ಕಾಗವಾಡ:ಸಹಕಾರ ರಂಗ ಬೆಳೆಯಬೇಕಾದರೆ ಠೇವಣಿದಾರರ ವಿಶ್ವಾಸಗಳಿಸಿಕೊಳ್ಳುವದು ಮುಖ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ,ಹಾಲಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಶುಕ್ರವಾರ ದಿ.08 ರಂದು ಕಾಗವಾಡ ತಾಲ್ಲೂಕಿನ ಕೆಂಪವಾಡ ಗ್ರಾಮದಲ್ಲಿ ಸಂಗಮನಾಥ ಅರ್ಬನ್ ಸೌಹಾರ್ದ್ ಸಹಕಾರಿ ಸಂಘ ನಿ.ಅಥಣಿ ಕೆಂಪವಾಡ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ,ಸಹಕಾರಿ ಬ್ಯಾಂಕ್ ಗಳು ಬೆಳವಣಿಗೆಯಾಗಬೇಕಾದರೆ ಠೇವಣಿದಾರ ಇಟ್ಟ ಭರವಸೆ ಉಳಿಸಿಕೊಳ್ಳುವದರ ಜೊತೆಗೆ ಸಾಲ ತೆಗೆದುಕೊಳ್ಳುವವರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಆತನ ಆದಾಯ ಯಾವುದರ ಅವಲಂಬಿತವಾಗಿದ್ದಾರೆ ಅವರು ಯಾವ ವಿಧದಲ್ಲಿ ಸಾಲ ತುಂಬಲು ಅರ್ಹರು ಎಂಬುದನ್ನು ಗಮನದಲ್ಲಿರಿಸಿದರೆ ಮಾತ್ರ ಸಹಕಾರಿ ಬ್ಯಾಂಕಗಳು ದಿವಾಳಿಯಾಗುವದನ್ನು ತಪ್ಪಿಸಬಹುದಾಗಿದೆ.ಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕೆಂದರು.
ಇದೆ ವೇಳೆ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಪರಪ್ಪ ಸವದಿ ಮಾತನಾಡಿ,ಸಂಗಮನಾಥ ಬ್ಯಾಂಕ್ ಉನ್ನತಿಗಾಗಿ ಎಲ್ಲ ಗ್ರಾಮಸ್ಥರು,ರೈತರು ಸಹಕರಿಸಬೇಕು ಇದರ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲ ಆಡಳಿತ ವರ್ಗದವರು ಶ್ರಮಿಸಿದರೆ ಇನ್ನೂ ಹೆಚ್ಚಿನ ಶಾಖೆಗಳು ಪ್ರಾರಂಭವಾಗಲು ಸಾಧ್ಯವಿದೆ ಎಂದರು.
ಇದೆ ಸಂದರ್ಭದಲ್ಲಿ ಮರುಳಸಿದ್ದ ಮಹಾಸ್ವಾಮಿಗಳು,ಸಿದ್ದಯೋಗಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.
ಮಲ್ಲೇಶ ಪರಪ್ಪ ಸವದಿ ಪ್ರಾಸ್ತಾವಿಕ ಹಾಗೂ ಸ್ವಾಗತಿಸಿದರು.
ಈ ವೇಳೆ ಮುಖ್ಯ ಅತಿಥಿ ಶಂಕರ ವಾಘಮೋಡೆ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನ್ನಪೂರ್ಣ ಶೆಮಡೆ,ರಾಮಗೌಡಾ ಗುಮತಾಜ,ಶಿವಾನಂದ ಗೊಲಭಾಂವಿ,ಮಹಾದೇವ ನಾಗನೂರ,ಶಶಿಕಾಂತ ಹುಲಕುಂದ,ಶ್ರೀನಿವಾಸ ಅಮ್ಮಲಜೇರಿ,ರಾಜು ತೇಲಿ,ಯಲ್ಲಪ್ಪ ಕಲಾಲ,ಸಿದ್ದಪ್ಪ ಮಹಿಷವಾಡಗಿ,ಮಧು ವಾಲಿಕಾರ,ರಮೇಶ ತೇಲಿ,ಕಲಗೌಡ ಪಾಟೀಲ್, ಬಬನ ಸಾವಂತ ಭೀಮಪ್ಪ ಭಂಡಗರ,ಅಪ್ಪಾಸಾಬ ಕಣವಾಡೆ,ಧರೆಪ್ಪ ಮಾಳಿ ಸೇರಿದಂತೆ ಅನೇಕರು ಇದ್ದರು.