ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಶನಿವಾರ ತರಬೇತಿ ನಿರತ ವಿಮಾನವೊಂದು ಪತನವಾಗಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರೆಡ್‌ಬರ್ಡ್ ಫ್ಲೈಟ್ ತರಬೇತಿ ಕೇಂದ್ರದ ವಿಮಾನವು, ತರಬೇತಿ ಹಾರಾಟ ಮುಗಿಸಿ ಲ್ಯಾಂಡ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.”ವಿಮಾನವನ್ನು ಹಾರಿಸುತ್ತಿದ್ದಾಗ, ಒಂದು ಟೈರ್‌ಗೆ ಹಾನಿಯಾಗಿರುವುದನ್ನು ಪೈಲಟ್ ಗಮನಿಸಿದರು. ಬಳಿಕ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಪೈಲಟ್ ತುರ್ತು ಲ್ಯಾಂಡಿಂಗ್‌ಗೆ ಪ್ರಯತ್ನಿಸಿದರು. ವಿಮಾನದ ಮುಂಭಾಗದ ಚಕ್ರ ಟಚ್‌ಡೌನ್ ನಂತರ ಕಳಚಿಕೊಂಡಿತು. ವಿಮಾನವು ಟ್ಯಾಕ್ಸಿವೇಯಿಂದ ದಾರಿ ತಪ್ಪಿ ವಿಮಾನ ನಿಲ್ದಾಣದ ಇನ್ನೊಂದು ಬದಿಗೆ ಪ್ರವೇಶಿಸಿತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.