ಹುನಗುಂದ 07:- ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ೩ ಕೋಟಿ ಅನುದಾನದಲ್ಲಿ ಚಿತ್ತರಗಿ ವಾಯ್ ತಿಮ್ಮಾಪೂರ ರಸ್ತೆ ಡಾಂಬರೀಕರಣ ಕಾಮಗಾರಿ ಸೇರಿದಂತೆ ವಿವಿಧೆಡೆಯಲ್ಲಿ ರಸ್ತೆ ಸುಧಾರಣಾ ಕಾಮಗಾರಿಗೆ ಶನಿವಾರ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿ ಪೂಜೆ ನೆರವೇರಿಸಿದ್ದರು.
ಈ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಬಹು ದಿನಗಳಿಂದ ಚಿತ್ತರಗಿ ಮತ್ತು ತಿಮ್ಮಾಪುರ ಗ್ರಾಮಗಳ ರಸ್ತೆ ಸುಧಾರಣೆ ಆಗಬೇಕಿತ್ತು. ಕಳೆದ ನನ್ನ ಅವಧಿಯಲ್ಲಿ ಚಿತ್ತರಗಿ ಹಡಗಲಿ ರಸ್ತೆ ನಿರ್ಮಾಣ ಕಾಮಗಾರಿ ಮಾಡಿದ್ದು ಬಿಟ್ಟರೇ ಈ ಭಾಗದಲ್ಲಿ ಕಳೆದ ೧೦ ವ?ಗಳಿಂದ ರಸ್ತೆ ಕಾಮಗಾರಿ ಆಗಿಲ್ಲ. ಯಾವೊಂದು ರಸ್ತೆ ನಿರ್ಮಾಣ ಕೂಡಾ ಮಾಡಿಲ್ಲ. ಸದ್ಯ ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರು ವಿವಿಧ ರಸ್ತೆ ಸುಧಾರಣೆ ಕಾಮಗಾರಿಗಳಿಗಾಗಿ ೧೫ ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು. ೩ ಕೋಟಿ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ೫೦ ರಿಂದ ಚಿತ್ತರಗಿ ವಾಯ್ ತಿಮ್ಮಾಪುರ ರಸ್ತೆ ಡಾಂಬರೀಕರಣ,೪ ಕೋಟೆ ಅನುದಾನದಲ್ಲಿ ಬೇವಿನಮಟ್ಟಿ ಕ್ರಾಸ್ ನಿಂದ ತಳ್ಳಿಕೇರಿ ರಸ್ತೆಯ ಮರು ಡಾಂಬರೀಕರಣ, ೫ ಕೋಟಿ ಅನುದಾನದಲ್ಲಿ ಮಾನ್ವಿ ರಾಯಚೂರ ರಾಜ್ಯ ಹೆದ್ದಾರಿ ೧೪ರ ನಾಗೂರು ಗ್ರಾಮದಿಂದ ಇಲ್ಯಾಳ ಗ್ರಾಮದವರಗೀನ ಅಪೂರ್ಣ ರಸ್ತೆಯ ಮರು ಡಾಂಬರೀಕರಣ,೩ ಕೋಟಿ ಅನುದಾನದಲ್ಲಿ ಗುಡೂರ ಎಸ್.ಸಿ ಗ್ರಾಮದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿ,೫ ಕೋಟಿ ಅನುದಾನದಲ್ಲಿ ಇಳಕಲ್ ನಗರದ ಪ್ರವಾಸಿ ಮಂದಿರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆಯನ್ನು ನೀಡಲಾಗಿದೆ. ಇನ್ನು ತಿಮ್ಮಾಪುರ ಗ್ರಾಮದಲ್ಲಿ ನನ್ನ ಕಳೆದ ಅವಧಿಯಲ್ಲಿ ಮಾರುತೇಶ್ವರ ದೇವಸ್ಥಾನ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಅನುದಾನವನ್ನು ನೀಡಲಾಗಿತ್ತು. ಸದ್ಯ ಈ ಗ್ರಾಮದಲ್ಲಿ ಗ್ರಾಮದೇವತೆ, ದುರ್ಗಾದೇವಿ ದೇವಸ್ಥಾನ ಕಟ್ಟಡ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ನನ್ನ ಶಾಸಕ ಪ್ರದೇಶ ಅಭಿವೃದ್ಧಿ ನಿಧಿಯಿಂದ ಅನುದಾನವನ್ನು ನೀಡಿ ಅಭಿವೃದ್ಧಿಪಡಿಸಲಾಗುವುದು.ನಮ್ಮ ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾ. ಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ,ಪುರಸಭೆ ಸದಸ್ಯ ಶರಣು ಬೆಲ್ಲದ,ಬಸಯ್ಯ ಹಿರೇಮಠ,ಮಲ್ಲಣ್ಣ ಬಿಸರೆಡ್ಡಿ, ಶೇಖರಗೌಡ ಹನುಮಗೌಡ,ಸಂಗಮೇಶ ನಾಲತವಾಡ,ಬಸವರಾಜ ಬನಹಟ್ಟಿ,ಮಹಾಂತೇಶ ನಾಡಗೌಡರ, ಗ್ಯಾನಪ್ಪ ಪೂಜಾರಿ, ಶಿವು ಕಡೇಮನಿ, ಯಮನಪ್ಪ ವಡ್ಡರ,ತಾ.ಪಂ ಇಓ ಮುರಳಿದಾರ ದೇಶಪಾಂಡೆ, ಲೋಕೋಪಯೋಗಿ ಇಲಾಖೆಯ ಎಇಇ ಈರಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.
ಬಾಕ್ಸ್; ೧೩೫ ಕೋಟಿ ಅನುದಾನದಲ್ಲಿ ೧೭೫ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ*** ಹುನಗುಂದ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು. ಆ ಸಮಸ್ಯೆ ನಿವಾರಣೆಗಾಗಿ ೧೩೫ ಕೋಟಿ ರೂ ಅನುದಾನದಲ್ಲಿ ೧೭೫ ಗ್ರಾಮಗಳಿಗೆ ಕೃ? ನದಿಯಿಂದ ಶಾಶ್ವತ ಕುಡಿಯುವ ನೀರು ಯೋಜನೆಯನ್ನು ಸದ್ಯ ಆರಂಭಿಸಲಾಗಿದ್ದು. ಇನ್ನೊಂದು ವ?ದಲ್ಲಿ ಕಾಮಗಾರಿ ಪೂರ್ಣಗೊಂಡು ಮತಕ್ಷೇತ್ರದ ಎಲ್ಲ ಗ್ರಾಮಗಳ ಜನರಿಗೆ ಕೃ? ನದಿಯ ನೀರನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ವಿಜಯಾನಂದ ಕಾಶಪ್ಪನವರ ಶಾಸಕರು ಹುನುಗುಂದ ಮತಕ್ಷೇತ್ರ.
ಬಾಕ್ಸ್; ಪಂಚಾಯತ್ ರಾಜ್ಯ ಇಲಾಖೆಯಿಂದ ಗ್ರಾಮೀಣ ರೈತರ ಹೊಲಗಳ ರಸ್ತೆ ಸುಧಾರಣೆಗಾಗಿ ೨೧ ಕೋಟಿ ಅನುದಾನ*** ಈ ಹಿಂದೆ ಸಿದ್ದರಾಮಯ್ಯನವರ ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮೀಣ ರೈತರ ಹೊಲಗಳ ರಸ್ತೆ ಅಭಿವೃದ್ಧಿಗಾಗಿ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದರು. ಸದ್ಯ ಯಾವ ಗ್ರಾಮಗಳಲ್ಲಿ ರೈತರ ಹೊಲಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿ ಆಗಿಲ್ಲ ಅವುಗಳನ್ನು ಅಭಿವೃದ್ಧಿಪಡಿಸಿ ಸುರಕ್ಷಿತವಾಗಿ ರೈತರು ತಮ್ಮ ಹೊಲಗಳಿಗೆ ತೆರಳುವಂತೆ ಮಾಡಲು ಸರ್ಕಾರ ೨೧ ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು. ಶೀಘ್ರದಲ್ಲೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕೆಲವೇ ದಿನಗಳಲ್ಲಿ ಆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಶಾಸಕ ವಿಜಯಾನಂದ ಕಾಶಪ್ಪನವರು.
೧೫ ಕೋಟಿ ಅನುದಾನದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ : ಶಾಸಕ ಕಾಶಪ್ಪನವರ
