ಹೊಸಪೇಟೆ (ವಿಜಯನಗರ ) : ನಮ್ಮ ಭಾರತ ದೇಶದಲ್ಲಿ ಧಾರ್ಮಿಕ ಭಾವನೆಗಳಿಗೆ ಮತ್ತು ಆಚರಣೆಗೆ ಅದರದ್ದೇ ಆದ ಸ್ಥಾನಮಾನಗಳಿವೆ ಆದರೆ ಅದರೊಳಗಡೆ ಬಹುತೇಕ ಮೂಢ ನಂಬಿಕೆಗಳನ್ನೊಳಗೊಂಡ, ಅವೈಜ್ಞಾನಿಕ ವಾಗಿರುವಂತಹ ಹಲವಾರು ಆಚಾರ, ವಿಚಾರಗಳನ್ನು ಗೊತ್ತಾಗದ ರೀತಿಯಲ್ಲಿ ಬಲವಂತವಾಗಿ ಅನಾಧಿಕಾಲದಿಂದಲೂ, ಶೂದ್ರರ ಬಹುಜನರ ಮೇಲೆ ಹೆರಲಾಗಿತ್ತು. ಇಂದಿಗೂ ಬಹುತೇಕ ಆಚರಣೆಗಳು ಮೌಢ್ಯದಿಂದ ಕೂಡಿವೆ ಎನ್ನುವುದು ಖೇದಕರ ಸಂಗತಿ.
ಪರಂಪರಾಘತವಾಗಿ ಸುಮಾರು 400ವರ್ಷಗಳ ಅನಾಧಿಕಾಲದಿಂದಲೂ ಗ್ರಾಮಕ್ಕೆ ಒಳಿತಾಗುತ್ತದೆ ಎಂದು ನಂಬಿ 5ವರ್ಷಕ್ಕೊಮ್ಮೆ ನಡೆದುಕೊಂಡುಬಂದಿರುವ ಶ್ರೀ ಗುಳೇ ಲಕ್ಕಮ್ಮ ಹಾಗೂ ಶ್ರೀ ಊರಮ್ಮ ದೇವಿಯ ಜಾತ್ರೆಯು ವಿಜಯನಗರ ಜಿಲ್ಲೆಯ, ಮರಿಯಮ್ಮನಹಳ್ಳಿ ಪಟ್ಟಣ ಠಾಣಾ ವ್ಯಾಪ್ತಿಯ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ , ನಾರಾಯಣ ದೇವರ ಕೆರೆ, ಲೋಕಪ್ಪನಲ ಹೊಲ ಗ್ರಾಮದಲ್ಲಿ ದಿನಾಂಕ: 14.05.2024ರಿಂದ 22.05.2024 ರವರೆಗೆ 08ದಿನಗಳ ಕಾಲ ನಡೆಯಿತು.
ಗುಳೇದಲಕ್ಕಮ್ಮ ಮತ್ತು ಊರಮ್ಮ ದೇವಿಯರು ಲೋಕಪ್ಪನಲ ಹೊಲ ಗ್ರಾಮದ ಆರಾಧ್ಯ ದೈವಗಳಾಗಿವೆ. ಈ ದೇವಿಗಳ ಜಾತ್ರೆಗೆ ಕೊನೇದಿನ 22.05.2024ರಂದು ತೆರೆ ಬೀಳುವ ಹಂತ . ಈ ಜಾತ್ರೆಯಲ್ಲಿ 20ಕ್ಕೂ ಹೆಚ್ಚು ಕೋಣ, ಸಾವಿರಾರು ಕುರಿಗಳನ್ನು ದೇವಿಯಮುಂದೆ ಬಲಿಕೊಡಲಾಗುತ್ತದೆ.
ಹಿಂದಿನ ಕಾಲದಲ್ಲಿ ಜಾತಿ ವ್ಯವಸ್ಥೆ ನಡೆದು ಕೊಂಡುಬಂದಂತೆ ಜಾತಿ ಆಧಾರದ ಕಸುಬು ಇಲ್ಲಿ ಮುಂದುವರೆಸಲಾಗಿದೆ. ಈ ಜಾತ್ರೆಯಲ್ಲಿ ಪ್ರಮುಖ ಕಾರ್ಯಗಳನ್ನು ಪರಿಶಿಷ್ಟ ಪಂಗಡದವರು ನೇತೃತ್ವ ವಹಿಸಿ ಮೇಲಿನ ಕೆಲಸಗಳನ್ನು ಮಾಡುತ್ತಾರೆ. ಇನ್ನು ಪರಿಶಿಷ್ಟ ಜಾತಿಯವರು ಕೆಳ ಹಂತದ ಕೆಲಸಗಳಾದ ಬಲಿಕೊಟ್ಟ ಪ್ರಾಣಿಯ ಹೊಟ್ಟೆಯೊಳಗಿಂದ ತೆಗೆದ ‘ಸೆರಗ’ವನ್ನು ಬೆತ್ತಲೆಯಾಗಿ ಲೋಕಪ್ಪನ ಹೊಲ ಗ್ರಾಮದ ಸುತ್ತಲು ಇರಚ್ಚಲು ಬಳಸಿಕೊಳ್ಳಲಾಗುವುದು, ಕಸ ಗುಡಿಸುವುದು, ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವುದು, ಅಡುಗೆಗೆ ಕಟ್ಟಿಗೆ ಸಿಳುವುದು, ದೇವಿಗೆ ನೇಮಿಸಿ ಬಲಿಗೆ ಬಿಡಲಾಗಿರುವ ಕೋಣಗಳನ್ನು ಜಾತ್ರೆಯ ಮುಂಚಿತವಾಗಿ ಹಿಡಿದು ತರುವುದು, ಜಾತ್ರೆಯಲ್ಲಿ ಅವುಗಳ ಶಿರ ಚ್ಚೆಧನ ಮಾಡುವುದು, ಬಲಿಕೊಟ್ಟ ಕೋಣಗಳ ಮಾಂಸ ಕತ್ತರಿಸಿ ಅಡುಗೆ ಮಾಡುವುದು, ಆವರಣ ಸ್ವಚ್ಛ ಗೊಳಿಸುವುದು, ಹೀಗೆ ಹಲವಾರು ಕೆಳ ಹಂತದ ಕೆಲಸಗಳನ್ನು ಮಾಡುವುದು. ಈ ಕೆಲಸ ಕಾರ್ಯಗಳಲ್ಲಿ ಹಿಂದಿನ ಕಾಲದಿಂದ ಬಂದಿರುವ ಪದ್ದತಿಯನ್ನು ಇಂದಿಗೂ ಮುಂದುವರೆಸಲಾಗುತ್ತಿತ್ತು.
ಬೆತ್ತಲೆ ಸೇವೆ : ಬೆತ್ತಲ ಸೇವೆಗೆ ಜಾತ್ರಾ ಪೂರ್ವದಲ್ಲಿ ಮರಿಯಮ್ಮನಹಳ್ಳಿಯ ಪರಿಶಿಷ್ಟ ಜಾತಿಯ ಕುಟುಂಬದ ಒಬ್ಬ ವ್ಯಕ್ತಿಯನ್ನು ಚರಗ ಹೊಯ್ಯಲು ನೇಮಿಸಲಾಗಿರುತ್ತದೆ. ದೇವಿಗೆ ಪ್ರಾಣಿ ಬಲಿ ಕೊಟ್ಟತಕ್ಷಣ ಪ್ರಾಣಿಯ ರಕ್ತ ಮತ್ತು ಹೊಟ್ಟೆಯೊಳಗಿನ ಹುಲುಸು, ಕರುಸುಎಂದು ಹೇಳಲಾಗುವ ವಸ್ತುವನ್ನು ಹಾಗೂ ಇತರೆ ಪದಾರ್ಥಗಳನ್ನು ಕಲಬೆರಕೆ ಮಾಡಿ, ನೇಮಿಸಿರುವ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಆತನ ತಲೆಯಮೇಲೆ ಕಲಬೆರಕೆ ಮಾಡಿರುವ ಹುಲುಸನ್ನು ಹೊರಿಸಿ ಆತನನ್ನು ಯಾರ ಕಣ್ಣಿಗೂ ಕಾಣಿಸದ ಹಾಗೆ ಗ್ರಾಮಕ್ಕೆ ಹುಲುಸನ್ನು ಆತನಿಂದ ಎರಚಿಸುತ್ತಾ ಸಾಗುತ್ತಾರೆ.
ಕೋಣಗಳಿಗೆ ಹಿಂಸೆ – ಬಲಿ : ಜಾತ್ರೆಯ ಒಂದು ವಾರಕ್ಕೂ ಮುಂಚೆ ಕೋಣಗಳನ್ನು ಹಿಡಿದು ತಂದು ಅವುಗಳ ದೇಹದ ಕ್ಷಮತೆಯನ್ನು ಕ್ಷೀಣಿಸಲು ಅವುಗಳಿಗೆ ಮಿತ ಅಹಾರ ಮತ್ತು ಸುಣ್ಣದ ನೀರನ್ನು ಕುಡಿಸಲಾಗುತ್ತದೆ. ಮತ್ತು ಜಾತ್ರೆಯ ಕೊನೇ ದಿನ. ರಾತ್ರಿ 11ಘಂಟೆಗೆ ಸಕಲ ವಾದ್ಯಗಳೊಂದಿಗೆ ಶುರುವಾಗುವ ದೇವಿಯ ಮೆರವಣಿಗೆಯಲ್ಲಿ ಕೋಣ ತರುವಾಗ ಹತ್ತಾರು ಜನ ಕೋಣಗಳ ಕಾಲುಗಳಿಗೆ ಹಗ್ಗಗಳನ್ನು ಕಟ್ಟಿ ಹಿಡಿದು ತಂದು ಅವುಗಳನ್ನು ಮೇಲಕ್ಕೆತ್ತಿ ಭೂಮಿಗೆ ಎಸೆಯುತ್ತಾ , ತಮ್ಮ ಕೈಗಳಿಂದ ಮನಬಂದಂತೆ ಹೊಡೆಯುತ್ತಾ, ಇದೇ ರೀತಿ ಇಡೀ ರಾತ್ರಿ ಅವುಗಳನ್ನು ಹಿಂಸಿಸಿ ಶಕ್ತಿ ಹೀನವನ್ನಾಗಿ ಮಾಡಿ ಕೇಕೆ ಹೊಡೆಯುತ್ತಾ ವಿಜೃಂಭಿಸಿ ಬೆಳಗಿನ ಜಾವ 4:30ರಿಂದ 5:30ರ ಸುಮಾರಿಗೆ ಗ್ರಾಮದ ಹೊರಹೊಲಯದ ಚೌತಿ ಮನೆ ಪಾದಗಟ್ಟಿ ಹತ್ತಿರ ದೇವಿಯ ಮುಂದೆ ಬಲಿ ಕೊಡಲಾಗುತ್ತಿದ್ದುದ್ದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಇಂತಹ ಮೌಢ್ಯತೆ ನಿಷೇದಕ್ಕೆ ಸ್ಥಳೀಯ ಮರಿಯಮ್ಮನಹಳ್ಳಿ ಪಟ್ಟಣದ ನಿವಾಸಿ ಹಾಗೂ ಪತ್ರಕರ್ತ ಲಕ್ಕಿಮರದ ಮಂಜುನಾಥ ಇಂತಹ ಮೌಢ್ಯತೆಗಳನ್ನು ನಿಲ್ಲಿಸಲು ಮುಂದಾಗಿ, ದೇವರ ಹೆಸರಿನಲ್ಲಿ ಜಾತ್ರೆಯಲ್ಲಿ ಅನುಸರಿಸುವ ಪ್ರಾಣಿ ಬಲಿಗೆ ಸಂಬಂದಿಸಿದ ಎಲ್ಲಾ ಅಂಶಗಳನ್ನು ತಿಳಿದು ಅವಲೋಕಿಸಿ, ಇದೊಂದು ಅವೈಜ್ಞಾನಿಕ ಪರಿಕಲ್ಪನೆ ಹಾಗೂ ಕ್ರಿಯೆ ಎಂದು ತಿಳಿದು ಯಾವುದೇ ಜಾತ್ರಾ ಸಂದರ್ಭದಲ್ಲಿ ಪ್ರಾಣಿಬಲಿ ನಡೆಯಬಾರದು, ಎಂದು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈಮೂಲಕ ಪ್ರಯತ್ನಿಸಿದನಾದರೂ ಯಾರೂ ಈ ಯುವಕನ ಮಾತಿಗೆ ಸ್ಪಂದನೆ ಕೊಡಲಿಲ್ಲ.
ತದನಂತರ ಈ ಯುವಕ ಕಾನೂನು ಬಳಸಿಕೊಂಡು ತಡೆಯಲು ಸಾಧ್ಯವೆಂದು ತಿಳಿದು ತನ್ನ ಪ್ರಾಣವನ್ನೇ ಲೆಕ್ಕಿಸದೆ ಪೊಲೀಸ್ ಇಲಾಖೆ, ಮತ್ತು ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಸಂಯಮ ಬೆಳೆಸಿ ಪ್ರಾಣಿಬಲಿ ತಡೆಯಲು ಮುಂದಾದನು. ಜಾತ್ರೆ ಸಂಧರ್ಭದಲ್ಲಿ ದೇವರ ಹೆಸರಿನಲ್ಲಿ ನಡೆಯಲಿರುವ ಪ್ರಾಣಿಬಲಿ ತಡೆಯಲು ಇಲಾಖೆಗಳಿಗೆ ಕೊಟ್ಟಿರುವ ದೂರನ್ನು ಹಿಂಪಡೆಯಲು ಗ್ರಾಮದ ಸುತ್ತಮುತ್ತಲಿನ ನಿವಾಸಿಗಳು ಎಷ್ಟೇ ಒತ್ತಡ ಹೇರಿದರು, ಪ್ರಾಣ ಭಯ ವಿದ್ದರೂ ಲೆಕ್ಕಿಸದೆ ಪ್ರಾಣಿಬಲಿ ತಡೆಯುವಲ್ಲಿ ಯಶಸ್ವಿಯಾದನು.

ನಿಯಮ ಏನು ಹೇಳುತ್ತದೆ : – ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ 1959, ಕರ್ನಾಟಕ ರಾಜ್ಯದ ಹಿಂದೂ ದೇವಾಲಯಗಳಲ್ಲಿ ಅಥವಾ ಅವುಗಳ ಆವರಣಗಳೊಳಗೆ ಸಮೀಪದಲ್ಲಿರುವ, ದೇವಾಲಯಕ್ಕೆ ಸೇರಿರುವ, ಸೇರದಿರುವ ಒಳಗೆ ಅಥವಾ ಹೊರಗೆ ನಡೆಸಲಾಗುವ ಪೂಜೆಗೆ ಸಂಬಂಧಿಸಿದ ಉದ್ದೇಶಗಳಿಗಾಗಿ ಸಾಮಾನ್ಯವಾಗಿ ಉಪಯೋಗಿಸಲಾಗುವ ಮತ್ತು ವಿಶೇಷವಾಗಿ, ದೇವಾಲಯದ ಮಂಟಪಗಳ, ಪ್ರಾಕಾರಗಳ, ಹಿಂದಿನ ಮತ್ತು ಮುಂದಿನ ಅಂಗಣಗಳ ಅವುಗಳನ್ನು ಯಾವುದೇ ಹೆಸರಿನಿಂದ ಕರೆಯಲಿ ಎಲ್ಲ ಭೂಮಿಗಳನ್ನು ಮತ್ತು ಕಟ್ಟಡಗಳನ್ನು ಮತ್ತು ತೇರು ಸಾಮಾನ್ಯವಾಗಿ ನಿಂತಿರುವ ಜಾಗ, ಅಥವಾ ಬೇರೆ ರೀತಿಯ ಮೆರವಣಿಗೆಯಲ್ಲಿ ಒಯ್ಯುತ್ತಿರುವಾಗ, ಅಂಥ ತೇರಿನ ಅಥವಾ ಅಂಥ ದೇವತೆಯ ಸಮೀಪದಲ್ಲಿ ಯಾವುದೇ ಪ್ರಾಣಿಯನ್ನು ಯಾವನೇ ವ್ಯಕ್ತಿಯು ಬಲಿ ಕೊಡತಕ್ಕದ್ದಲ್ಲ. ಎಂದು ಪ್ರತಿಬಂಧಿಸುವ ಅಧಿನಿಯಮ ಹೇಳುತ್ತದೆ.
“ಬಲಿ” ಉದ್ದೇಶ ನಿಷೇದ :- ಯಾವುದೇ ದೇವತೆಯನ್ನು ಒಲಿಸಿಕೊಳ್ಳುವ ಉದ್ದೇಶಕ್ಕಾಗಿ ಅಥವಾ ಆ ಆಶಯದಿಂದ ಯಾವುದೇ ಪ್ರಾಣಿಯನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದುದಾಗಿದೆ.
ಕಾಯ್ದೆಗೆ ಒಳಪಡುವ “ದೇವಾಲಯ” : – ಸಾರ್ವಜನಿಕ ಧಾರ್ಮಿಕ ಪೂಜಾ ಸ್ಥಳವಾಗಿ ಉಪಯೋಗಿಸಲಾಗುತ್ತಿರುವ ಮತ್ತು ಹಿಂದೂ ಸಮುದಾಯಕ್ಕೆ, ಅಥವಾ ಅದರ ಯಾವುದೇ ಪಂಗಡಕ್ಕೆ ಅಥವಾ ಅದರ ಪ್ರಯೋಜನಕ್ಕಾಗಿ ಸಮರ್ಪಿತವಾಗಿರುವ ಅಥವಾ ಹಿಂದೂ ಸಮುದಾಯವು ಅಥವಾ ಅದರ ಯಾವುದೇ ಪಂಗಡವು ಸಾರ್ವಜನಿಕ ಧಾರ್ಮಿಕ ಪೂಜಾಸ್ಥಳವಾಗಿ ಹಕ್ಕಿನಿಂದ ಉಪಯೋಗಿಸಲಾಗುತ್ತಿರುವ, ಯಾವುದೇ ಹೆಸರಿನಿಂದ ಕರೆಯಲಾಗುವ ಸ್ಥಳ, ಮತ್ತು ಇದು ಅಂಥ ಸ್ಥಳಕ್ಕೆ ಹೊಂದಿಕೊಂಡಿರುವ ಉಪ ಪೂಜಾ ಮಂದಿರಗಳು ಹಾಗೂ ಮಂಟಪಗಳನ್ನು ಒಳಗೊಳ್ಳುತ್ತದೆ.
ಬಲಿಗೆ ಅವಕಾಶ ಕೊಡತಕ್ಕದ್ದಲ್ಲ : – ಯಾವನೇ ವ್ಯಕ್ತಿಯು ದೇವಾಲಯದಲ್ಲಿ ಅಥವಾ ದೇವತೆಯ ಸಮೀಪದಲ್ಲಿ ಅದರ ಆವರಣಗಳನ್ನು ಬಲಿಗಾಗಿ ಉಪಯೋಗಿಸಲು ಅವಕಾಶ ಕೊಡತಕ್ಕದ್ದಲ್ಲ, ನೆರವಾಗತಕ್ಕದ್ದಲ್ಲ ಅಥವಾ ಬಾಗವಹಿಸತಕ್ಕದ್ದಲ್ಲ ಅಥವಾ ಸೇವೆ ಸಲ್ಲಿಸಲು, ನೆರವಾಗಲು, ಬಲಿ ಕೊಡುವಲ್ಲಿ ಪೌರೋಹಿತ್ಯ ಮಾಡತಕ್ಕದ್ದಲ್ಲ, ಖಾಸಗಿಯಾಗಿ ತನ್ನ ಸ್ವಾಧೀನದಲ್ಲಿ ಅಥವಾ ತನ್ನ ನಿಯಂತ್ರಣದಲ್ಲಿ ಇರುವ ಯಾವುದೇ ಸ್ಥಳದಲ್ಲಿ, ಬಲಿ ಕೊಡಲು ಅವಕಾಶವನ್ನು ಕೊಡತಕ್ಕದ್ದಲ್ಲ. ಭಾಗವಹಿಸಲು ಮುಂದೆ ಬರತಕ್ಕದ್ದಲ್ಲ ಎಂದು ಕಾನೂನು ಹೇಳುತ್ತದೆ.
ಬಲಿ ಕೊಟ್ಟರೆ ವಾರಂಟಿಲ್ಲದೆ ದಸ್ತಗಿರಿ :ಯಾವನೇ ವ್ಯಕ್ತಿಯು, ದೇವಾಲಯದ ಅಧಿಕಾರಿ, ನೌಕರ, ಪ್ರಾಧಿಕಾರ, ನ್ಯಾಸಧಾರಿ ಅಥವಾ ಪೂಜಾರಿ ಆಗಿದ್ದರೆ, ಅಥವಾ ಪದಾಧಿಕಾರಿಯಾಗಿದ್ದು ದೇವಾಲಯದಲ್ಲಿ ಯಾವುದೇ ಪ್ರಾಣಿ ಬಲಿ ಸೇವೆಯನ್ನು ಸಲ್ಲಿಸುವುದಕ್ಕಾಗಿ ಸಹಕರಿಸಿದರೆ ಸಾಮಾನ್ಯಾ ಅಧಿಕಾರ ಹೊಂದಿದ ಸಬ್ ಇನ್ಸ್‌ಪೆಕ್ಟರನ ದರ್ಜೆಗೆ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಯು ಈ ಅಧಿನಿಯಮದ ಉಪಬಂಧಗಳನ್ನು ಉಲ್ಲಂಘಿಸುವ ಯಾವನೇ ವ್ಯಕ್ತಿಯನ್ನು ವಾರೆಂಟ್ ಇಲ್ಲದೆ ದಸ್ತಗಿರಿ ಮಾಡಬಹುದು. ಮತ್ತು ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ಎಂದು ಕಾನೂನು ಹೇಳುತ್ತದೆ.
ಬಲಿಗೆ ಬುದ್ದಿ ಜೀವಿಗಳ ವಿರೋಧ ಪ್ರಸಂಶೆ : ಊರಿಗೆ ಒಳಿತಾಗುವ ಮತ್ತು ಜಾತ್ರೆಯ ನೆಪದಲ್ಲಿ ಪ್ರಾಣಿಬಲಿ ಸಮಂಜಸ ಅಲ್ಲ ಅದು ಒಂದು ಅವೈಜ್ಞಾನಿಕ ಕಲ್ಪನೆ ಎಂದು ಹಲವಾರು ವಿಮರ್ಶಕರು ತಜ್ಞರು, ಬುದ್ದಿ ಜೀವಿಗಳು, ಪ್ರಾಣಿದಯಾ ಸಂಘದವರು, ಪಶು ವೈದ್ಯರು ಬಲಿಗೆ ವಿರೋದ ವ್ಯಕ್ತ ಪಡಿಸಿ, ಬಲಿ ತಡೆದ ಯುವಕ ಲಕ್ಕಿಮರದ ಮಂಜುನಾಥನನ್ನು ಪ್ರಸಂಶಿದ್ದರು. ವಿಜಯ ನಗರ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಶ್ರೀ ಹರಿಬಾಬು ಮಧ್ಯಸ್ತಿಕೆ ಹಾಗು ಕಠಿಣ ಕಾನೂನಿದಾಗಿ, ಮಂಜುನಾಥ್ ನ ಜೀವ ಉಳಿಯಿತು. ಸ್ವತ್ ಲಾಠಿ ಹಿಡಿದು ಗ್ರಾಮದಲ್ಲಿ ತಿರುಗಾಡಿದ್ದರಿಂದ ಪೊಲೀಸ್ ಭಯ ಜನರಲ್ಲಿ ಮೂಡಿತು. ಇದಕ್ಕಾಗಿ ನಾಲ್ಕು ಪೊಲೀಸ್ ತುಕಡಿ ಗಳು ಬೆತ್ತಲೆ ಸೇವೆ ಪ್ರಾಣಿ ಬಲಿ ತಡೆಯಲು ಬೀಡು ಬಿಟ್ಟಿತ್ತು.
::ಮೌಢ್ಯಗಳ ವಿರುದ್ಧ ಭಾರತದಲ್ಲಿ ಬ್ರಿಟಿಷರ ಪಾತ್ರ::
:: ಭಾರತದಲ್ಲಿ ಶೂದ್ರರು, ಬಡ ಮತ್ತು ಬಹುಜನರ ಮೇಲೆ ಹೇರಿದ್ದ ಮೌಢ್ಯ ದಿಂದ ಮುಕ್ತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಪಾತ್ರ ::
ಭಾರತದಲ್ಲಿ ಮೇಲ್ವರ್ಗದವರು ಶೂದ್ರರ ಬಹುಜನರ ಮೇಲೆ ಮೌಢ್ಯಗಳನ್ನು ಬಲವಂತವಾಗಿ ಹೇರಿ, ನರಕ ದರ್ಶನ ಮಾಡಿ, ಅವರ ನಾಶಕ್ಕೆ ಕಾರಣ ವಾಗಿದ್ದ ಸಂಧರ್ಭದಲ್ಲಿ ಬ್ರಿಟಿಷರ ಆಗಮಾನದ ಕಾಲದಲ್ಲಿ, ಅವರ ಆಡಳಿತದ ಅವಧಿಯಲ್ಲಿ ಶೂದ್ರರ ಬಹುಜನರ ಮೇಲೆ ಮೇಲ್ವರ್ಗದವರು ಮತ್ತು ಬಂಡವಾಳ ಶಾಹಿಗಳು ಮೌಢ್ಯಗಳನ್ನು ಹೇರಿ ದೌರ್ಜನ್ಯ ಎಸಗುತ್ತಿದ್ದುದ್ದನ್ನು ಕಂಡು ಬ್ರಿಟಿಷರು ಹಲವಾರು ಕಾನೂನು ಗಳನ್ನು ಜಾರಿಗೆ ತಂದರು.
ಚರಕ ಪೂಜೆ : ಶೂದ್ರರು, ಬಡ ಮತ್ತು ಬಹುಜನರನ್ನು ಬೃಹತ್ ದೊಡ್ಡ ಕಟ್ಟಡಗಳು, ಆಣೆಕಟ್ಟು ಕಟ್ಟಡಗಳಿಗೆ ಬಲಿ ಕೊಡಲಾಗುತ್ತಿತ್ತು. ಈ ಪದ್ಧತಿಯನ್ನು ಬ್ರಿಟಿಷರು 1863 ರಲ್ಲಿ ನಿಷೇಧ ಮಾಡಿದರು.
ಗಂಗಾ ದಾನ ಪದ್ಧತಿ: ಶೂದ್ರರಿಗೆ ಹುಟ್ಟಿದ ಚೊಚ್ಚಲ ಮೊದಲನೇ ಗಂಡು ಮಗುವನ್ನು ಗಂಗಾ ನದಿಗೆ ಎಸೆಯಬೇಕು ಅಥವಾ ಗಂಗೆಗೆ ಸಮರ್ಪಿಸಬೇಕು ಎನ್ನುವಂತ ಪದ್ಧತಿಯನ್ನು ಪುರೋಹಿತ ಶಾಹಿಗಳು ಹುಟ್ಟುಹಾಕಿ ಬಲವಂತವಾಗಿ ಶೂದ್ರರ ಮೇಲೆ ಹೇರಿದ್ದರು. ಯಾಕೆ ಈ ಪದ್ಧತಿಯನ್ನು ಆಚರಣೆಗೆ ತಂದರು ಎಂದರೆ ಶೂದ್ರ ಮೊದಲ ಮಗು ದಷ್ಟಪುಟ್ಟವಾಗಿ ಶಕ್ತಿಷಾಲಿಯಾಗಿರುತ್ತದೆ ಮುಂದೆ ಒಂದು ದಿನ ಮಗು ಹಾಗೆ ಉಳಿದರೆ ನಮಗೆ ಮಾರಕವಾಗಿ ಬೆಳೆಯುತ್ತದೆ. ತಾಯಿ ಮಾನಸಿಕವಾಗಿ ದುರ್ಬಲಳಾಗುತ್ತಾಳೆ ಆಗ ಎರಡನೇ ಮಗು ಶಕ್ತಿ ಹೀನವಾಗಿ ಬುದ್ದಿ ಹೀನವಾಗಿ ಹುಟ್ಟುತ್ತದೆ ನಮ್ಮ ಆಡಳಿತ ಸುಗಮವಾಗುತ್ತದೆ ಎನ್ನುವ ಕೆಟ್ಟ ಉದ್ದೇಶವನ್ನಿಟ್ಟುಕೊಂಡು ಗಂಗಾಧಾನ ಪದ್ಧತಿಯನ್ನು ಪಾಲಿಸುವಂತೆ ಮಾಡಿದ್ದರು. ಇದನ್ನ ಬ್ರಿಟಿಷರು ಮೊಟ್ಟಮೊದಲ ಬಾರಿಗೆ 1835ರಲ್ಲಿ ನಿಷೇಧ ಮಾಡಿದರು.
.
ಅವರ ಪಾತ್ರ ಹೇಳುವುದಾದರೆ :
ನರಬಲಿ : ಭಾರತದಲ್ಲಿ ಋಗ್ವೇದಿಗಳು ನರಬಲಿ ಆಚರಣೆಯನ್ನು ಮಾಡುತ್ತಿದ್ದಂತಹ ಪದ್ದತಿಯನ್ನು ಬ್ರಿಟಿಷರು 1819 ರಲ್ಲಿ ನರಬಲಿ ನಿಷೇದ ಕಾನೂನನ್ನು ಜಾರಿಗೆ ತಂದರು.
ಅನಾಥವಾಗಿರುವ , ದುರ್ಬಲವಿರುವ ಮಕ್ಕಳನ್ನ ಮತ್ತು ಮನುಷ್ಯರನ್ನು ತಂದು ದೇವರ ಮುಂದೆ ಬಲಿಕೊಡುತ್ತಿದ್ದರು. ಇದು ಒಂದು ಧಾರ್ಮಿಕ ಆಚರಣೆಯಾಗಿ ಮಾಡುತ್ತಿದ್ದರು.
ಶುದ್ದೀಕರಣ ನೆಪದಲ್ಲಿ ಶೂದ್ರ, ಅಸ್ಪೃಶ್ಯ ವರ್ಗದ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಮಾಡಿ, ದೇವರ ಸೇವೆಗಾಗಿ ಬಿಟ್ಟುಬಿಡುವಂತೆ ಮಾಡಿ, ಅವರನ್ನು ಶುದ್ದಿಕರಣ ನೆಪದಲ್ಲಿ ಮೂರುದಿನಗಳ ಕಾಲ ಲೈಂಗಿಕವಾಗಿ ಬಳಸಿಕೊಂಡು ಅವರನ್ನು ಊರ ಹೊರಗೆ ಇಡುತ್ತಿದ್ದರು. ಈ ಪದ್ದತಿಯನ್ನು ಬ್ರಿಟಿಷ್ ಸರಕಾರ 1819ರಲ್ಲಿ, ನಿಷೇದ ಮಾಡಿದರು. ರಾಜ್ಯ ಸರ್ಕಾರ ದೇವದಾಸಿ ಪದ್ಧತಿ ನಿಷೇದ ಮಾಡಲು ಶತಾಯ ಗತಾಯ ಪ್ರಯತ್ನಿಸಿ ಹಲವಾರು ಕ್ರಮಗಳನ್ನು ಕೈಗೊಂಡರೂ ಇನ್ನೂ ಜೀವಂತವಿದೆ ಎನ್ನುವುದೇ ವಿಪರ್ಯಾಸ.
ನರಬಲಿಯ ಬದಲಾಗಿ : 1830ರ ನಂತರ ನರಬಲಿಯ ಬದಲಾಗಿ ದೇವರ ಹೆಸರಿನಲ್ಲಿ ಪ್ರಾಣಿಬಲಿ ಕೊಡುವ ಪದ್ಧತಿ ಪ್ರಚಲಿತಕ್ಕೆ ಬರುತ್ತದೆ. ಸ್ವಾತಂತ್ರದ ನಂತರದಲ್ಲಿ ಸಾರ್ವಜನಿಕವಾಗಿ, ಧಾರ್ಮಿಕವಾಗಿ ಸಮಾವೇಶಗಳಲ್ಲಿ, ಕೋಣ,ಕುರಿ,ಹಾಡು, ಕೋಳಿ ಇತರ ಯಾವುದೇ ಪ್ರಾಣಿ ಪಕ್ಷಿಗಳನ್ನು ಬಲಿಕೊಡದಂತೆ, 1959, 1963, 1975 ಮತ್ತು 2020ರಲ್ಲಿ ಪ್ರಾಣಿ ಬಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆಯನ್ನು ಜಾರಿಗೆ ತರಲಾಗಿದೆ.