ಘಟಪ್ರಭಾ.ಇಡಿ ವಿಶ್ವದಲ್ಲಿ ಸೋದರ ಭಾವನೆ ಸಹ ಬಾಳ್ವೆಯ ಮಂತ್ರವಾದ ವಸುದೈವ ಕುಟುಂಬ ಎಂಬ ಸೂತ್ರದಿಂದ ಭಾರತ ದೇಶ ಜಗತ್ತಿನ ವಿಶ್ವಗುರು ಆಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಸಂಜಯ ಅಡಕೆ ಹೇಳಿದ್ದರು.
ಅವರು ಘಟಪ್ರಭಾದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ರಾಮ ಪ್ರಭಾತ ಶಾಖೆಯಲ್ಲಿ ನಡೆದ ರಕ್ಷಾ ಬಂಧನ ಉತ್ಸವ ಕಾರ್ಯಕ್ರಮದಲ್ಲಿ ಭೌದ್ಧಿಕ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಚಿದಂಬರೇಶ್ವರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀಕಾಂತ ವಿ ಮಹಾಜನ ಮಾತನಾಡಿ ಆರ್ ಎಸ್ ಎಸ್ ಈ ವರ್ಷ ಶತಮಾನೋತ್ಸವ ವರ್ಷ ಆಚರಿಸಲಿದ್ದು ಹಿರಿಯರೊಂದಿಗೆ ಯುವಕರು ಸಹ ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರೀಯ ಭಕ್ತಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶದ ಬಗ್ಗೆ ಎಲ್ಲೆಡೆ ಜನ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು ಆಶಿಷ್ ಕಾಳೆ ವೈಯಕ್ತಿಕ ಗೀತೆ ಹಾಡಿದರು.
ಹಿರಿಯರಾದ ಸುರೇಶ್ ಪಾಟೀಲ ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳ ಪರಿಚಯ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ದೀಪಕ ಬುಲಬುಲೆ ಮಾಡಿದರು, ರಮೇಶ್ ಕಬಾಡಗಿ ಕಾರ್ಯಕ್ರಮ ನಡೆಸಿಕೊಟ್ಟರು, ಶ್ರೀಕಾಂತ ಬಿ ಕುಲಕರ್ಣಿ, ಬೆಳ್ಳಣ್ಣವರ, ಸುಭಾಷ ಗಾಯಕ್ವಾಡ, ರಾಜು ಕತ್ತಿ, ರಾಘವೇಂದ್ರ ಪತ್ತಾರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.