ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಎದುರು ಮಳೆ, ಚಳಿಯ ವಾತಾವರಣ ಇದ್ದರೂ ಕೂಡ,ರಾತ್ರಿಯು ಸಹ ಅದ್ಯಾವುದನ್ನು ಲೆಕ್ಕಸದೇ ಇನ್ನು ಹೆಚ್ಚಿನ ಉತ್ಸಾಹ ದೊಂದಿಗೆ ಸೇರಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.
ಹಿರಿಯ ಸಾಮಾಜಿಕ ಹೋರಾಟಗಾರರಾದ ಶ್ರೀ ಎಸ್ ಆರ್ ಹಿರೇಮಠ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಶಾ ಕಾರ್ಯಕರ್ತೆರ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ ನಾಗಲಕ್ಷ್ಮಿ ಮಾತನಾಡಿ ರಾಜ್ಯದಾದ್ಯಂತ ಬಹಳ ಉತ್ಸಾಹದಿಂದ ಆಶಾ ಹೋರಾಟ ಮುಂದುವರೆಯುತ್ತಿದೆ. ನಮ್ಮ ಹೋರಾಟದಿಂದಾಗಿ ಸರ್ಕಾರ ಒಂದು ಹೆಜ್ಜೆ ಹಿಂದೆ ಸರಿದಿದೆ. ಆಶಾ ಕಾರ್ಯಕರ್ತರನ್ನು ತೆಗೆಯುವ ನಿರ್ಧಾರ ಕೈ ಬಿಡುತ್ತೇವೆ ಎಂದು ಬರವಣಿಗೆ ರೂಪದಲ್ಲಿ ನೀಡಿದ್ದಾರೆ ಎಂದರು.
ಆಶಾ ಗಳಿಗೆ ಕನಿಷ್ಠ ವೇತನ ಸರ್ಕಾರ ನೀಡುತ್ತಿಲ್ಲ, ಕೊಲೆ ಸುಲಿಗೆ ಮಾಡಿ ಜೈಲಿನಲ್ಲಿ ಇರತಕ್ಕಂತಹ ಕೈದಿಗಳಿಗೆ ತಿಂಗಳಿಗೆ 19 ರಿಂದ 20,000 ನೀಡುತ್ತಿದೆ. ಆಶಾ ಗಳಿಗೆ ಮಾತ್ರ 10,000 ಕೊಡಲು ಯೋಗ್ಯತೆ ಇಲ್ಲ. ನಮ್ಮ ಈ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ, ರಾಜ್ಯದ 40,000 ಆಶಾ ಕಾರ್ಯಕರ್ತರು ಜೈಲಿಗೆ ಹೋಗುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲಾ ಅಧ್ಯಕ್ಷರಾದ ಭುವನಾ ಬಳ್ಳಾರಿ, ಭುವನಾ ಬಳ್ಳಾರಿ, ಭಾರತಿ ಶೆಟ್ಟರ್, ಸುಜಾತ ಹಿರೇಮಠ, ಶೈಲಾ ಮಧುಗಲ್, ಮಂಜುಳ ಗಾಡುಗೋಳಿ, ಸಪ್ನಾ ಸುಳ್ಳದ್, ರಾಜೇಶ್ವರಿ ಕೋರಿ, ನಂದ ದೊಡ್ಡಮನಿ, ಶೋಭಾ ಹಿರೇಮಠ್.ಗೀತಾ ಸೂರ್ಯವಂಶಿ, ಸರೋಜ ಮಾಡಿವಾಳರ ಜ್ಯೋತಿ ಶಾಂತಪ್ನವರ, ಸಂಗೀತ ಗೋರೋವನಕೊಳ,ಜಯಶ್ರೀ ದೇಸಾಯಿ, ಲಷ್ಮಿ ಸಾಂಬಾಳ್ಮಟ್, ನೂರಾರು ಕಾರ್ಯಕರ್ತರು ಭಾಗವಹಿಸಿ ಇದ್ದರು.