜನರು ಆರೋಗ್ಯವಾಗಿದ್ದಾಗ ನಮ್ಮ ಕುಟುಂಬಗಳು ಸದೃಢವಾಗಿರುತ್ತವೆ, ಮತ್ತು ಕುಟುಂಬಗಳು ಸದೃಢವಾದಾಗ ನಮ್ಮ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ,” ಎಂದು ಹೇಳಿದರು.
ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಯುಚಿ ನಾಗಾನೊ ಮಾತನಾಡಿ , “ಐಕೆಒಸಿ ಜೊತೆಗಿನ ಈ ಪಾಲುದಾರಿಕೆಯು ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿ ಹೊಸ ಅಧ್ಯಾಯ ಬರೆಯಲಿದೆ. ನಮ್ಮ ಪರಿಣತಿ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಸಮುದಾಯಕ್ಕೆ ಹತ್ತಿರ ತರುವ ಮೂಲಕ, ನಮ್ಮ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ಉತ್ತಮ ಆರೋಗ್ಯ ಫಲಿತಾಂಶಗಳನ್ನು ಖಚಿತಪಡಿಸುವ ಗುರಿ ಹೊಂದಿದ್ದೇವೆ,” ಎಂದರು.
ಸಕ್ರಾ ವರ್ಲ್ಡ್ ಆಸ್ಪತ್ರೆಯ ಉಪ ವ್ಯವಸ್ಥಾಪಕ ನಿರ್ದೇಶಕ ಕೀ ಇಯಾಮಾ ಅವರು ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸಲು ಸಕ್ರಾ ಬದ್ಧವಾಗಿದೆ. ಈ ಸಹಯೋಗವು ಆ ಭರವಸೆ ಈಡೇರಿಸುವ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ,” ಎಂದು ಹಂಚಿಕೊಂಡರು.
ಸಕ್ರಾ ವರ್ಲ್ಡ್ ಆಸ್ಪತ್ರೆಯ ಗ್ರೂಪ್ ಚೀಫ್ ಆಪರೇಟಿಂಗ್ ಆಫೀಸರ್ ಲವ್ಕೇಶ್ ಫಾಸು, “ಪ್ರಗತಿಶೀಲವಾಗಿರುವಂತೆಯೇ ಸ್ಪಂದನಶೀಲವಾಗಿರುವ ಆರೋಗ್ಯ ವ್ಯವಸ್ಥೆ ರಚಿಸುವುದು ನಮ್ಮ ಗುರಿಯಾಗಿದೆ.,” ಎಂದರು.
ಸಕ್ರಾ ವರ್ಲ್ಡ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕ ಮತ್ತು ಬೆಂಗಳೂರಿನ ಐಕೆಒಸಿ ಅಧ್ಯಕ್ಷರಾದ ಡಾ. ಚಂದ್ರಶೇಖರ್ ಪಿ. ಮಾತನಾಡಿ , “ಸಕ್ರಾ ಆಸ್ಪತ್ರೆಯೊಂದಿಗಿನ ನಮ್ಮ ಪಾಲುದಾರಿಕೆಯು ಎರಡು ಪ್ರತಿಷ್ಠಿತ ಸಂಸ್ಥೆಗಳ ಸಾಮರ್ಥ್ಯವನ್ನು ಒಂದೇ ಸೂರಿನಡಿ ತಂದು, ಸಮಗ್ರ ಹಾಗೂ ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲಿದೆ,” ಎಂದು ಹೇಳಿದರು.