ನೇಸರಗಿ. ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ನಾಲ್ಕು ಭಾರಿ ಜಿಲ್ಲಾ ಪಂಚಾಯತ ಸದಸ್ಯರು, ಎರಡು ಸಲ ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿದ್ದ ಜನ ಮೆಚ್ಚುಗೆಯ ನಾಯಕ ವೀರನಗೌಡ ವಾಸನಗೌಡ ಪಾಟೀಲ ಇವರು ಶುಕ್ರವಾರ ದಿ. 08-08-2025 ರಂದು ನಿಧನರಾದರು.ಮೃತರ ಅಂತ್ಯಕ್ರಿಯೆಯು ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ನೆರವೇರಿತು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಅಪಾರ ಬಂದುಗಳನ್ನು ಅಗಲಿದ್ದಾರೆ.
ವೀರನಗೌಡ ಪಾಟೀಲ ನಿಧನಕ್ಕೆ ಶೋಕ. ಮಾಜಿ ಜಿ ಪಂ. ಉಪಾಧ್ಯಕ್ಷರಾದ ವೀರನನಗೌಡ ಪಾಟೀಲ ನಿಧನಕ್ಕೆ ನೇಸರಗಿ ಮಲ್ಲಾಪುರ ಕೆ ಎನ್ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ,ನೇಸರಗಿ ಪಿ ಕೆ ಪಿ ಎಸ್ ಅಧ್ಯಕ್ಷ ಆರ್ ಎಮ್ ಯತ್ತಿನಮನಿ, ಮುಖಂಡ ಸಚಿನ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಆಡಿವಪ್ಪ ಮಾಳಣ್ಣವರ, ಎಸ್ ಎಮ್ ಪಾಟೀಲ, ಮಹಾಂತೇಶ ಮೋಹರೆ, ಅಡಿವಪ್ಪ ಹೊಸಮನಿ ಸೇರಿದಂತೆ ಈ ಭಾಗದ ಅನೇಕ ಅಭಿಮಾನಿಗಳು, ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.


