ಬಳ್ಳಾರಿ ಆ 12 : ನಿಮ್ಮನ್ನು ಡಿಸೇಬಲ್ ಪರ್ಸನ್ಸ್ ಎಂದು ಕರೆಯಲು ನನಗೆ ಮನಸ್ಸಿಲ್ಲ ನೀವು ಡಿಫ್ರೆಂಟ್ಲಿ ಏಬಲ್ಡ್ ಪರ್ಸನ್ ಆಗಿದ್ದೀರಿ ನಿಮಗೆ ವಿಶೇಷವಾದ ಜ್ಞಾನ ಮತ್ತು ಶಕ್ತಿ ಇದೆ ಅದನ್ನು ಬಳಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಸಮರ್ಥನಂ ಅಂಗವಿಕಲರ ಕಲ್ಯಾಣ ಸಂಸ್ಥೆ ವತಿಯಿಂದ ಇಂದು ತಾವು ಪಡೆದಂತ ಸಾಧನ ಸಲಕರಣೆಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರಯತ್ನಿಸಬೇಕೆಂದು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೋಭಾ ರಾಣಿ ವಿ. ಜೆ ಕಿವಿಮಾತು ಹೇಳಿದರು.
ಅವರು ನಗರದ ರಾಕ್ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಸಮರ್ಥನಮ್ ಅಂಗವಿಕಲರ ಕಲ್ಯಾಣ ಸಂಸ್ಥೆ ವತಿ ಮತ್ತು ಮೆಡ್ರಿಚ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ವಿಕಲಚೇತನರ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸಿಇಓ ಮೊಹಮ್ಮದ್ ಹ್ಯಾರಿಸ್ ಮಾತನಾಡಿ, ಎಸ್ಪಿ ಮೇಡಂ ತಿಳಿಸಿದಂತೆ , ನೀವು ಅಶಕ್ತರಲ್ಲ ನಿಮ್ಮ ಪ್ರತಿಯೊಬ್ಬರಲ್ಲಿ ವಿಶೇಷವಾದ ಶಕ್ತಿ ಇದೆ, ನಿಮಗೆ ಯಾರದೇ ಅನುಕಂಪ ಬೇಕಿಲ್ಲ ಅವಕಾಶ ಸಿಕ್ಕಲ್ಲಿ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಲು ಮಾನಸಿಕವಾಗಿ ಗಟ್ಟಿಯಾಗಿದ್ದು ಶಕ್ತರಾಗಿದ್ದೀರಿ, ಎಷ್ಟೋ ಜನ ದೈಹಿಕವಾಗಿ ಸಬಲರಿದ್ದರೂ ಸಹ ಸೋಮಾರಿಗಳಾಗಿ ಕಾಲ ಹರಣ ಮಾಡುತ್ತಿದ್ದಾರೆ ಅಂತವರಿಗೆ ನೀವು ಮಾದರಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪೋಲಾ ರಾಧಾಕೃಷ್ಣ, ನಿತೀಶ್ ಕಟಾರಿಯ ಸಂಗೀತ್ ಶರ್ಮಾ ರೇಣುಕಾದೇವಿ ಕಟಾರಿಯ ಗೌತಮಿ ವಿಶೇಷ ಚೇತನರ ಕಲ್ಯಾಣ ಅಧಿಕಾರಿ ಗೋವಿಂದಪ್ಪ ಸೇರಿದಂತೆ ಇತರರಿದ್ದರು.
ಈ ಸಂದರ್ಭದಲ್ಲಿ ಶಿವರಾಮ ದೇಶಪಾಂಡೆ ಪ್ರಸ್ತಾವಿಕ ಮಾತುಗಳು ನಾಡಿದರು. ಪೊಲೀಸ್ ಅಧೀಕ್ಷಕರು ಸಾಂಕೇತಿಕವಾಗಿ ಕೆಲವರಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು. ಪ್ರೇಮಕುಮಾರಿ ಪ್ರಾರ್ಥಿಸಿದರೆ, ಗೌತಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿಕಲಚೇತನರಿಗೆ ಕ್ಯಾಲಿಪರ್ಸ್ ವೀಲ್ ಚೇರ್, ಊರುಗೋಲು ಕುರ್ಚಿ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು ಸಮರ್ಥನಂ ವಿಕಲಚೇತನರ ಕಲ್ಯಾಣ ಸಂಸ್ಥೆ ವತಿಯಿಂದ ವಿತರಿಸಲಾಯಿತು.