ನೇಸರಗಿ. ಇಲ್ಲಿಗೆ ಸಮೀಪದ ಮೋಹರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಮೋಹರೆ ಇದರ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವು ಶನಿವಾರದಂದು ಸಮೀಪದ ಮೋಹರೆ ಗ್ರಾಮದಲ್ಲಿ ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರು ಗುದ್ದಲಿ ಪೂಜೆ ನೆರವೇರಿಸುವದರ ಮೂಲಕ ನೂತನ ಪಿಕೆಪಿಎಸ್ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಿ ಕೆ ಪಿ ಎಸ್ ಅಧ್ಯಕ್ಷ ಸುಭಾಸ ಪಾಟೀಲ, ಉಪಾಧ್ಯಕ್ಷ ಸುಭಾಷ ದೇಯಣ್ಣವರ, ಆಡಳಿತ ಮಂಡಳಿ ಸದಸ್ಯರಾದ ಸಂಗಪ್ಪ ಗಡದವರ,ಆನಂದ ಭಾವಿಕಟ್ಟಿ,ಯಲ್ಲಪ್ಪ ಜ್ಯೋತಿ, ಯಶವಂತಗೌಡ ಪಾಟೀಲ,ಯಲ್ಲಪ್ಪ ಜ್ಯೋತಿ, ಮಜೀದ ಫೀರಜಾದೆ,ಲಕ್ಷ್ಮಣ ತಳವಾರ, ಸಂತೋಷ ಕೆಳಗಿನಮನಿ,ಮಹಾದೇವಿ ಪಾಟೀಲ, ಶೋಭಾ ಕುರಬರ,ಮಲ್ಲಪ್ಪ ಕಲಗೂಡಿ, ಕಾರ್ಯನಿರ್ವಾಹಕ ರಾಜು ಮಡಿವಾಳರ, ಡಿಸಿಸಿ ಬ್ಯಾಂಕ್ ನಿರೀಕ್ಷಿಕ ಸುರೇಶ ಮತ್ತಿಕೊಪ್ಪ,ಚನಗೌಡ ಪಾಟೀಲ, ಶಂಕರ ಗಡದವರ,ಶಿವಬಸಪ್ಪ ತಿಗಡಿ,ವಾಸನಗೌಡ ಪಾಟೀಲ,ಶಿವನಪ್ಪ ಇಂಚಲ,ಗಂಗಪ್ಪ ತಳವಾರ ಸೇರಿದಂತೆ ಸಹಕಾರಿ ಬಂದುಗಳು, ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.


