ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ: ಎಲ್.ಆರ್. ಕನಕಪ್ಪನವರ

Ravi Talawar
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ: ಎಲ್.ಆರ್. ಕನಕಪ್ಪನವರ
WhatsApp Group Join Now
Telegram Group Join Now

ರಾಮದುರ್ಗ: ಮಕ್ಕಳು ಪಠ್ಯದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕ ಸದೃಢತೆಯಿಂದ ಬೆಳೆಯುತ್ತಾರೆ. ಕ್ರೀಡಾಕೂಟಗಳು ಸೌಹಾರ್ದತೆ, ಆತ್ಮಸ್ಥೈರ್ಯ, ಶಿಸ್ತು ಬೆಳೆಸುವದರ ಜೋತೆಗೆ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ವೃದ್ದಿಸುತ್ತವೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಆರ್. ಕನಕಪ್ಪನವರ ಹೇಳಿದರು.

ತಾಲೂಕಿನ ಕಮಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಹಮ್ಮಿಕೊಂಡ ಹೊಸಕೋಟಿ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲೆಯೇ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾಗವಹಿಸುವ ಗುರಿ ಇಟ್ಟುಕೊಂಡು ಪರಿಶ್ರಮ ಪಡಬೇಕೆಂದು ತಿಳಿಸಿದರು.

ಕಮಕೇರಿ ಸಂಗಮೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಗೋವಿಂದಪ್ಪ ಅರಕೇರಿ ಅಧ್ಯಕ್ಷತೆ ವಹಿಸಿದ್ದರು.ಹೊಸಕೋಟಿ ಸಿಆರ್‌ಪಿ ಅಧಿಕಾರಿ ಪಿ.ಎಲ್.ನಾಯ್ಕ, ಹೊಸಕೋಟಿ ಗ್ರಾ.ಪಂ ಸದಸ್ಯರಾದ ರಂಗಪ್ಪ ಕೊಳಚಿ, ಕೃಷ್ಣಾ ಉದಪುಡಿ, ಗಿರೀಶ ಲಂಟೋಟಿ, ಅರುಣ ಪಾಟೀಲ, ಸದಾಶಿವ ಸೋರಗಾವಿ, ಕೆ.ಎಂಎಫ್ ಅಧ್ಯಕ್ಷ ಹನಮಂತಗೌಡ ಪಾಟೀಲ, ಉಪಾಧ್ಯಕ್ಷ ನಿಂಗಪ್ಪ ಹಂಪಿಹೊಳಿ, ಬಸವರಾಜ ಅರಕೇರಿ, ವೆಂಕಪ್ಪ ಬಿರಾದರ, ನಿವೃತ್ತ ಶಿಕ್ಷಕ ಎ.ಜಿ.ಪಾಟೀಲ, ದೈಹಿಕ ಶಿಕ್ಷಕರಾದ ಎ.ಎಸ್.ಗಾಣಗಿ, ಎಸ್.ಆರ್.ಮಿರ್ಜಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಆರ್.ವೈ.ಮೆಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿ.ಆರ್.ದಂಡಿನದುರ್ಗಿ ಹಾಗೂ ಎಸ್.ಆರ್.ತೊರಗಲ್ ನಿರೂಪಿಸಿದರು, ಎಚ್.ಆರ್.ಭಜಂತ್ರಿ ವಂದಿಸಿದರು.

 

WhatsApp Group Join Now
Telegram Group Join Now
Share This Article