ಹಳ್ಳೂರ 09 ಮೂಡಲಗಿ ತಾಲೂಕು ಮುನ್ಯಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಾಯೋಜಿತ ಮೂಡಲಿಗಿ ತಾಲೂಕು ಹಾಗೂ ಬೆಳಕು ಕಣ್ಣಿನ ಆಸ್ಪತ್ರೆ ಮೂಡಲಗಿ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು*
ಕಾರ್ಯಕ್ರಮ ವನ್ನು ಊರಿನ ಹಿರಿಯರಾದ ಶ್ರೀ ಆನಂದ್ ರಾವ್ ನಾಯ್ಕ್, ಡಾ. ಕೆ ಎಚ್ ನಾಗರಾಳ್,* *ಕ್ಷೇತ್ರ ಯೋಜನಾಧಿಕಾರಿಗಳಾದ ರಾಜು ನಾಯಕ್* ರವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮುಖಾಂತರ ಚಾಲನೆ ನೀಡಲಾಯಿತು.
*ನಂತರದಲ್ಲಿ ವೈದ್ಯರಾದ ಡಾ.ಕೆ.ಎಚ್ ನಾಗರಾಳ ಅವರು ಮಾತನಾಡುತ್ತಾ ಕಣ್ಣುಗಳ ಮಹತ್ವ ಮತ್ತು ಕಣ್ಣಿನ ಆರೋಗ್ಯ ರಕ್ಷಣೆ ಬಗ್ಗೆ* ಮಾಹಿತಿ ನೀಡಿದರು.
*ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಯುತ ಆನಂದ್ ರಾವ್ ನಾಯಕ್ ರವರು ಮಾತನಾಡಿ ಆರೋಗ್ಯ ಅತಿ ಅಮೂಲ್ಯವಾದದ್ದು ಆರೋಗ್ಯವಾಗಿ ಇರಬೇಕಾದರೆ* *ನಾವು ಸೇವಿಸುವ ಆಹಾರ ಪದ್ಧತಿಯ ಬಗ್ಗೆ ಗಮನಹರಿಸಬೇಕು. ಕಣ್ಣಿನ ಆರೋಗ್ಯವು ಕೂಡ ಆಹಾರ* *ಪದ್ಧತಿಯ ಮೇಲೆ ಅವಲಂಬಿತವಾಗಿದೆ ಎಂದು ಕಿವಿ ಮಾತನ್ನು ಹೇಳುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ* *ಯೋಜನೆಯು ಸಮುದಾಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ವಿವರಿಸಿ ಪೂಜ್ಯರನ್ನು ಅಭಿನಂದಿಸಿದರು.*
ಕಾರ್ಯಕ್ರಮದಲ್ಲಿ ಬೆಳಕು ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು, ವಲಯದ ಮೇಲ್ವಿಚಾರಕರಾದ ರವಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮಿ, ಸೇವಾ ಪ್ರತಿನಿಧಿ ರೇಣುಕಾ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮನ್ವಯಾಧಿಕಾರಿಗಳು ನಿರೂಪಿಸಿ, ವಂದಿಸಿದರು.
ಸರ್ವ ಇಂದ್ರಿಯಗಳಲ್ಲಿ ಕಣ್ಣು ಅಮೂಲ್ಯವಾದದ್ದು ಆನಂದರಾವ್ ನಾಯ್ಕ್
