ದೇಶಾಭಿಮಾನ ಮೂಡಿಸಿದ ಯೋಧರ ತ್ಯಾಗ, ಬಲಿದಾನ ದೊಡ್ಡದು; ಸಂಗನಗೌಡ

Ravi Talawar
ದೇಶಾಭಿಮಾನ ಮೂಡಿಸಿದ ಯೋಧರ ತ್ಯಾಗ, ಬಲಿದಾನ ದೊಡ್ಡದು; ಸಂಗನಗೌಡ
WhatsApp Group Join Now
Telegram Group Join Now
ವಿಜಯಪುರ- ೧೫- ೭೯ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು  ಸ್ವಾತಂತ್ರ ಯೋಧರಾದ ದಿ. ಚಂದಪ್ಪ ತೋಟಪ್ಪ ಗೆಜ್ಜಿ (ಸಾಸನೂರ) ಇವರ ನಗರದ ಮನೆ ಆವರಣದಲ್ಲಿ ಧ್ವಜಾರೋಹ ನೆರವೇರಿಸಲಾಯಿತು.
ಸಂಗನಗೌಡ ನಿಂ. ಬಿರಾದಾರ, ಸಂಗನಗೌಡ ನಾಡಗೌಡ, ಬಿ.ಎಂ. ಪಾಟೀಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸ್ವಾತಂತ್ರಕ್ಕಾಗಿ ಹೋರಾಡಿದ ಚಳುವಳಿ ನಡೆದು ಬಂದ ದಾರಿ ಹಾಗೂ ಸಂಘ ಸಂಸ್ಥೆಗಳು ರಾಷ್ಟ್ರದ ಜನರಲ್ಲಿ ದೇಶಾಭಿಮಾನ ಮೂಡಿಸಿದ ಯೋಧರ ತ್ಯಾಗ ಬಲಿದಾನ ಬಗ್ಗೆ ತಿಳಿಸಿ  ಅಂತವರ ಸಾಲಿನಲ್ಲಿ ದಿ. ಚಂದಪ್ಪ ತೋಟಪ್ಪ ಗೆಜ್ಜಿ ಇವರು ಒಬ್ಬರೆಂದು ಹೇಳಲು ನಮಗೆ ಹೆಮ್ಮೆ ಅನಿಸುತ್ತದೆ. ಉತ್ತರ ಕರ್ನಾಟಕದ ಏಳು ಬಂಡಾಯಗಳ ಬಗ್ಗೆ ತಿಳಿಸಿದರು.
ದಿ. ಚಂದಪ್ಪ ತೋಟಪ್ಪ ಗೆಜ್ಜಿ ಇವರ ಮೊಮ್ಮಗನಾದ ಡಾ. ಚಂದ್ರಶೇಖರ  ಸುರೆಶ ಗೆಜ್ಜಿ ಇವರು ತಮ್ಮ ತಾತನವರು ಹುಟ್ಟಿದ ಸ್ಥಳ ಅವರು ನಡೆದು ಬಂದ ದಾರಿ ಹೋರಾಟ ಮತ್ತು ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಮಾಹಿತಿ ಜೊತೆಗೆ ಸೆರೆಮನೆ ವಾಸ ಕೂಡ ನಿಖರವಾದ ದಿನಾಂಕ ಮತ್ತು ಇಸವಿಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಇಂಥವರ ಮನೆಯಲ್ಲಿ ಜನ್ಮ ತಾಳಿದ ನಾವು ಭಾಗ್ಯವಂತರು ಮತ್ತು ಇಂತಹ ಅನೇಕ ಸ್ವಾತಂತ್ರ ಯೋಧರ ಸಂಕ್ಷಿಪ್ತ ಮಾಹಿತಿಯೊಂದಿಗೆ ನಮ್ಮ ತಾಯಿಯವರಾದ ಶ್ರೀಮತಿ ಕಮಲಾ ಸುರೇಶ ಗೆಜ್ಜೆ ಇವರು ಸಣ್ಣ ಮಕ್ಕಳಿಗಾಗಿ ಕಿರು ಪುಸ್ತಕ ರಚಿಸಿ ಈಗಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿದ್ದು ನಮ್ಮ ಮನೆತನದ ಗೌರವಕ್ಕೆ ಸಾಕ್ಷಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಗದೀಶಗೌಡ ಪಾಟೀಲ, ಕುಮಾರಗೌಡ ಪಾಟೀಲ, ಗುಂಡು ಗುಂಡದ, ಶಂಕರಗೌಡ ಬಿರಾದಾರ, ಚವ್ಹಾಣ, ಮುತ್ತು, ಪಟ್ಟಣಶೆಟ್ಟಿ, ದೇಶಪಾಂಡೆ, ಬಿರಾದಾರ, ಕತ್ನಳ್ಳಿ ಮುಂತಾದವರು ಭಾಗವಹಿಸಿದ್ದರು.  ಅನೇಕ ಪ್ರಶಸ್ತಿ ವಿಜೇತರಾದ ಬಿ.ಎಂ. ಪಾಟೀಲ, ಮಹೇಶ ರಾಮನಾಥ ತೋಟದ ಇವರಿಗೆ ಸುರೇಶ ಗೆಜ್ಜಿ ಇವರಿಗೆ ಸನ್ಮಾನಿಸಿದರು. ಕಮತಗಿಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
WhatsApp Group Join Now
Telegram Group Join Now
Share This Article