ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳು ಮನಸ್ಸು ಮಾಡಿ – ಶಾಸಕ ಜಗದೀಶ ಗುಡಗುಂಟಿ

Pratibha Boi
ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳು ಮನಸ್ಸು ಮಾಡಿ – ಶಾಸಕ ಜಗದೀಶ ಗುಡಗುಂಟಿ
WhatsApp Group Join Now
Telegram Group Join Now

ಜಮಖಂಡಿ: ಜನರ ಸರ್ಕಾರ ಎಂಬ ಮಾತು ಸುಳ್ಳಾಗಿದೆ. ಅಧಿಕಾರಿಗಳು ಮನಸ್ಸು ಮಾಡಿದರೇ ಮಾತ್ರ ಕೆಲಸಗಳಾಗುತ್ತದೆ ಏನೇ ಅಭಿವೃದ್ಧಿ ಕೆಲಸಗಳಾಗಲಿ ವಯಕ್ತಿಕ ಕೆಲಸಗಳಾಗಬೇಕಾದರೇ ಅಧಿಕಾರಿಗಳು ಮನಸ್ಸು ಮಾಡಬೇಕು, ಗ್ರಾಮಗಳ ಅಭಿವೃದ್ಧಿಗೆ ಪಿಡಿಓಗಳು ಮನಸ್ಸು ಮಾಡಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಮಹತ್ಮಾಗಾಂಧೀ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಗ್ರಾಮ ಪಂಚಾಯ್ತಿ ಕಟ್ಟಡ ರಾಜೀವಗಾಂಧಿ ಸೇವಾ ಕೇಂದ್ರ ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಅಧಿಕಾರಿ ಸಾರ್ವಜನಿಕರ ಸೇವೆಗಾಗಿ ಬಂದಿದ್ದೇವೆ ಎಂಬುದನ್ನು ಮರೆಯ ಬಾರದು, ಸಾರ್ವಜನಿಕರು ಕಟ್ಟುವ ಟ್ಯಾಕ್ಸನಿಂದ ನಾವೆಲ್ಲ ಸಂಬಳ ಪಡೆಯುತ್ತೇವೆ ಆದ್ದರಿಂದ ಸಾರ್ವಜನಿಕರ ಸೇವೆ ಮಾಡಬೇಕು ಎಂದು ತಿಳಿಹೇಳಿದರು.

ವಿಧಾನಪರಿಷತ್‌ ಸದಸ್ಯ ಹಣಮಂತ ನಿರಾಣಿ ಮಾತನಾಡಿ ಉತ್ತಮ ಶಿಕ್ಷಣದ ವ್ಯವಸ್ಥೆ, ಸ್ವಚ್ಛಗ್ರಾಮ, ರೈತರಿಗೆ ಹಣಕಾಸು ಒದಗಿಸುವ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದರೇ ಗ್ರಾಮದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಮಹತ್ಮಾಗಾಂಧಿ ಅವರ ಕನಸು ನನಸು ಮಾಡಲು ಗ್ರಾಪಂನ ಆಡಳಿತ ಶ್ರಮಿಸಬೇಕು, ಗ್ರಾಪಂಗಳು ಗ್ರಾಮಕ್ಕೆ ಕುಡಿಯವ ನೀರು, ಬೀದಿದೀಪ ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು,ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಹೇಳಿದರು. ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಗ್ರಾಮಗಳ ಅಭಿವೃದ್ಧಿ ಯಾದರೇ ದೇಶವೇ ಅಭಿವೃದ್ಧಿ ಹೊಂದುತ್ತದೆ. ಎಂದು ಅಭಿಪ್ರಾಯ ಪಟ್ಟರು.

ಕುಂಚನೂರಿನ ಮಾದುಗೊಂಡ ಮಹಾರಾಜರು ಆಶೀರ್ವಚನ ನೀಡಿ, ಪಾಲಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು, ಮೊಬೈಲ್‌ ಹಾವಳಿ ತಪ್ಪಿಸಿ ಮಕ್ಕಳನ್ನು ಪ್ರಜ್ಞಾವಂತರಾಗಿ ಬೆಳೆಸಬೇಕು, ಬಸವಾದಿ ಶರಣರ ತತ್ವಗಳು, ದೇಶದ ಪರಂಪರೆ, ಸಂಸ್ಕೃತಿ ಆಚಾರ ವಿಚಾರಗಳು ಇಂದಿನ ಯುವ ಪೀಳಿಗೆಗೆ ತಿಳಿದಿಲ್ಲ, ತಂದೆ,ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳ ಅವಶ್ಯಕತೆ ಇಲ್ಲ ಎಂದು ಹೇಳಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಸಾನಿಧ್ಯ ವಹಿಸಿದ್ದ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮಿಗಳು ಆಶೀರ್ವಚನ ನೀಡಿ ಕುಂಬಾರಹಳ್ಳಗ್ರಾಮವನ್ನು ಸ್ವಚ್ಛಗ್ರಾಮವನ್ನಾಗಿ ದೇಶದಲ್ಲೇ ಮಾದರಿ ಗ್ರಾಮವನ್ನಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು. ಓಲೇಮಠದ ಆನಂದ ದೇವರು, ಸದಾಶಿವ ಚಂದ್ರಗಿರಿಮಠದ ಸಂಗಯ್ಯ ಮಠಪತಿ, ಮುಖಂಡರಾದ ದಾವಲ ದೇಸಾಯಿ, ಗ್ರಾಪಂ ಅಧ್ಯಕ್ಷೆ ಸತ್ಯವ್ವ ನಾಟೀಕಾರ, ಉಪಾಧ್ಯಕ್ಷ ಶ್ರೀಶೈಲ ಮಂಟೂರ, ತಾಪಂ ಸಿಇಓ ಸಚೀನ ಮಾಚಕನೂರ, ಯೋಜನಾಧಿಕಾರಿ ಗಿರೀಶ ಕಡಕೋಳ, ಗ್ರಾಪಂನ ಸರ್ವ ಸದಸ್ಯರು ವೇದಿಕೆಯಲ್ಲಿದ್ದರು. ಪಿಡಿಓ ಸೈಯ್ಯದ ಇರ್ಫಾನ ಸಾರವಾನ, ಕಾರ್ಯದರ್ಶಿ ರತ್ನವ್ವ ಸಜ್ಜನ, ಸಹಾಯಕ ನಿಂಗರಾಜ ಬಾಗಾದಿ, ಸನಾಳ ಮತ್ತು ಕುಂಬಾರಹಳ್ಳದ ಗ್ರಾಮಸ್ಥರು ಕಾರ್ಯಕ್ರಮ,ದಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article