ಶಿವಶರಣರ ನುಲಿಯ ಚಂದಯ್ಯ ಜಯಂತಿ ಆಚರಣೆ 

Pratibha Boi
ಶಿವಶರಣರ ನುಲಿಯ ಚಂದಯ್ಯ ಜಯಂತಿ ಆಚರಣೆ 
WhatsApp Group Join Now
Telegram Group Join Now
 ಮುದ್ದೇಬಿಹಾಳ : ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಶಿವಶರಣರ ನುಲಿಯ ಚಂದಯ್ಯನವರ ಜಯಂತಿಯನ್ನು ಆಚರಿಸಲಾಯ್ತು. ಪಟ್ಣದ ತಂಗಡಗಿ ರಸ್ತೆಯಲ್ಲಿರುವ ನುಲಿಯ ಚಂದಯ್ಯನವರ ಸರ್ಕಲ್ ನಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮುಖಾಂತರ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಮೆರವಣಿಗೆ ತಹಶೀಲ್ದಾರ್ ಕಚೇರಿ ಬಳಿ ಸಮಾವೇಶಗೊಂಡಿತ್ತು. ಬಳಿಕ ತಹಶೀಲ್ದಾರ್ ಕಾರ್ಯಾಲಯದಲ್ಲಿ ಪುರಸಭೆ ಅಧ್ಯಕ್ಷ ಮೆಹೆಬೂಬ್ ಗೊಳಸಂಗಿ ಅವರು ಶಿವಶರಣರ ನೂಲಿ ಚಂದಯ್ಯನವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪೂಜೆ ಸಲ್ಲಸಿದರು.
ಇದೇ ವೇಳೆ ಕಸಾಪ್ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಹಾಗೂ ಹುಲಗಪ್ಪ ಭಜಂತ್ರಿ ಅವರು ಮಾತನಾಡಿ ಕಾಯಕ ತತ್ವ ಆದರ್ಶಗಳು ಸರ್ವಕಾಲಕ್ಕು ಪ್ರಸ್ತುತವಾಗಿವೆ. ಅವರ ಜೀವನ ಸಂದೇಶಗಳು ಜನಸಾಮಾನ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶರಣರು ತೋರೊದ ಮಾರ್ಗದಲ್ಲಿ ಸಾಗಬೇಕು ಎಂದರು.
ಇನ್ನು ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ್ ಬಿರಾದಾರ, ಕುಬಾ ಸಿಂಗ್ ಜಾಧವಾ, ಪುರಸಭೆ ಸದಸ್ಯ ಶಿವೂ ಶಿವಪೂಜೆ, ಗೋವಿಂದ ಭಜಂತ್ರಿ, ಸುರೇಶ್ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆ ಬಿ ಜಿ ಮಠ, ಸಂಗಣ್ಣ ವಾಲಿಕಾರ, ದ್ಯಾಮಣ್ಣ ಭಜಂತ್ರಿ, ಹಣಮಂತ ಭಜಂತ್ರಿ, ವೆಂಕಪ್ಪ ಭಜಂತ್ರಿ , ಅಶೋಕ್ ಭಜಂತ್ರಿ, ಮಡಿವಾಳಪ್ಪ ಭಜಂತ್ರಿ, ಚಂದ್ರಶೇಖರ ಬಿಳಬಾವಿ, ಶಿವಕುಮಾರ್ ಭಜಂತ್ರಿ,
ಸಂತೋಷ್ ಭಜಂತ್ರಿ, ಸೇರಿದಂತೆ ಹಲವು ಅಧಿಕಾರಿಗಳು , ಸಮಾಜದ ಗಣ್ಯರು ಉಪಸ್ಥಿತರಿದ್ದರು. ಇನ್ನು ಕಾರ್ಯಕ್ರಮದ ನಿರೂಪಣೆ ವಿ ಎಸ್ ಲಮಾಣಿ ಶಿಕ್ಷಕರ,
ನೆರವೇರಿಸಿದರು.  ಟಾಪ್ ಬ್ಯಾಂಡ್: ನುಲಿಯ ಚಂದಯ್ಯ ಜಯಂತಿ ಆಚರಣೆ ತಹಶೀಲ್ದಾರ್ ಕಾರ್ಯಲದಲ್ಲಿ ಜಯಂತ್ಯೋತ್ಸವಹಲವು ಅಧಿಕಾರಿಗಳು, ಸಮಾಜದ ಗಣ್ಯರು ಭಾಗಿಸ್ಲಗ್: ನುಲಿಯ ಚಂದಯ್ಯ ಜಯಂತಿ ಆಚರಣೆ, ಮೆರವಣಿಗೆ
WhatsApp Group Join Now
Telegram Group Join Now
Share This Article