ಹುನಗುಂದ 07:- ತಾಲೂಕಿನಾದ್ಯಂತ ಬುಧವಾರ ನಸುಕಿನಜಾವ ೪ ಗಂಟೆಯಿಂದ ೫ ಗಂಟೆ ಸುಮಾರಿಗೆ ಸುರಿದ ಭಾರಿ ಪ್ರಮಾಣದಲ್ಲಿ ರಭಸದಿಂದ ಸುರಿದ ಮಳೆಯಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು. ಇನ್ನು ಕೆಲವು ಗ್ರಾಮಗಳಿಗೆ ಸಂಚರಿಸುವ ರಸ್ತೆಗಳು ಅವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ಅಂಡರ್ ಪಾಸ್ ರಸ್ತೆಗಳು ನೀರು ತುಂಬಿಕೊಂಡು ಇಡೀ ದಿನ ಸಂಚಾರಕ್ಕೆ ತೊಂದರೆ ಮಾಡಿದ್ದಲ್ಲದೆ, ರೈತರು ಬಿತ್ತನೆ ಮಾಡಿದ ಜಮೀನುಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ತುಂಬಿಕೊಂಡ ದೃಶ್ಯ ಕಂಡು ಬಂದಿತು.
ಕಳೆದ ಎರಡು ವಾರಗಳಿಂದ ಮಳೆಯಿಲ್ಲದೆ ಮಳೆಗಾಗಿ ಪರಿತಪಿಸುತ್ತಿದ್ದ ರೈತರಿಗೆ ಬುಧವಾರ ಧಾರಾಕಾರವಗಿ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಖುಷಿ ತಂದರೂ ಕೂಡಾ ಬಿತ್ತನೆ ಮಾಡಿದ ಹೊಲಗಳಲ್ಲಿ ನೀರು ತುಂಬಿ ಕೊಂಚ ಕೇದವೂ ಕೂಡಾ ರೈತರಲ್ಲಿ ಕಾಣುತ್ತಿದೆ.
ಚಿತ್ತವಾಡಗಿ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯ ನೀರು ಮನೆಗಳಿಗೆ ಪ್ರವೇಶಿಸಿ ಇಡೀ ದಿನ ನೀರನ್ನು ಹೊರ ಹಾಕುವ ಸ್ಥಿತಿ ನಿರ್ಮಾಣವಾಯಿತು.
ಜಮೀನುಗಳಲ್ಲಿ ನೀರೋ ನೀರು- ಬುಧವಾರ ನಸುಕಿನ ಜಾಗದಲ್ಲಿ ಸುರಿದ ವಷಧಾರೆಯಿಂದ ತಾಲೂಕಿನ ಬಹುತೇಕ ಜಮೀನುಗಳಲ್ಲಿ ಕೆರೆಯ ರೀತಿಯಲ್ಲಿ ನೀರು ತುಂಬಿಕೊಂಡು ಸಾಯಂಕಾಲದವರೆಗೆ ಕೂಡಿಗಳ ಮೂಲಕ ನೀರು ಹರಿಯಿತಲ್ಲದೆ, ಯುವುದಲ್ಲದೆ ಕೆಲವು ಕಡೆ ಹೊಲಗಳ ಒಡ್ಡುಗಳು ಒಡೆದು ಬಹುದೊಡ್ಡ ಅವಾಂತರವನ್ನು ಸೃಷ್ಟಿಯಾಗಿದೆ.
ಸೇತುವೆಗಳು ತುಂಬಿ ಸಂಚಾರಕ್ಕೆ ಅಡೆತಡೆ- ತಾಲೂಕಿನ ರಾಮವಾಡಗಿ, ಹಗೇದಾಳ, ಬೇಕಮಲದಿನ್ನಿ, ರೇವಡಿಹಾಳ, ಚಿಂತಕಮಲದಿನ್ನಿ, ಜಾಲಕಮಲದಿನ್ನಿ ಕರಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಡುವೆ ಇರುವ ಸೇತುವೆ ಸೇರಿದಂತೆ ಇದ್ದಲಗಿ ಧನ್ನೂರ ರಸ್ತೆಯ ಮಧ್ಯದ ಸೇತುವೆ ಫುಲ್ ಫಿಲ್ ಆಗಿ ಹರಿಯುತಿದ್ದರಿಂದ ಇಡೀ ದಿನ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಹುನಗುಂದದಿಂದ ಕರಡಿ ಮಾರ್ಗದ ಮೂಲಕ ಸಂಚರಿಸುವ ಸುಮಾರು ೭ ಗ್ರಾಮಗಳ ಜನರಿಗೆ ಬೇಕಮಲದಿನ್ನಿ, ರೇವಡಿಹಾಳ ಹಳ್ಳ ದುಃಸ್ವಪ್ನವಾಗಿವೆ. ಪ್ರತಿ ವ? ಮಳೆಗಾಲದಲ್ಲಿ ಈ ಗ್ರಾಮಗಳ ಜನರ ಸಂಚಾರಕ್ಕೆ ಪದೇ ಪದೇ ತೊಂದರೆಯಾಗುತ್ತಿದ್ದು.ರಸ್ತೆ ದಾಟುಲು ವಾಹನಗಳು ಗಂಟೆಗಟ್ಟಲೆ ನಿಲ್ಲುವದು ಇಲ್ಲಿನ ಗ್ರಾಮಸ್ಥರಿಗೆ ಹೊಸತೇನಲ್ಲ. ಈ ಭಾಗದ ಹಳ್ಳಿಗಳಿಂದ ಜನರು ಹುನಗುಂದಕ್ಕೆ ಸಂತೆ, ಆಸ್ಪತ್ರೆ, ಶಾಲಾ ಕಾಲೇಜು ಸೇರಿ ಸರ್ಕಾರಿ ಕಚೇರಿ ಕೆಲಸಕ್ಕಾಗಿ ನಿತ್ಯ ಸಂಚರಿಸುತ್ತಾರೆ. ಆದರೆ, ಮಳೆಗಾಲ ಬಂದರೆ ಜನರ ಸಂಚಾರಕ್ಕೆ ದೊಡ್ಡ ಸಮಸ್ಯೆ ಎದುರಾಗುತ್ತದೆ.
ರಸ್ತೆ ಸಮನಾಗಿ ಹಳ್ಳ ಹರಿಯುವುದು ಸೇತುವೆ ಎತ್ತರಿಸದಿರುವುದೇ ಇದಕ್ಕೆ ಕಾರಣವಾಗಿದೆ. ಸೇತುವೆ ಎತ್ತರಿಸುವಂತೆ ಗ್ರಾಮಸ್ಥರು ಎ? ಸಾರಿ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಮಾಡಿಕೊಂಡರೂ ಕೂಡಾ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ಕಡೆಗೆ ಗಮನಹರಿಸುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೇತುವೆಗಳನ್ನು ಎತ್ತರಿಸುವಂತೆ ರೇವಡಿಹಾಳ ಗ್ರಾಮಸ್ಥರಾದ ಪ್ರಕಾಶ ರಾಮಥಾಳ, ಮಹಾಂತೇಶ ಗೌಡರ, ಸಿದ್ದು ತೋಟಗೇರ, ಗುರುರಾಜ ತುಂಬಗಿ, ವೀರಭದ್ರ ಗೌಡರ, ಶಂಕ್ರಪ್ಪ ಮಾದರ ಅಗ್ರಹಿಸಿದ್ದಾರೆ.
ಬಾಕ್ಸ್; ನೀರು ತುಂಬಿದ ಅಮರಾವತಿ ಅಂಡರ್ ಪಾಸ್ ಸೇತುವೆ ಪಟ್ಟಣದಿಂದ ಅಮರಾವತಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್ ಪಾಸ್ ಸೇತುವೆಯಿಂದ ಪ್ರತಿ ವ? ಮಳೆಗಾಲದಲ್ಲಿ ನೀರು ತುಂಬಿ ತುಳುಕುವುದಲ್ಲದೆ ಸಂಚಾರ ವ್ಯವಸ್ಥೆಗೆ ಭಾರಿ ತೊಂದರೆಯಾಗುತ್ತಿದ್ದು ಇದನ್ನು ಸರಿಪಡಿಸುವಂತೆ ಸಾಕಷ್ಟ ಸಾರಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರೂ ಕೂಡಾ ಇಲ್ಲಿವರೆಗೂ ಯಾವುದೇ ರೀತಿಯಾಗಿರುವಂತ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ. ಸೇತುವೆ ಅಂಡರ್ ಪಾಸ್‌ನಲ್ಲಿ ಭಾರಿ ಪ್ರಮಾಣದ ನೀರು ತುಂಬಿ ಇನ್ನು ಎರಡು ಮೂರು ದಿನಗಳವರೆಗೆ sರಸ್ತೆ ಸಂಚಾರಕ್ಕೆ ತೊಂದರೆಯಾಗಬಹುದು.
ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದ : ಹೊಲ ಮತ್ತು ಸೇತುವೆಗಳಲ್ಲಿ ನೀರೋ.. ನೀರು…!
