ಬಳ್ಳಾರಿ.ಆ.೦9. ನಗರದ ೨೯ನೇ ವಾರ್ಡಿನ ಬಂಡಿಹಟ್ಟಿ ಸಿದ್ದರಾಮೇಶ್ವರ ಕಾಲೋನಿಯಲ್ಲಿ ನಡೆಯುತ್ತಿರುವ ತೆರೆದ ಚರಂಡಿ ಕಾಮಗಾರಿಗೆ ಸ್ಥಳ ತಪಾಸಣೆ ಇಲ್ಲದೆ ಅಂದಾಜು ಪಟ್ಟಿ ಇಲ್ಲದೆ ಸುಮಾರು ೪೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಿರು ಚರಂಡಿಯನ್ನು ನಿರ್ಮಿಸುತ್ತಿದ್ದಾರೆ ಇದು ಕೇವಲ ಸರ್ಕಾರದ ಹಣ ಪೋಲು ಮಾಡುವ ಅಥವಾ ಕಮಿಷನ್ ಹೊಡೆಯುವ ಹುನ್ನಾರವಾಗಿದೆ ಕೂಡಲೇ ಈ ಕಾಮಗಾರಿಯನ್ನು ರದ್ದು ಪಡಿಸಬೇಕೆಂದು ಬಂಡಿಹಟ್ಟಿ ಪ್ರದೇಶದ ಸಿದ್ಧರಾಮೇಶ್ವರ ಕಾಲೋನಿಯ ಸಾರ್ವಜನಿಕರು ಮಹಾನಗರ ಪಾಲಿಕೆಯ ಆಯುಕ್ತ ಖಲೀಲ್‌ಸಾಬ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.
ಭೀಮ ವಾದ ದಲಿತ ಸಂಘರ್ಷ ಸಮಿತಿಯಿಂದ ವಿವರವಾದ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಗಾದಿಲಿಂಗಪ್ಪ ಮತ್ತು ಪ್ರಸಾದ್, ಬಳ್ಳಾರಿ ನಗರದ ೨೯ನೇ ವಾರ್ಡ್ ನ ಕನಕ ನಗರದಿಂದ ಹೀರಾ ಫಂಕ್ಷನ್ ಅವರಿಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಅದೇ ಕಡಿಮೆ ಅಳತೆ ಇರುವ ಸಿದ್ದರಾಮೇಶ್ವರ ಕಾಲೋನಿಯಲ್ಲಿ ತೆರೆದ ಚರಂಡಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅಲ್ಲಿರುವ ನಿವಾಸಿಗಳು ನಮಗೆ ಈ ತೆರೆದ ಚರಂಡಿ ನಿರ್ಮಾಣದಿಂದ ಕಸ ಕಡ್ಡಿ ಸಂಗ್ರಹಗೊAಡು ಮತ್ತು ಸೊಳ್ಳೆಗಳು ಬರುವ ಸಂಭವವಿದೆ ಇದರಿಂದ ಸಾಂಕ್ರಾಮಿಕ ರೋಗಗಳು ನಮ್ಮ ಪ್ರದೇಶದಲ್ಲಿ ಹರಡುವ ಸಾಧ್ಯತೆ ಇದ್ದು ಈ ತೆರೆದ ಚರಂಡಿಯನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಕೂಡಲೇ ರದ್ದು ಪಡಿಸಬೇಕೆಂದು ಸ್ಥಳೀಯ ನಾಗರಿಕರು ಹಲವಾರು ಬಾರಿ ಸಂಬAಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಮಾಡಿದರು ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಕಮಿಷನ್ ಆಸೆಗಾಗಿ ಈ ಕಾಮಗಾರಿಯನ್ನು ನಡೆಸಲು ಮುಂದಾಗಿದ್ದಾರೆ ಇದರಿಂದ ನಮಗೆ ಯಾವುದೇ ಅನುಕೂಲವಿಲ್ಲ ಅನಾನುಕೂಲವೇ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೂಡಲೇ ರದ್ದುಪಡಿಸಿ ಎಂದು ಒತ್ತಾಯಿಸಿದರು.
ಅಷ್ಟೇ ಅಲ್ಲದೆ ಆ ಪ್ರದೇಶದಲ್ಲಿ ೮ ರಿಂದ ೧೦ ಅಡಿಯ ರಸ್ತೆ ಇದ್ದು ಕಿರಿದಾಗಿ ಜನ ಓಡಾಡಲು ತೊಂದರೆ ಆಗುತ್ತದೆ ಈಗಲೇ ನಾಲ್ಕು ಚಕ್ರದ ವಾಹನ ಮತ್ತು ಲಗೇಜ್ ಆಟಗಳು ಶಾಲೆಗೆ ಬರುವ ಬಿಸಿ ಊಟದ ವಾಹನಗಳು ಹಾಗೂ ಆಂಬುಲೆನ್ಸ್ ಹೋಗಲು ಪ್ರಯೋಜನವಾಗುತ್ತಿಲ್ಲ ಈಗ ತೆರೆದ ಚರಂಡಿಗಳು ನಿರ್ಮಾಣ ಮಾಡಿದರೆ ೫_೬ ಅಡಿಗಳು ಮಾತ್ರ ಉಳಿದು ಇನ್ನಷ್ಟು ಕಷ್ಟವಾಗುತ್ತದೆ ಇದನ್ನೆಲ್ಲ ಪ್ರಶ್ನಿಸಿ ಅಲ್ಲಿನ ವಾಸಿಗಳು ಕೇಳಿದಾಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅದಕ್ಕೆ ಸಂಬAಧಿಸಿದ ದಾಖಲಾತಿಗಳನ್ನು ಕೊಟ್ಟಿರುತ್ತಾರೆ ಆ ದಾಖಲಾತಿಗಳ ಪ್ರಕಾರ ಬಂಡಿಹಟ್ಟಿ ನಗರದ ನಾಗಪ್ಪ ಕಟ್ಟೆಯಿಂದ ಹೀರಾ ಫಂಕ್ಷನ್ ಹಲ್ ವರೆಗೂ ವರ್ಕ್ ಆರ್ಡರ್ ಆಗಿರುತ್ತದೆ ಆದರೆ ಲೋಕೋಪಯೋಗಿ ಇಲಾಖೆಯವರು ಸಿದ್ದರಾಮೇಶ್ವರ ಕಾಲೋನಿಯಲ್ಲಿ ಅನಾವಶ್ಯಕವಾಗಿ ಕಾಮಗಾರಿಕೆ ಕೆಲಸವನ್ನು ಮಾಡುತ್ತಿದ್ದಾರೆ ಇದಕ್ಕೆ ಸಂಬAಧಿಸಿದ ಗ್ರಾಮ ನಿವಾಸಿಗಳು ಕಾಮಗಾರಿಕೆ ರದ್ದುಪಡಿಸಬೇಕೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಗೆ ಕೆಲಸವನ್ನು ಮಾಡಲು ಅನುಮತಿ ಕೊಟ್ಟಿರುವುದು ನಾಗಪ್ಪ ಕಟ್ಟೆಯಿಂದ ಹೀರಾ ಫಂಕ್ಷನ್ ಹಾಲ್ ವರೆಗೆ ಮಾತ್ರ ಎಂದು ನಮಗೆ ತಿಳಿಸಿರುತ್ತಾರೆ ಹಾಗೂ ಆಯುಕ್ತರು ಕೂಡಲೇ ಅವರಿಗೆ ನೋಟಿಸ್ ಅನ್ನು ಕಳಿಸಲು ಕೂಡ ತಿಳಿಸಿರುತ್ತಾರೆ ಆದ್ದರಿಂದ ಕೂಡಲೇ ರಸ್ತೆ ಕಾಮಗಾರಿಯನ್ನು ತಡೆಯಬೇಕೆಂದು ಜಿಲ್ಲಾ ಸಂಚಾಲಕರಾದ ಗಾದಿಲಿಂಗಪ್ಪ ಹಾಗೂ ಸಂಘಟನಾ ಸಂಚಾಲಕರದ ಪ್ರಸಾದ್ ರವರು ಪಾಲಿಕೆ ಆಯಿತರಲ್ಲಿ ಮನವಿ ಮಾಡಿದ್ದಾರೆ.


