ನೇಸರಗಿ. ಗ್ರಾಮದ ಗ್ರಾಮ ಪಂಚಾಯತ, ಕುವೆಂಪು ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ, ವಿದ್ಯಾ ಮಂದಿರ ಪ್ರೌಢ ಶಾಲೆ, ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತೀ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಗ್ರಾಮದ ಎಲ್ಲ ರಸ್ತೆಗಳಲ್ಲಿ ಸಂಚರಿಸಿ ಬೋಲೋ ಭಾರತ ಮಾತಾ ಕಿ ಜೈ, ಒಂದೇ ಮಾತರಂ ಎನ್ನುವ ಘೋಷನೆಯೊಂದಿಗೆ ಕರ್ನಾಟಕ ಚೌಕ ಗೆ ಆಗಮಿಸಿ ಅಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರ, ಉಪಾಧ್ಯಕ್ಷರ, ಸದಸ್ಯರ, ಎಲ್ಲ ಇಲಾಖೆಗಳ ಅಧಿಕಾರಿಗಳ, ಗ್ರಾಮದ ಹಿರಿಯರ,ಪಂಚಾಯತ ಸಿಬ್ಬಂದಿಯ, ಮಕ್ಕಳ ಸಮ್ಮುಖದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ವೀರಭದ್ರ ಚೋಭಾರಿ ಧ್ವಜಾರೋಹಣ ನೆರವೇರಿಸಿದರು.