ಏಕತೆಯ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಕಾರಣರಾಗೋಣ: ಡಾ. ಶಿವಾನಂದ ಪಾಟೀಲ

Ravi Talawar
ಏಕತೆಯ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಕಾರಣರಾಗೋಣ: ಡಾ. ಶಿವಾನಂದ ಪಾಟೀಲ
WhatsApp Group Join Now
Telegram Group Join Now

ಕೌಜಲಗಿ. ಸ್ಥಳೀಯ ಡಾ|| ಮಹದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢಶಾಲೆ, ಕೌಜಲಗಿಯಲ್ಲಿ ೭೯ನೆಯ ಸ್ವತಂತ್ರ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣವರ ೨೨೭ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ವೈದ್ಯ ಡಾ|| ಶಿವಾನಂದ ಪಾಟೀ ಅವರು ಮಾತನಾಡುತ್ತಾ ೧೯೪೭ ಅಗಷ್ಟ ೧೫ರಂದು ನಮ್ಮ ದೇಶಕ್ಕೆ ಸ್ವತಂತ್ರ ದೊರೆಯಿತು. ಸ್ವತಂತ್ರ ದೊರೆತು ಸುಮಾರು ೭೯ ವ?ಗಳು ಕಳೆದಿ. ಆದರೆ, ಇನ್ನೂ ನಮ್ಮಲ್ಲಿ ಸಮಾನತೆ, ಏಕತೆ, ರಾಷ್ಟ್ರೀಯತೆಯ ಭಾವ ಮೂಡುವಲ್ಲಿ ಕೊಂಚ ವಿಳಂಬವಾಗಿದೆ. ಹೀಗಾದರೆ ಸ್ವಾತಂತ್ರ್ಯದ ಅರ್ಥ ತಪ್ಪಾಗುತ್ತದೆ. ಆದ ಕಾರಣ ನಾವೆಲ್ಲರೂ ಒಂದು ಎಂಬ ಭಾವನೆ ರೂಡಿಸಿಕೊಂಡು ಭವ್ಯ ಭಾರತದ ನಿರ್ಮಾಣಕ್ಕೆ ಕಾರಣರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ವಿವೇಕ ಹಳ್ಳೂರ್ ಅವರು ಭಾರತಕ್ಕೆ ಸ್ವತಂತ್ರ ದೊರೆಯಲು ನಮ್ಮ ದೇಶದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್, ಸುಭಾ? ಚಂದ್ರ ಬೋಸ್, ಜಾನ್ಸಿರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ್ ಆಜಾದ, ಭಗತ್ ಸಿಂಗ್ ಮೊದಲಾದ ಸ್ವಾತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸ್ವತಂತ್ರಕ್ಕಾಗಿ ಹೋರಾಡಿ ಬ್ರಿಟಿ?ರಿಂದ ನಮ್ಮನ್ನು ಮುಕ್ತಿಗೊಳಿಸಿದರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವಂತಾಗಬೇಕು ಆ ಮೂಲಕ ದೇಶಪ್ರೇಮವನ್ನು ರೂಡಿಸಿಕೊಳ್ಳಬೇಕೆಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ವಸಂತ ದಳವಾಯಿಯವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಸುರೇಶ ಶೆಟ್ಟಿ, ಈಶ್ವರ ಬಿಸಿಗುಪ್ಪಿ, ದೊಡ್ಡಸಿದ್ದಪ್ಪ ಕಾನಟ್ಟಿ, ಪ್ರಕಾಶ್ ಅರಳಿ, ಸುರೇಶ್ ಮುಗುದುಮ್, ಪುಂಡಲಿಕ ಕಟ್ಟಿ, ಮೀರಾಸಾಬ್ ಅನ್ಸಾರಿ, ದಸ್ತಗಿರ್ ಡಬರಲಿ, ನೂರ್ ಅಹಮದ್ ಇನಾಮ್ದಾರ್, ಗಿರಿಯಪ್ಪ ನೇಸರಗಿ, ಸದಾಶಿವ್ ಮಾಂಗ್, ಸುಲ್ತಾನ್ ಮುಲ್ತಾನಿ ಹಾಗೂ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಕ ವಿ.ಕೆ.ಬಂಡಿವಡ್ಡರ ನಿರೂಪಿಸಿದರು. ಎಸ್ ಎಸ್ ಕಡಕಬಾವಿ ಸ್ವಾಗತಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article