ವಿಜಯಪುರ: ಜಿನೀವಾ ಒಪ್ಪಂದಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಹೃದಯವಾಗಿದ್ದು, ಸಶಸ್ತ್ರ ಸಂಘರ್ಷಗಳ ನಡವಳಿಕೆಯನ್ನು ನಿಯಂತ್ರಿಸಿ, ಅದರ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ ಎಂದು ಅಂಜುಮನ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್.ಪ್ರದೀಪ್ ಕುಮಾರ್ ಹೇಳಿದರು.
ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರೆಡ್ ಕ್ರಾಸ್ ಸೆಲ್ ಸಹಯೋಗದಲ್ಲಿ ಅಯೋಜಿಸಲಾದ ಜಾಗತಿಕ ಜಿನಿವಾ ಸಮಾವೇಶ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ವಿಶ್ವ ಜಿನೀವಾ ಒಪ್ಪಂದ ದಿನವನ್ನು ಪ್ರತಿವರ್ಷ ಆಗಸ್ಟ್ ೧೨ ರಂದು ಆಚರಿಸಲಾಗುತ್ತದೆ. ಇದು ೧೯೪೯ರಲ್ಲಿ ಅಂಗೀಕರಿಸಲ್ಪಟ್ಟ ಜಿನೀವಾ ಒಪ್ಪಂದಗಳ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಇವು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಮೂಲಭೂತ ಒಪ್ಪಂದಗಳಾಗಿದ್ದು, ಸಶಸ್ತ್ರ ಸಂಘರ್ಷದ ಸಮಯದಲ್ಲಿ ಹೋರಾಟದಲ್ಲಿ ಭಾಗವಹಿಸದ ಜನರನ್ನು ರಕ್ಷಿಸುವ ಉದ್ದೇಶ ಹೊಂದಿವೆ ಎಂದರು.
ಜೆನೀವಾ ಒಪ್ಪಂದವು ಯುದ್ಧದ ಕ್ರೂರತೆಯನ್ನು ತಗ್ಗಿಸಿ ಮಾನವೀಯತೆ ಕಾಪಾಡುವ ಜಾಗತಿಕ ಒಪ್ಪಂದವಾಗಿದೆ. ಯುದ್ಧದಲ್ಲಿ ಜಯ–ಪರಾಜಯಕ್ಕಿಂತ ಮಾನವೀಯ ಮೌಲ್ಯಗಳೇ ಮುಖ್ಯ ಎಂದು ಹೇಳಿದರು. ಜೆನೆವಾ ಒಪ್ಪಂದ್ ಇತಿಹಾಸ ಮತ್ತು ನಾಲ್ಕು ಪ್ರಮುಖ ಒಪ್ಪಂದಗಳ ಕುರಿತು ವಿವರಿಸಿದರು. ಈ ಒಪ್ಪಂದಗಳು ಇಂದಿಗೂ ಪ್ರಸ್ತುತವಾಗಿವೆ. ಯುದ್ಧಕಾಲದಲ್ಲಿ ಜೀವ ಮತ್ತು ಗೌರವವನ್ನು ರಕ್ಷಿಸಲು ಈ ನಿಯಮಗಳನ್ನು ಅನುಸರಿಸುವ ಅಗತ್ಯವನ್ನು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಒತ್ತಿ ಹೇಳುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಡಾ.ಅನೀಲ.ಭೀ ನಾಯಕ,ಯುಥ್ ರೆಡ್ ಕ್ರಾಸ್ ಮುಖ್ಯಸ್ಥರಾದ ಡಾ.ಅನಿಲ್ ಆರ್. ಪಾಟೀಲ ಸ್ವಾಗತಿಸಿದರು.ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.