ಕಲಭಾಂವಿ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ ಶಾಖೆ ಕಾರ್ಯಾರಂಭ

Ravi Talawar
ಕಲಭಾಂವಿ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ ಶಾಖೆ ಕಾರ್ಯಾರಂಭ
WhatsApp Group Join Now
Telegram Group Join Now
ಕಲಭಾಂವಿ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿ. ಬೆಳಗಾವಿ ಇದರ 111 ನೆ ಶಾಖೆಯನ್ನು ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮದಲ್ಲಿ ಶುಕ್ರವಾರ ದಿ. 08-08-2025 ರಂದು ಉದ್ಘಾಟನೆ ಮಾಡಿ ಕಾರ್ಯಾರಂಭ ಮಾಡಲಾಯಿತು.
ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ಮುರಗೋಡ ಶ್ರೀ ಮಹಾಂತ ದುರದುಂಡೇಶ್ವರ ಮಠದ ಮ ನಿ ಪ್ರ ಸ್ವ. ಶ್ರೀ. ನೀಲಕಂಠ ಮಹಾಸ್ವಾಮಿಗಳು, ನಯಾನಗರದ  ಸುಖದೇವಾನಂದ  ಪುಣ್ಯಾಶ್ರಮದ  ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಉದ್ಘಾಟಕರಾಗಿ ಬಿಡಿಸಿಸಿ ಬ್ಯಾಂಕ ಅಧ್ಯಕ್ಷರಾದ ಅಪ್ಪಸಾಹೇಬ ಮಾರುತಿ ಕುಲಗುಡೆ, ಯುವ ಮುಖಂಡ ವಿಕ್ರಮ ಇನಾಮದಾರ, ಕಿತ್ತೂರು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕರ ಕುಲಕರ್ಣಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ  ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಭಾಂವಿ ಪಿ ಕೆ ಪಿ ಎಸ್ ಅಧ್ಯಕ್ಷರಾದ ಬಸವರಾಜ ಕ ವಕ್ಕುಂದ, ಬೈಲಹೊಂಗಲ ಸಹಕಾರಿ ಸಂಘಗಳ ನಿಭಂದಕರಾದ ಶ್ರೀಮತಿ ಶಾಹಿನ ಅಕ್ತರ, ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಎನ್ ಜಿ ಕಲಾವಂತ, ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಶಿವನವ್ವ ಕರಡಿ, ಗ್ರಾಮದ ಹಿರಿಯರು, ಪಂಚಾಯತ್ ಸದಸ್ಯರು, ಪಿಕೆಪಿಎಸ್  ಆಡಳಿತ ಮಂಡಳಿ ಸದಸ್ಯರು,ಗ್ರಾಮಸ್ಥರು, ಬಿಡಿಸಿಸಿ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article