ರಾಮದುರ್ಗ: ಕೈಮಗ್ಗ ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆಯ ಬೆಲೆ ಇಲ್ಲದೆ ಶೋಚನಿಯ ಸ್ಥಿತಿಯಲ್ಲಿದ್ದಾರೆ. ಕೈಮಗ್ಗ ನೇಕಾರರ ಹಿತಾಸಕ್ತಿಯನ್ನು ರಕ್ಷಿಸಲು ಸರಕಾರ ಮುಂದೆ ಬರಬೇಕಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ| ಕೆ.ವಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಕೈಮಗ್ಗ ನೇಕಾರ ಮಹಿಳಯರನ್ನು ಸನ್ಮಾನಿಸಿ ಮಾತನಾಡಿದ ಅವರು, ತಂತ್ರಜ್ಞಾನದ ಯುಗದಲ್ಲಿ ಕೈಮಗ್ಗ ನೇಕಾರಿಕೆಗೆ ಉತ್ತೇಜನ ನೀಡುವುದು ಅಗತ್ಯವಿದೆ ಎಂದರು.
ಕೈಮಗ್ಗ ನೇಕಾರ ಮಹಿಳೆಯರಾದ ರಾಧಿಕಾ ಬಲಕುಂದಿ, ಶಕುಂತಲಾ ಮುಗಳಿ, ಈರಮ್ಮ ತೊರಗಲ್ಲ, ಇಂದ್ರಮ್ಮ ಬಸರಗಿ, ರತ್ನಾ ಕಡಕೋಳ, ಶೋಭಾ ಕೊಡ್ಲಿವಾಡ, ತಾರಾ ನಾಗರಾಳ, ಮಹಾದೇವಿ ಶಿರಸಂಗಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಶಾಲಿನಿ ಈಳಗೇರ, ಮುಖಂಡರಾದ ಜನಕರಡ್ಡಿ ಹಕಾಟಿ, ಮಾರುತಿ ಕೊಪ್ಪದ, ದ್ಯಾವಪ್ಪ ಬೆಳವಡಿ, ರಾಧಿಕಾ ಧೂತ, ಮಂಜುಳಾ ಅಕ್ಕನ್ನವರ, ರುದ್ರಮ್ಮ ಕಲ್ಲೂರ, ಶೇಖವ್ವ ಕಲ್ಲೂರ, ಲಕ್ಷ್ಮವ್ವ ರಾಗದ, ಅಕ್ಷತಾ ನಂದರಗಿ, ರತ್ನಾ ಬಸರಗಿ, ಮಂಜುಳಾ ಗಂಟಿ, ವಿಜಯಲಕ್ಷ್ಮೀ ಬಸರಗಿ, ನೇತ್ರಾವತಿ ಬಸರಗಿ, ಭಾಗೀರಥಿ ಬಸರಗಿ, ಅನ್ನಪೂರ್ಣಾ ಹೂಲಮನಿ, ಸಾವಿತ್ರಿ ಕಡಕೋಳ, ಉಮಾ ಬಸರಗಿ, ತಿಪ್ಪವ್ವ ಹಕ್ಕಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.