ಅಥಣಿ: ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಅತ್ಯಂತ ಪ್ರಸಿದ್ಧವಾದ ಪುಣ್ಯಕ್ಷೇತ್ರ ಅದರ ಹೆಸರನ್ನು ಕೆಡಿಸಲು ಕೆಲವು ವ್ಯಕ್ತಿಗಳು ನಿರಾಧಾರ ಆರೋಪಗಳನ್ನ ಮಾಡುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಅತ್ಯಂತ ಹೇಯ ಕೃತ್ಯ ಅಂತಹ ಅಪರಾಧ ಮನೋಭಾವ ಇರುವ ವ್ಯಕ್ತಿಗಳನ್ನು ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು
ಅಥಣಿ ಪಟ್ಟಣದ ತಾಲೂಕ ಕಚೇರಿ ಎದುರು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ ನಡೆಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಹಾಗೂ ವೀರೇಂದ್ರ ಹೆಗಡೆ ಅವರ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಎಲ್ಲ ಸಾಮೂಹಿಕ ಸಮುದಾಯಗಳ ಮುಖಂಡರಿಂದ ತಹಸೀಲ್ದಾರ್ ಮೂಲಕ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು
ಈ ವೇಳೆ ಮಾತನಾಡಿದ ಯುವ ನಾಯಕ ಚಿದಾನಂದ ಸವದಿ ಹಲವು ವರ್ಷಗಳಿಂದ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ , ಸಮೀರ್ ಎಂಡಿ, ಜಯಂತ ಟಿ, ಅಜಯ್ ಅಂಚನ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ದೇವಸ್ಥಾನದ ಹೆಸರು ಕೆಡಿಸಲು ಹಾಗೂ ವೀರೇಂದ್ರ ಹೆಗಡೆ ಅವರ ಕುಟುಂಬಕ್ಕೆ ಕಳಂಕ ತರುವ ಉದ್ದೇಶದಿಂದ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಯಾರೇ ತಪ್ಪು ಮಾಡಿದರೂ ಸಹ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಹೇಳಿದರು
ಈ ವೇಳೆ ಅರವಿಂದ ದೇಶಪಾಂಡೆ, ಸಂಜು ತಳವಲಕರ, ಅರುಣ ಯಲಗುದ್ರಿ, ಸದಾಶಿವ ಬುಟಳೆ, ಉಮೇಶರಾವ ಬೊಂಟಡಕರ ಮಾತನಾಡಿದರು
ಈ ಸಂದರ್ಭದಲ್ಲಿ ಅಮರ ದುರ್ಗಣ್ಣವರ, ಅಭಯ ಕೊಪ್ಪ, ಪುಟ್ಟು ಹಿರೇಮಠ, ವಿನೋದ ಶೆಟ್ಟಿ,ನಾರಾಯಣ ಶಟ್ಟಿ,ಶರಥ ಶಟ್ಟಿ,ರಾಘವೇಂದ್ರ ಶೆಟ್ಟಿ,ಸಾಯಿರಾಜ ಶೆಟ್ಟಿ, ಶೇಖರ ಕನಕರೆಡ್ಡಿ, ದೀನೆಶ ಶೆಟ್ಟಿ, ಸಂದೀಪ್ ಶೆಟ್ಟಿ, ಅನಂತ ಪಡನಾಡ, ಪ್ರಕಾಶ ಕೋಳಿ ಸೇರಿದಂತೆ ಎಲ್ಲ ಸಮಾಜದ ಮಹಿಳೆಯರು ಮುಖಂಡರು ಉಪಸ್ಥಿತರಿದ್ದರು.