ಧಾರವಾಡ: ಕರ್ನಾಟಕ ಕಾಲೇಜು ದೇಶದಲ್ಲೇ ಒಂದು ಶ್ರೇಷ್ಠ ಶಿಕ್ಷಣ ಸಂಸ್ಥೆ ಆಗಿದ್ದು, ತನ್ನದೇ ಆದ ವಿಶಿಷ್ಠವಾದ ಇತಿಹಾಸವನ್ನು ಹೊಂದಿದೆ ಇದನ್ನು ಉತ್ತರ ಕರ್ನಾಟಕದ ಪಾಲಿಗೆ ಕರ್ನಾಟಕ ಕಾಲೇಜು ಟೆಂಪಲ್ ಆಫ್ ಲರ್ನಿಂಗ್ ಆಗಿದೆ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಆಯ್.ಸಿ.ಮುಳಗುಂದ ಹೇಳಿದರು.
ಅವರು ಕರ್ನಾಟಕ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ರೊದ್ದ ಶ್ರೀನಿವಾಸರಾವ್, ಅರಟಾಳ ರುದ್ರಗೌಡ ಮತ್ತು ಸರ್ ಸಿದ್ದಪ್ಪ ಕಂಬಳಿ ಪ್ರತಿಭೆಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕರ್ನಾಟಕ ಕಾಲೇಜು ತನ್ನದೇ ಆದ ಇತಿಹಾಸ ಹೊಂದಿದ್ದು, ರೊದ್ದ ಶ್ರೀನಿವಾಸರಾವ್, ಅರಟಾಳ ರುದ್ರಗೌಡ ಮತ್ತು ಸರ್ ಸಿದ್ದಪ್ಪ ಕಂಬಳಿ ಅವರು ಕರ್ನಾಟಕ ಕಾಲೇಜಿನ ನಿರ್ಮಾತೃರಾಗಿದ್ದು, ಬ್ರಿಟಿಷ್ ಸರ್ಕಾರದ ಆದೇಶದ ಅನುಗುಣವಾಗಿ ಎರಡು ಲಕ್ಷ ಠೇವಣಿಯೊಂದಿಗೆ ಕರ್ನಾಟಕ ಕಾಲೇಜಿನ ಸ್ಥಾಪನೆಗೆ ಮುನ್ನುಡಿ ಬರೆದರು. ಹಲವರು ಅನೇಕರು ಕರ್ನಾಟಕ ಕಾಲೇಜಿನ ಸ್ಥಾಪನೆಗೆ ದೇಣಿಗೆ ನೀಡಿದರು. ಕೇವಲ ದಾನಿಗಳು ಮಾತ್ರವಲ್ಲದೆ ಉತ್ತರ ಕರ್ನಾಟಕದ ಅನೇಕ ನಾಟಕ ಕಂಪನಿಗಳು ದೇಣಿಗೆ ನೀಡಿದವು ಅವುಗಳಲ್ಲಿ ಗಂಧರ್ವ ನಾಟಕ ಕಂಪನಿ 409 ರೂಪಾಯಿಗಳನ್ನು ದಾನ ನೀಡಿದ್ದು ವಿಶೇಷ ಎಂದರು.
ಕರ್ನಾಟಕ ವಿಜ್ಞಾನ ಕಾಲೇಜು ಸ್ಥಾಪಿಸುವಲ್ಲಿ ಸರ್.ಸಿದ್ದಪ್ಪ ಕಂಬಳಿ ಪಾತ್ರ ಬಹಳ ಇದೆ ಎಂದ ಅವರು ಕರ್ನಾಟಕ ಕಾಲೇಜಿನ ವಿ.ಕೃ.ಗೋಕಾಕ ಮತ್ತು ಗಿರೀಶ ಕಾರ್ನಾಡ ಜ್ಞಾನ ಪೀಠ ಪಡೆದುಕೊಂಡಿದ್ದು ಕರ್ನಾಟಕ ಕಾಲೇಜಿನ ವಿಶೇಷ ಎಂದ ಅವರು ಉತ್ತರ ಕರ್ನಾಟಕದಲ್ಲೇ ವಿಶಿಷ್ಠವಾದ ವಿಷಯಗಳನ್ನು ಇಲ್ಲಿ ಬೋಧಿಸಲಾಗುತ್ತದೆ.ಕರ್ನಾಟಕ ಕಾಲೇಜು ಕಲಾ, ವಿಜ್ಞಾನ ಮತ್ತು ಸಂಗೀತ ಕಾಲೇಜುಗಳ ಕ್ಯಾಂಪಸ್ ಗಳನ್ನು ಹೊಂದಿದೆ. ಕರ್ನಾಟಕ ಕಾಲೇಜಿನ ಕಟ್ಟಡ ವಿಶಿಷ್ಟವಾಗಿದ್ದು, ಇದು ಪಾರಂಪರಿಕ ಕಟ್ಟಡವಾಗಿದೆ ಮುಂದಿನ ದಿನಗಳಲ್ಲಿ ಕರ್ನಾಟಕ ಕಾಲೇಜಿನ ಕಟ್ಟಡವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಕರ್ನಾಟಕ ವಿಜ್ಞಾನ ಕಾಲೇಜಿನ ಎಂ.ಎಸ್.ಸಾಳುಂಕೆ ಕರ್ನಾಟಕ ಕಾಲೇಜು ಪ್ರಾರಂಭದಲ್ಲಿ ಟ್ರೇನಿಂಗ್ ಕಾಲೇಜಿನಲ್ಲಿ ಪ್ರಾರಂಭಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಅಡಿಯಲ್ಲಿ ಪ್ರವೇಶ ಪಡೆಯುತ್ತಾರೆ. ವಿದ್ಯಾರ್ಥಿಗಳು ಸಮಾಜದ ಉತ್ತಮ ನಾಗರಿಕರಾಗಿ ನಾಡಿನ ಸಂಸ್ಕೃತಿ ಪರಂಪರೆಯನ್ನು ಉಳಿಸಿರಿ ಎಂದರು.
ಕರ್ನಾಟಕ ಕಲಾ ಕಾಲೇಜಿನ ಜಿಮಖಾನಾದ ಉಪಾಧ್ಯಕ್ಷರಾದ ಡಾ.ಮಹಾದೇವಿ ಹಿರೇಮಠ, ಡಾ.ಜಗದೀಶ್ ಗುಡಗೂರ, ಡಾ.ಜಿ.ಎಚ್.ಮಳಿಮಠ, ಡಾ. ಎಂ.ಬಿ.ದಳಪತಿ, ಡಾ.ಸುರೇಶ ಹುಲ್ಲನ್ನವರ, ಡಾ.ರಜನಿ.ಹೆಚ್.ಡಾ.ಒ.ಕೊಟ್ರೇಶ, ಡಾ.ಜೋನ್ ಮಾಡ್ತಾ, ಡಾ.ಎಸ್.ಜಿ.ಜಾಧವ್, ಡಾ.ಎ.ಸಿ ಕುರಹಟ್ಟಿ,ಡಾ.ವಾಮದೇವ ತಳವಾರ. ಡಾ.ಮಂಗಳವೇಡಿ, ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಜರಿದ್ದರು.