ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಐಕೂರಿನ ಲಿಟಲ್ ಏಂಜಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಶಾರದಹಳ್ಳಿಯ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಐಕೂರಿನ ಮಾತೋಶ್ರೀ ಗಂಗಮ್ಮ ಗಂ. ದಿ. ಸೂಗಣ್ಣ ಸಾಹು ವಾರದ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಗಳ ಸಹಯೋಗದಡಿ “ಹಸಿರು ಭೂಮಿ ಆಂದೋಲನ” ದ ತೃತಿಯ ಕಾರ್ಯಕ್ರಮದ ನಿಮಿತ್ತ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಗಳ ಅಧ್ಯಕ್ಷರುಗಳಾದ ಸಂತೋಷ ಎಂ. ಆಚಾರ್ಯ ಶಾರದಹಳ್ಳಿ ಮತ್ತು ಮಹೇಶ ಎಸ್. ವಾರದ ಹಾಗೂ ಶಾಲೆಯ ಅಧ್ಯಕ್ಷರಾದ ಶಂಕರ ಪೂಜಾರಿ ಐಕೂರು, ಬಾಲರಾಜ ಎಂ. ವಿಶ್ವಕರ್ಮ ಅರಳಗುಂಡಗಿ, ಐಕೂರಿನ ಗ್ರಾಮಸ್ಥರಾದ ಅಂಬ್ರೀಶ್ ಗುಂಡಯ್ಯ, ಮುದಕಪ್ಪ ಪೂಜಾರಿ ಉಪಸ್ಥಿತರಿದ್ದರು.