ರಾಷ್ಟ್ರದ ಐಕ್ಯತೆ ಮತ್ತು ಅಭಿವೃದ್ದಿಯಲ್ಲಿ ಯುವಕರ ಪಾತ್ರ ಬಹಳ: ಕರ್ನಲ್ ಸುಜನ್ ರಾಯ್

Ravi Talawar
ರಾಷ್ಟ್ರದ ಐಕ್ಯತೆ ಮತ್ತು ಅಭಿವೃದ್ದಿಯಲ್ಲಿ ಯುವಕರ ಪಾತ್ರ ಬಹಳ: ಕರ್ನಲ್ ಸುಜನ್ ರಾಯ್
WhatsApp Group Join Now
Telegram Group Join Now
ಧಾರವಾಡ: ರಾಷ್ಟ್ರದ ಐಕ್ಯತೆ ಮತ್ತು ಅಭಿವೃದ್ದಿಯಲ್ಲಿ ಯುವಕರ ಪಾತ್ರ ಬಹಳ ಇದೆ. ಎಂದು ಕರ್ನಾಟಕ 24  ಎನ್.ಸಿ.ಸಿ ಬಟಾಲಿಯನ್ ಲೆಪ್ಟಿನೆಂಟ್ ಕರ್ನಲ್ ಸುಜನ್ ರಾಯ್ ಹೇಳಿದರು. ಅವರು ಕರ್ನಾಟಕ ಕಾಲೇಜು ಮತ್ತು ಕರ್ನಾಟಕ 24 ಎನ್.ಸಿ.ಸಿ ಬಟಾಲಿಯನ್ ಸಹಯೋಗದಲ್ಲಿ ಸ್ವಾತಂತ್ರೊತ್ಸವದ ಅಂಗವಾಗಿ ನಗರದ ಕೆಲಗೇರಿ ಕೆರೆಯಿಂದ ಕರ್ನಾಟಕ ಕಾಲೇಜಿನ ವರೆಗೆ ಆಯೋಜಿಸಿದ ಐಕ್ಯತೆಗಾಗಿ ಓಟದಲ್ಲಿ ವಿಜೇತರಾದ ಎನ್.ಸಿ.ಸಿ.ಕೆಡೆಟ್ ಗಳಿಗೆ ‌ಪ್ರಶಸ್ತಿ‌ ವಿತರಿಸಿ ಮಾತನಾಡಿದರು.
ರಾಷ್ಟ್ರದ ಅಭಿವೃದ್ಧಿಗೆ ಐಕ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಯುವಕರ ಪಾತ್ರ ಬಹಳ ಇದೆ ಅನೇಕ ಸ್ವತಂತ್ರ ಹೊರಾಟದ ಪರಿಶ್ರಮದಿಂದ ಲಭಿಸಿದೆ. ವಿದ್ಯಾರ್ಥಿಗಳು
ಸ್ವಯಂ ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿರ್ದಿಷ್ಟ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ದೇಶಕ್ಕೆ ರಾಜ್ಯಕ್ಕೆ ಮತ್ತು ಕಲಿತ ಕಾಲೇಜಿಗೆ ಕೀರ್ತಿ ತನ್ನಿರಿ ಎಂದರು.
ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ‌ ಡಾ.ಆಯ್.ಸಿ.ಮುಳಗುಂದ ಮಾತನಾಡಿ ಭಾರತ ಒಂದು ವೈವಿಧ್ಯಮಯ ದೇಶವಾಗಿದೆ. ಇಲ್ಲಿ ಅನೇಕ ಭಾಷೆ, ‌ಸಂಸ್ಕ್ರತಿ, ಜಾತಿ, ಧರ್ಮಗಳ ಹೊಂದಿದ್ದು, ಐಕ್ಯತೆಯನ್ನು ಬಿಂಬಿಸುವ ಯುವ ಸಮುದಾಯದ ಪಾತ್ರ ಬಹಳ ಇದೆ ಎಂದ‌ ಅವರು ಒಂದು‌‌ ಶತಮಾನದ ವರೆಗೆ ಹೋರಾಟದ ಫಲವಾಗಿ ‌ಸ್ವಾತಂತ್ರ್ಯ ಸಿಕ್ಕಿದೆ. ಸ್ವಚ್ಛ ಭಾರತ ಅಂಗವಾಗಿ ನಗರದ ‌ಕೆಲಗೇರಿ ಕರೆಯ ದಡದಲ್ಲಿ ಕರ್ನಾಟಕ 24 ಬಟಾಲಿಯನ್ ಎನ್.ಸಿ.ಸಿ‌ ಕೆಡೆಟ್ಗಳು ಸ್ವಚ್ಛಗೊಳಿಸಿದ್ದು ಕಾರ್ಯಕ್ರಮದ ವಿಶೇಷವಾಗಿದೆ ಎಂದರು.
ಕರ್ನಾಟಕ 24 ಎನ್.ಸಿ.ಸಿ ಬಟಾಲಿಯನ್ ಕರ್ನಲ್ ಅನುಪ್ ಆರ್ ಮಾತನಾಡಿ… ಕರ್ನಾಟಕ 24 ಎನ್.ಸಿ.ಸಿ‌ ಬಟಾಲಿಯನ್ ತನ್ನದೇ ಆದ ವಿಶೇಷತೆ ಹೊಂದಿದೆ. ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಯುವಕರ ಪಾತ್ರ ಬಹಳ ಇದೆ. ಭವಿಷ್ಯದಲ್ಲಿ ಯಾವುದೇ ಹುದ್ದೆಗೆ ಏರಿದರು ಶಿಸ್ತನ್ನು ಜೀವನದಲ್ಲಿ ಅಳವಡಿಕೊಳ್ಳಿ ಸ್ವಾತಂತ್ರೊತ್ಸವದ ಅಂಗವಾಗಿ ಕರ್ನಾಟಕ 24 ಎನ್.ಸಿ.ಸಿ‌ ಬಟಾಲಿಯನ್ ಅನೇಕ‌ ಕಾರ್ಯಕ್ರಮಗಳನ್ನು ಆಯೋಜಿಸಿದೆ. ದೈಹಿಕ ಆರೋಗ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯ ಆಗಿದೆ ಎಂದರು. ಸಂವಿಧಾನದ ಮೌಲ್ಯಗಳನ್ನು ಅರಿಯಬೇಕು ಮತ್ತು ಜೀವನದಲ್ಲಿ ಅಳವಡಿಕೊಳ್ಖಿ ಎಂದ ಅವರು ದೇಶದ ಜವಾಬ್ದಾರಿ ನಾಗರಿಕನಾಗಿ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಐಕ್ಯತೆಗಾಗಿ ಓಟದ ಸ್ಪರ್ಧೆ ಮತ್ತು ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.ಐಕ್ಯತೆಗಾಗಿ ಓಟದ ಸ್ಪರ್ಧೆಯಲ್ಲಿ ವಿಜೇತರಾದ ಎನ್.ಸಿ.ಸಿ.ಕೆಡೆಟ್‍ಗಳಿಗೆ ಪ್ರಮಾಣ ಪತ್ರ ಪದಕ ಬ್ಯಾಗ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಲ್ ವಾಯ್.ಎಸ್.ರಾನಾವತ್ ಕರ್ನಾಟಕ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಡಾ.ವಾಯ್.ಎಸ್. ರಾವುತ, ಕ್ಯಾಪ್ಟನ್ ಮಹೇಶ್, ಡಿಸೋಜಾ, ಕ್ಯಾಪ್ಟನ್ ಮುಲ್ಲಾ, ವಿಜ್ಞಾನ ಕಾಲೇಜಿನ ಎನ್. ಸಿ.ಸಿ ಅಧಿಕಾರಿ‌ ಡಾ.ಸಮೀರ ಛಬ್ಬಿ ಸೇರಿದಂತೆ ಕರ್ನಾಟಕ 24 ಬಟಾಲಿಯನ್ ವಿವಿಧ ಅಧಿಕಾರಿಗಳು ಕರ್ನಾಟಕ 24 ಎನ್.ಸಿ.ಸಿ ಬಟಾಲಿಯನಿನ ವಿವಿಧ ಕಾಲೇಜಿನ ಕೆಡೆಟ್ ಗಳು ಹಾಜರಿದ್ದರು.
WhatsApp Group Join Now
Telegram Group Join Now
Share This Article