ಪ್ರತಿಯೊಬ್ಬರ ಶರೀರದಲ್ಲಿ ದೇವರು: ಡಾ. ರಾಜೇಂದ್ರ ಶಿವಯೋಗಿ ಮುತ್ಯಾ

Ravi Talawar
ಪ್ರತಿಯೊಬ್ಬರ ಶರೀರದಲ್ಲಿ ದೇವರು: ಡಾ. ರಾಜೇಂದ್ರ ಶಿವಯೋಗಿ ಮುತ್ಯಾ
WhatsApp Group Join Now
Telegram Group Join Now

ರಾಮದುರ್ಗ: ಪ್ರತಿಯೊಬ್ಬರ ಶರೀರದಲ್ಲಿ ದೇವರು ಆತ್ಮನಾಗಿ ನೆಲೆಸಿದ್ದು, ಸತತ ದ್ಯಾನ, ಚಿಂತನೆಯ ಸಾಧನೆಯಿಂದ ಮಹಾತ್ಮರಾಗಿ ನಿಸರ್ಗ ನಿಯಮವನ್ನು ಮೀರುವ ಶಕ್ತಿ ಹೊಂದಿರುತ್ತಾರೆ ಎಂದು ಡಾ. ರಾಜೇಂದ್ರ ಮುತ್ಯಾರು ಪುಣ್ಯಾಶ್ರಮ ಸೇವಾ ಟ್ರಸ್ಟ್‌ನ ಶ್ರೀ ಡಾ. ರಾಜೇಂದ್ರ ಶಿವಯೋಗಿ ಮುತ್ಯಾ ಅಣ್ಣಾನವರ ಹೇಳಿದರು.

ಪಟ್ಟಣದ ಮಹಾಂತೇಶ ನಗರದ ದಾಂಗುಡಿಯಲ್ಲಿ ಜರುಗಿದ ಶ್ರೀ ಬಸವರಾಜ ಮುತ್ಯಾರ ಆಚರಣೆಯ ೨೭ನೇ ಲಿಂಗಾನಂದ ಮಹೋತ್ಸವ, ಅನುಭಾವ ಚಿಂತಣೆ, ವಿದ್ಯಾರ್ಥಿಗಳಿಗೆ ವಸ್ತ್ರಧಾನ, ಲಾಯದಗುಂದಿ ಮಲ್ಲಯ್ಯ ಮುತ್ಯಾರ ಪ್ರಶಸ್ತಿ ಪ್ರಧಾನ ಹಾಗೂ ದಂಪತಿಗಳ ಅಮೃತ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರತಿಯೊಬ್ಬರಿಗೂ ಆತ್ಮ ಜ್ಞಾನದ ಸಾಕಾರವಾಗಬೇಕಾದರೆ ಆಧ್ಯಾತ್ಮದ ಮೂಲಕವೆ ಸಾಧ್ಯವಿದ್ದು, ಸಂಸ್ಕೃತಿ ಪರಂಪರೆಯನ್ನು ಇಂದಿನ ಪೀಳಿಗೆಗೆ ತಿಳಿಸಿ ಮುಂದುವರೆಸಬೇಕಾದದ ಅಗತ್ಯತೆ ಇದೆ ಎಂದು ಹೇಳಿದರು.
ಡಾ. ರಾಜೇಂದ್ರ ಮುತ್ಯಾರು ಪುಣ್ಯಾಶ್ರಮ ಸೇವಾ ಟ್ರಸ್ಟ್ ವತಿಯಿಂದ ಸಾಲಹಳ್ಳಿಯ ಅಯ್ಯಪ್ಪಯ್ಯ ಗುರುಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಸನ್ಮಾರ್ಗಿ ಪ್ರಶಸ್ತಿ, ಇಲಕಲ್ಲದ ಶ್ರೀ ಪಂಚಾಕ್ಷರಿ ಸೋಮಣ್ಣಾ ಲಿಂಗಸೂರ ಗವಾಯಿಗಳಿಗೆ ರಾಜೇಂದ್ರ ಪ್ರಶಸ್ತಿ ಹಾಗೂ ರೋಣದ ಅನ್ನಪೂರ್ಣಾದೇವಿ ಗುರುಪಾದಗೌಡ ಪಾಟೀಲ ಅಕ್ಕಮಹಾದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಶ್ರೀಮತಿ ಸರೋಜಾ ಶರಣಪ್ಪ ಲೋಕಾಪೂರ ಹಾಗೂ ಬಸವ್ವ ನಾಗೇಶಪ್ಪ ರಂಜಣಗಿ ದಂಪತಿಗಳ ಅಮೃತ ಮಹೋತ್ಸವವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬಾಗಲಕೋಟೆಯ ಬಿ.ವಿ.ವಿ ಸಂಘದ ಆಡಳಿತ ಮಂಡಳಿ ಸದಸ್ಯ ಪ್ರಭುಸ್ವಾಮಿ ಸರಗಣಾಚಾರಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಮಣ್ಣ ಧಡಿಗೌಡ್ರ ಮಾತನಾಡಿದರು. ಭಾಗ್ಯಲಕ್ಷ್ಮಿ ಅಣ್ಣಾನವರ ಪ್ರಾರ್ಥಿಸಿದರು. ಡಾ. ಮೃತ್ಯಂಜಯ ಅಣ್ಣಾನವರ ಸ್ವಾಗತಿಸಿದರು. ಅರುಣ ಚೌಡಕಿ ನಿರೂಪಿಸಿದರು. ಸಿದ್ದು ಮೋಟೆ ವಂದಿಸಿದರು.

 

WhatsApp Group Join Now
Telegram Group Join Now
Share This Article