ನೇಸರಗಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಯೋಗದಲ್ಲಿ ನೇಸರಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದ ಶ್ರೀ ವೀರಭದ್ರೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎ ಬಿ. ಜಮಾದಾರ, ಊರಿನ ಹಿರಿಯರಾದ ಮಲ್ಲಿಕಾರ್ಜುನ ಮದನಬಾವಿ , ತಾಲೂಕಿನ ಜ್ಞಾನವಿಕಾಸ ಸಮನ್ವೇಧಿಕಾರಿ ಶೈಲಾ ಜೆ, ಮೇಲ್ವಿಚಾರಕರಾದ ಪ್ರವೀಣ್ ದೊಡ್ಡಮನಿ ಮತ್ತು ಅನೇಕರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಜಮಾದಾರ್ ಮಾತನಾಡಿ ಪೌಷ್ಟಿಕ ಆಹಾರ ಸೇವನೆ, ಬಳಕೆ, ಸಿರಿಧಾನ್ಯಗಳನ್ನು ಉಪಯೋಗಿಸುವುದರಿಂದ,ಪೌಷ್ಟಿಕ ಆಹಾರ ಸೇವನೆ, ನಿತ್ಯ ಜೀವನದಲ್ಲಿ ಸಿರಿಧಾನ್ಯ, ಹಸಿರು ತರಕಾರಿ ಸೊಪ್ಪು ಇದರಲ್ಲಿ ಸಿಗುವಂತ ವಿಟಮಿನ್ ಪೌಷ್ಠಿಕವಾಗಿ, ಪರಿಸರ ಮತ್ತು ನೈತಿಕವಾಗಿ ಒಳ್ಳೆಯದು. ಸಿರಿಧಾನ್ಯಗಳ ವಿಧಗಳು, ಅವುಗಳಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳ ಬಗ್ಗೆ ಗರ್ಭಿಣಿಯರಿಗೆ, ವಯಸ್ಕರರಿಗೆ, ವೃದ್ಧರಿಗೆ ಬಳಕೆ ಮಾಡುವ ಸಿರಿಧಾನ್ಯವು ಪೌಷ್ಟಿಕಾಂಶದ ಧಾನ್ಯಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಕಬ್ಬಿಣ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಆಹಾರದ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫೋಲೇಟ್ – ಗರ್ಭಾವಸ್ಥೆಯಲ್ಲಿ ಹೆಚ್ಚು ಅಗತ್ಯವಿರುವ ಎಲ್ಲಾ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ಹೆಚ್ಚಿನ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ಸಂಘದ ಸದಸ್ಯರಿಂದ ಪೌಷ್ಟಿಕ ಆಹಾರ ತಯಾರಿಯನ್ನು ಪ್ರಾತ್ಯಕ್ಷಿತೆ ಮೂಲಕ ಮಾಡಲಾಯಿತು. ಅಧ್ಯಕ್ಷ ಸ್ಥಾನ ವಹಿಸಿದಂತ ಮಲ್ಲಿಕಾರ್ಜುನ ಮದನಬಾವಿ ಮಾತನಾಡಿ ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ನಡೆಯುವಂತ ಕೆಲಸ ಕಾರ್ಯಗಳ ಬಗ್ಗೆ ಮತ್ತು ಈಗಿನ ಆಹಾರಕ್ಕೂ ಹಿಂದಿನ ಆಹಾರ ಬಳಕೆ ವ್ಯತ್ಯಾಸಗಳ ಬಗ್ಗೆ ಹಾಗೂ ಮಕ್ಕಳ ಬೆಳವಣಿಗೆ ಬಗ್ಗೆ ಪೂಜ್ಯರು ನೀಡುವಂತ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿರೂಪಣೆಯನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಜೆ, ಸ್ವಾಗತವನ್ನು ಸೇವಾ ಪ್ರತಿನಿಧಿ ನಾಗವೇಣಿ ನೆರವೇರಿಸಿದರು. ವಂದನಾರ್ಪಣೆ ಸೇವಾ ಪ್ರತಿನಿಧಿ ಶಾಂತಾ ಹಾಗೂ ಗೌರಿ ಪಾರ್ವತಿ ಮತ್ತು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.