ಎಂ. ಕೆ. ಹುಬ್ಬಳ್ಳಿ: ಪಟ್ಟಣದ ಬೈಲಹೊಂಗಲ ರಸ್ತೆಗೆ ಹೊಂದಿಕೊಂಡಿರುವ ಅನುಭವ ಮಂಟಪದಲ್ಲಿ ರವಿವಾರ ಮುಂಜಾನೆ 09ಕ್ಕೆ ಗಾನಯೋಗಿ ಪಂಡಿತ ದಿ. ದುಂಡಯ್ಯ ಪ. ಹಿರೇಮಠ ಅವರ ಜನ್ಮ ಶತಮಾನೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗಂದಿಗವಾಡ ರಾಜಗುರು ಸಂಸ್ಥಾನ ಹಿರೇಮಠದ ಶ್ರೀ ಮೃತ್ಯಂಜಯ ಸ್ವಾಮೀಜಿ ವಹಿಸಲಿದ್ದಾರೆ. ದಂತ ವೈದ್ಯ ಡಾ. ಜಗದೀಶ ಹಾರುಗೋಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಶಿಕ್ಷಕ ಶಿವಬಸಯ್ಯ ಗಂಗಾಧರಮಠ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಪಟ್ಟಣದ ಗಂಗಾಂಭಿಕಾ ಟ್ರಸ್ಟ್ ಕಮೀಟಿ ಅಧ್ಯಕ್ಷ ಜಿ. ಸಿ. ಕೋಟಗಿ, ಬೆಳಗಾವಿ ಆರ್. ಎನ್. ಎಸ್ ಪಾಲಿಟೆಕ್ಣಿಕ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಶಶಿಧರಯ್ಯ ಹಿರೇಮಠ, ಅಳ್ನಾವರ ಎಸ್. ಡಿ. ದೇಗಾವಿಮಠ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹೈದರಾಬಾದ್ ಶಹನಾಯಿ ವಾದಕ ರುದ್ರೇಶ ಭಜಂತ್ರಿ, ಧಾರವಾಡ ಆಕಾಶವಾಣಿ ತಬಲಾ ವಾದಕ ಪಂ. ಶಾಂತಲಿಂಗ ದೇಸಾಯಿ, ಹಿಂದೂಸ್ಥಾನಿ ಗಾಯಕಿ ಐಶ್ವರ್ಯ ದೇಸಾಯಿ, ಹಾರ್ಮೋನಿಯಂ ವಾದಕ ವಿನೋದ ಪಾಟೀಲ, ಎಂ. ಕೆ. ಹುಬ್ಬಳ್ಳಿ ಜೀ ಕನ್ನಡ ಸರಿಗಮಪದ ಸುಜಾತಾ ಸಣ್ಣಕ್ಕಿ, ಅಳ್ನಾವರ ಶಾಂಭಾವಿ ಮತ್ತು ಪ್ರಣವ ದೇಗಾವಿಮಠ ಮತ್ತು ಸ್ವರಾಲಯ ಸಂಗೀತ ಪಾಠ ಶಾಲೆಯ ಮಕ್ಕಳು ಹಾಗೂ ಗುರುಗಳ ಶಿಷ್ಯ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.