ಒಳ್ಳೆದನ್ನು ಬಯಸುವವರಲ್ಲಿ ದೇವರು ನೆಲೆಸುತ್ತಾನೆ : ಚಿದಾನಂದ ಸ್ವಾಮೀಜಿ

Ravi Talawar
ಒಳ್ಳೆದನ್ನು ಬಯಸುವವರಲ್ಲಿ ದೇವರು ನೆಲೆಸುತ್ತಾನೆ : ಚಿದಾನಂದ ಸ್ವಾಮೀಜಿ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 39;
WhatsApp Group Join Now
Telegram Group Join Now

ಯರಗಟ್ಟಿ: ನಿತ್ಯದ ಬದುಕಿನಲ್ಲಿ ನಾವು ಮಾಡುವ ಕೆಲಸ ಸಮಾಜಮುಖಿಯಾಗಿ, ಇನ್ನೂಬ್ಬರಿಗೆ ಒಳ್ಳೆದನ್ನು ಬಯಸುವವರಲ್ಲಿ ದೇವರು ನೆಲೆಸುತ್ತಾನೆ ಎಂದು ಮಲ್ಲಾಪೂರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಈಚಗೆ ಹಮ್ಮಿಕೊಂಡಿದ್ದ ಶ್ರೀ ಕಾಳಿಕಾದೇವಿ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕ?ದೂರ ಮಾಡಿ ಇ?ರ್ಥ ಸಿದ್ಧಿಸಿಕೊಳ್ಳುವ ಮಾರ್ಗ ದೇವಸ್ಥಾನ ಒಂದೇ. ಈ ನಿಟ್ಟಿನಲ್ಲಿ ನಮ್ಮ ಕುಲದೇವರಿಗೆ ಸುಂದರ ದೇವಾಲಯ ನಿರ್ಮಾಣ ಮಾಡಿ ಶಕ್ತಿ ತುಂಬುತ್ತಿರುವುದು ನಾಡಿಗೆ ಸುಭಿಕ್ಷೆ ನೀಡಲಿದೆ.
ದೇವಸ್ಥಾನಗಳು ಪುನಶ್ವೆತನಗೊಂಡರೆ ಸಾಲದು, ನಿತ್ಯ ದೇವಸ್ಥಾನಗಳಲ್ಲಿ ಭಜನೆ, ಶ್ಲೋಕ, ಪೂಜಾ ಕಾರ್ಯಗಳು ನಡೆಯುವಂತಾದಾಗ ನೀವು ಕಟ್ಟಿದ ದೇವಾಲಯದಲ್ಲಿ ಬಂದು ನೆಲೆಸಲಿದ್ದಾನೆ ಎಂದರು.

ಕಪರಟ್ಟಿ ಬ್ರಹ್ಮಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ, ಮಾನವನ ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ದೇವಾಲಯ ಹಾಗೂ ಧಾರ್ಮಿಕ ಆಚರಣೆಗಳು ಸಹಕಾರಿಯಾಗಿದೆ ಎಂದರು.

ಇದಕ್ಕೂ ಮುಂಚೆ ಸಾಯಂಕಾಲ ಶ್ರೀ ಕಾಳಿಕಾದೇವಿ ಮೂರ್ತಿಯನ್ನು ಸುಮಂಗಲೆಯರ ಪೂರ್ಣಕುಂಭ, ಆರತಿ, ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಮಹಾಪ್ರಸಾದ ಜರುಗಿತು.
ಗ್ರಾಪಂ ಉಪಾಧ್ಯಕ್ಷೆ ರುಕ್ಮೀಣಿ ನಾಯ್ಕರ, ಸದಸ್ಯ ಚೆನ್ನಯ್ಯ ಪೂಜೇರ, ನಿವೃತ್ತ ಪಿಡಿಒ ವಿರುಪಾಕ್ಷ ಪೂಜೇರ, ಮುಖಂಡ ತಿಪ್ಪನಾಯ್ಕ ಕಡಬಿ, ನಿವೃತ್ತ ಉಪನ್ಯಾಸಕರು ಯಲನಾಯ್ಕ ನಾಯ್ಕರ, ಮಾಜಿ ಸೈನಿಕ ಬಸವರಜ ಕಡಬಿ, ಮಹಾದೇವಯ್ಯ ಪೂಜೇರ, ಬಸಯ್ಯ ಪೂಜೇರ, ಸೋಮಯ್ಯ ಪೂಜೇರ, ಈರಯ್ಯ ಪೂಜೇರ, ಶಿವಕುಮಾರ ಪೂಜೇರ, ಬಸವರಾಜ ಕಂಬಾರ, ಶಂಕರೆಪ್ಪ ಬೀರಪ್ಪನವರ, ಬಸವರಾಜ ಬನಪ್ಪನವರ, ಮಹಾದೇವಯ್ಯ ಅಟಿಗಲ್ಲಮಠ, ಶಿವಾನಂದ ಅಟಿಗಲ್ಲಮಠ ಇದ್ದರು.
.

WhatsApp Group Join Now
Telegram Group Join Now
Share This Article