ಬಿಜೆಪಿ ಸಂಸದ  ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್

Ravi Talawar
ಬಿಜೆಪಿ ಸಂಸದ  ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ, (ಆಗಸ್ಟ್ 07): ಬಿಜೆಪಿ ಸಂಸದ ಕೆ.ಸುಧಾಕರ್  ಹೆಸರು ಬರೆದಿಟ್ಟು ಬಾಬು ಆತ್ಮಹತ್ಯೆ  ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆಮೃತ ಬಾಬಯ ಪತ್ನಿ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆಡೆತ್ ನೋಟ್​​ ನಲ್ಲಿ ಉಲ್ಲೇಖಿಸಿದ್ದ ಮೂವರ ವಿರುದ್ಧವೂ ಎನ್ಎಸ್ ಸೆಕ್ಷನ್ 108, 352, 351ರ ಅಡಿ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರ ಬಿಜೆಪಿ ಸಂಸದ  ಸುಧಾಕರ್ ವಿರುದ್ಧವೂ ಸಹ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, A1 ಆರೋಪಿಯಾಗಿದ್ದಾರೆ. ಇನ್ನು FIRನಲ್ಲಿ ನಾಗೇಶ್, ಮಂಜುನಾಥ ಹೆಸರು ಸಹ ಉಲ್ಲೇಖಿಸಲಾಗಿದೆ.

ಇದಕ್ಕೂ ಮೊದಲು ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾವೇ ನಡೆಯಿತುದೂರಿನಲ್ಲಿ ಡಾ.ಕೆ.ಸುಧಾಕರ್ ಹೆಸರು ಸೇರಿಸುವಂತೆ ಕಾಂಗ್ರೆಸ್​ ಪಟ್ಟು ಹಿಡಿದಿದ್ದರೆಮತ್ತೊಂದೆಡೆ ಎಫ್​ ಐಆರ್​​ ನಲ್ಲಿ ಸುಧಾಕರ್ ಹೆಸರು ಸೇರಿಸದಂತೆ ಬಿಜೆಪಿ ಆಗ್ರಹಿಸಿತುಹೀಗೆ ಪೊಲೀಸರ ಮೇಲೆ ಪ್ರಭಾವ ಬೀರಲು ಎರಡು ಕಡೆಯಿಂದಲೂ ನಡೆದಿತ್ತುಅಂತಿಮವಾಗಿ ಪೊಲೀಸರುಸಂಸದ ಡಾ.ಕೆ ಸುಧಾಕರ್ ಸೇರಿದಂತೆ ಮೂವರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಬಿಎನ್ಎಸ್ ಕಾಯ್ದೆ ಅಡಿ ಅಡಿ ಸೆಕ್ಷನ್ 108, 352 , 351 ಹಾಗೂ ಎಸ್ ಸಿ ಎಸ್ ಟಿ ಕಾಯ್ದೆ ಅಡಿ ಅಟ್ರಾಸಿಟಿ ಕೇಸ್ ದಾಖಲಾಗಿದ್ದುಡೆತ್ ನೋಟ್ ನಲ್ಲಿ ಹೆಸರು ಇರುವ ಸಂಸದ ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆಇದರಲ್ಲಿ ಸಂಸದ ಸುಧಾಕರ್ ಆರೋಪಿಯಾಗಿದ್ದರೆನಾಗೇಶ್ 2, ಮಂಜುನಾಥ್ ಆರೋಪಿಯನ್ನಾಗಿ ಮಾಡಲಾಗಿದೆ.

WhatsApp Group Join Now
Telegram Group Join Now
Share This Article