ಹುನಗುಂದ: ವಕೀಲರ ಕಲಿಕೆಗೆ ಇ-ಗ್ರಂಥಾಲಯ ಅತ್ಯವಶ್ಯವಾಗಿದ್ದು, ಅದನ್ನು ಸ್ಥಾಪಿಸುವುದರಿಂದ ನ್ಯಾಯಾಂಗ ವ್ಯವಸ್ಥೆಯ ಸದ್ಯದ ವಿದ್ಯಮಾನದ ತಿಳಿದುಕೊಳ್ಳಲು ಹಿರಿಯ ಮತ್ತು ಕಿರಿಯ ವಕೀಲರಿಗೆ ಹಾಗೂ ನ್ಯಾಯಾಧೀಶರಿಗೆ ಅನುಕೂಲವಾಗಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹನಮಂತರಾವ್ ಕುಲಕರ್ಣಿ ಹೇಳಿದರು.
ಇಲ್ಲಿನ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಕೀಲ ಸಂಘದ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಹಾಗೂ ಪದಗ್ರಹ ಸಮಾರಂಭವನ್ನು ಉದ್ಘಾಟಿಸಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೈಸಿ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದ ನ್ಯಾಯಾಲಯದಲ್ಲಿ ಇ-ಗ್ರಂಥಾಲಯವನ್ನು ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ ಅದೇ ಮಾದರಿಯಲ್ಲಿ ಹುನಗುಂದದಲ್ಲೂ ಕೂಡಾ ಇ-ಗ್ರಂಥಾಲಯ ಸ್ಥಾಪನೆ ಆಗಬೇಕು. ಅದರ ಜೊತೆಗೆ ಹುನಗುಂದ ವಕೀಲರ ಬಹುದಿನಗಳ ಬೇಡಿಕೆಯಾದ ಹೊಸ ವಕೀಲರ ಭವನ ಕಟ್ಟಡ ಕುರಿತು ಈಗಾಗಲೇ ವಕೀಲರ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್ ಕಠಾಣಿ ಅವರು ಸಾಕ? ಪ್ರಯತ್ನವನ್ನು ಮಾಡಿದ್ದರೂ ಆದರೆ ಅವರ ಅವಧಿಯಲ್ಲಿ ನಿರ್ಮಾಣವಾಗಲಿಲ್ಲ, ಸಧ್ಯ ನೂತನ ಅಧ್ಯಕ್ಷ ಮಾಧವ ದೇಶಪಾಂಡೆ ಮತ್ತು ಅವರ ಪದಾಧಿಕಾರಿಗಳ ಮೂಲಕ ವಕೀಲರ ಬಹುದಿನದ ಕನಸು ನನಸಾಗಲಿ ಎಂದು ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿ?ತ್ ನ ರಾಜ್ಯಾಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ ಮೊದಲು ನ್ಯಾಯಾಧೀಶ ಮತ್ತು ವಕೀಲರು ಕಾನೂನು ಪಾಲನೆ ಮಾಡಿದಾಗ ಸಮಾಜ ಕೂಡಾ ಪಾಲನೆ ಮಾಡಿ ಕಾನೂನನ್ನು ಗೌರವಿಸುತ್ತದೆ. ಜೊತೆಗೆ ವಕೀಲರು ಡ್ರೆಸ್ ಕೋಡ್ಗೆ ನಾನು ಮನವಿ ಕೊಡ್ತಿದ್ದೀನಿ. ನೀವು ನಾಳೆಯಿಂದಲೇ ಎಲ್ಲ ನ್ಯಾಯವಾದಿಗಳು ಓಪನ್ ಕೋರ್ಟ್ ನಲ್ಲಿ ಡ್ರೆಸ್ ಕೋಡ್ ನ್ನು ಕಡ್ಡಾಯವಾಗಿ ಬಳಸಬೇಕು. ಈಗಾಗಲೇ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳು ಡ್ರೆಸ್ ಕೋಡಗಾಗಿ ಆರ್ಡರ್ ಮಾಡುವಂತಹ ಹಂತದಲ್ಲಿದ್ದಾರೆ. ಅದು ಕೆಲವೇ ದಿನಗಳಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ಬರುತ್ತೆ, ಆ ಸಮಯದಲ್ಲಿ ನೀವು ಡ್ರೆಸ್ ಧರಿಸದದಿದ್ದಲ್ಲಿ ನಿಮ್ಮ ಸಬ್ಬೀಶನ ತೆಗೆದುಕೊಳ್ಳುವುದಿಲ್ಲ. ೨೦೧೫ ರಲ್ಲಿಯೇ ಸಿಓಪಿಗೆ ಅರ್ಜಿ ಸಲ್ಲಿಸಿದ್ದರು ಇಲ್ಲಿವರೆಗೂ ಕೂಡ ಕಾರ್ಡ್ ಮತ್ತು ಪ್ರಮಾಣ ಪತ್ರ ಕೊಟ್ಟಿಲ್ಲ. ಸದ್ಯ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅನುಮತಿಯನ್ನು ಪಡೆದು ಮುಂದಿನ ತಿಂಗಳಲದಲ್ಲಿಯೆ ಕಾಡು ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಅದರ ಜೊತೆಗೆ ವಕೀಲರ ನ್ಯಾಮಿನಿ ಬದಲಾವಣೆ, ಗುರುತಿನ ಚೀಟಿ, ವಿಳಾಸ ಬದಲಾವಣೆ, ವಕೀಲರ ಕಲ್ಯಾಣಿಗೆ ಒನ್ ಟೈಮ್ ೨೫ ಸಾವಿರ ಅನಪಾವತಿಸಬೇಕು. ಹಾಗೂ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಪದಾಧಿಕಾರಿಗಳು ವಕೀಲರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಯ್ಕೆಯಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಗಣ್ಯರನ್ನು ಹಾಗೂ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಕೀಲರ ಸಂಘದ ಚುನಾವಣಾಧಿಕಾರಿ ಎಲ್. ವಾಯ್. ಜಡಿ, ಪ್ರಧಾನ ದಿವಾಣಿ ನ್ಯಾಯಾಧೀಶ ಬಸವರಾಜ ನೇಸರಗಿ, ಅಪರ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ, ಸರಕಾರಿ ಸಹಾಯಕ ಅಭಿಯೋಜಕರಾದ ಎಸ್. ಕೆ. ಹುಣಚಗಿ, ಎನ್.ಎಚ್.ಹೊಸಮನಿ, ನೂತನ ಅಧ್ಯಕ್ಷ ಮಾಧವ ದೇಶಪಾಂಡೆ, ಮಾಜಿ ಅಧ್ಯಕ್ಷ ಪ್ರಕಾಶ ಕಠಾಣಿ, ಎಸ್.ಎಂ ಉಪ್ಪಾರ, ಎಂ.ಎ.ಸಂಗಮಕರ, ನೂತನ ಉಪಾಧ್ಯಕ್ಷ ವೀರೇಶ ಬಂಡಿ, ಕಾರ್ಯದರ್ಶಿ ರಮೇಶ್ ಕೊಕಾಟಿ, ಸಹ ಕಾರ್ಯದರ್ಶಿ ಎಂ.ಎಚ್.ಮಳ್ಳಿ, ಖಜಾಂಚಿಗಳಾದ ಕೆ.ಆರ್. ಜಲರೆಡ್ಡಿ, ಎ.ಸಿ.ಗೌಡರ ಉಪಸ್ಥಿತರಿದ್ದರು.
ಬಾಕ್ಸ್; ಪ್ರಾಮಾಣಿಕ ಸೇವೆಗೆ ಸಿದ್ದ- ವಕೀಲರು ನನ್ನ ಮೇಲೆ ವಿಶ್ವಾಸವನ್ನಿಟ್ಟು ಎರಡನೇ ಬಾರಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು. ಅವರ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ಪ್ರಾಮಾಣಿಕವಾಗಿ ಅವರ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ನಮ್ಮ ಮುಂದಿರುವ ಸಂಘದ ಅನೇಕ ಮಹತ್ವದ ಕಾರ್ಯಗಳನ್ನು ಎಲ್ಲ ಪದಾಧಿಕಾರಿಗಳ ಹಾಗೂ ಹಿರಿಯ ಮತ್ತು ಕಿರಿಯ ವಕೀಲರ ಸಹಕಾರವನ್ನು ತೆಗೆದುಕೊಂಡು ವಕೀಲರ ಭವನ ಸೇರಿದಂತೆ ಅನೇಕ ಕೆಲಸ ಕಾರ್ಯಗಳನ್ನು ಮಾಡಲಾಗುವುದು. ಮಾಧವ ದೇಶಪಾಂಡೆ, ವಕೀಲರ ಸಂಘದ ಅದ್ಯಕ್ಷ.
ಬಾಕ್ಸ್; ರಾಜ್ಯದಲ್ಲಿ ೭ ಜನ ನಕಲಿ ವಕೀಲರ ಮೇಲೆ ಪ್ರಕರಣ ದಾಖಲು- ಈಗಾಗಲೇ ರಾಜ್ಯದಲ್ಲಿ ೬ ಜನ ನಕಲಿ ವಕೀಲರ ಮೇಲೆ ಪ್ರಕರಣ ದಾಖಲಾಗಿದೆ. ಗುರುವಾರ ಬೆಳಗಾವಿಯಲ್ಲಿ ಕೂಡಾ ಒಂದು ಪ್ರಕರಣ ದಾಖಲಾಗಿದ್ದು. ಬಾಗಲಕೋಟೆ ಮತ್ತು ಹುನಗುಂದದಲ್ಲೂ ಇಂತಹ ನಕಲಿ ವಕೀಲರು ಕಂಡು ಬಂದರೆ ತಕ್ಷಣವೇ ಬಾರ್ ಕೌನ್ಸಿಲಿಗೆ ಮಾಹಿತಿ ನೀಡಬೇಕು. ನಕಲಿ ವಕೀಲರ ಬಗ್ಗೆ ಬಾಗಲಕೋಟೆ ಜಿಲ್ಲೆಯ ಮೇಲೆ ಸಾಕ? ಅಪಸ್ವರ ಕೇಳಿ ಬರುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಕೀಲರು ಶ್ರಮಿಸಬೇಕು ಎಸ್.ಎಸ್.ವಿಟ್ಟಲಕೋಡ. ರಾಜ್ಯದ್ಯಕ್ಷರು. ಕರ್ನಾಟಕ ವಕೀಲರ ಪರಿ?ತ್ ಬೆಂಗಳೂರು.