ಯರಗಟ್ಟಿ: ಸಮೀಪದ ತಲ್ಲೂರ ಗ್ರಾಮದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೫೪ನೇಆರಾಧನಾ ಮಹೋತ್ಸವವು ಮೂರು ದಿನಗಳ ಕಾಲ ಶ್ರಧ್ದಾ ಭಕ್ತಿಯಿಂದ ಜರುಗಿತು.ಮುಂಜಾನೆಯಿಂದ ಸುಪ್ರಭಾತ, ಪೂರ್ವಾರಾಧನೆ ಮತ್ತು ಮಧ್ಯಾರಾಧನೆ ಅಂಗವಾಗಿರಾಘವೇಂದ್ರ ಸ್ವಾಮೀಜಿಗೆ ಪಂಚಾಮೃತ, ಅಭಿಷೇಕ, ಫಲ ಪಂಚಾಮೃತ,ಮಹಾನೈವೇದ್ಯ, ಮಹಾ ಮಂಗಳಾರತಿ, ಹೋಮ ಹವನ, ಪೂರ್ಣಾವತಿ
ಅಷ್ಠೋತ್ತರ ಸೇವೆ ಸೇರಿದಂತೆ ಸುಮಂಗಲೆಯರಿಂದ ವಿವಿಧ ಪೂಜೆಗಳು ನೆರವೇರಿದವು.ನಂತರ ರಾಯರಿಗೆ ತುಳಸಿ ಹಾರದೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕಾರಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂದರ್ಭದಲ್ಲಿ ಪ್ರಸನ್ನ ಶಾಸ್ತ್ರಿ ಮಾತನಾಡಿ, ರಾಯರ ಮೇಲೆ ವಿಶ್ವಾಸವಿಟ್ಟು ಭಕ್ತಿಯಿಂದ ಸ್ಮರಿಸಿದರೆ ಎಲ್ಲವು ದೊರಕುತ್ತದೆ. ನಮ್ಮಲ್ಲಿ ಸಮರ್ಪಣಾ ಭಾವ, ಕ್ಷಮಾ ಸ್ವಭಾವ ಅತ್ಯವಶ್ಯ ಎಂದರು. ಸತ್ಯನಾರಾಯಣ ಪೂಜೆಯೊಂದಿಗೆ ಮಹಾಪ್ರಸಾದ ಜರುಗಿತು.
ಉಮಾ ಅಣ್ಣಿಗೇರಿ, ಮಂಜುಳಾ ಮಠಪತಿ, ರಾಜೇಶ್ವರಿ ಅಣ್ಣಿಗೇರಿ, ಮಲ್ಲಮ್ಮ ಕಲ್ಲೂರ, ಆಶಾ ಅಣ್ಣಿಗೇರಿ, ಬಸವ್ವ ಶೀಲವಂತರ, ಭಕ್ತಿ ಅಣ್ಣಿಗೇರಿ, ಜಯಶ್ರೀ ಮಠಪತಿ, ಶ್ರೇಯಾ ಅಣ್ಣಿಗೇರಿ, ಭಾರತಿ ಅಣ್ಣಿಗೇರಿ, ನೀಲವ್ವ ಅಣ್ಣಿಗೇರಿ ಇತರರಿದ್ದರು.