ಸ್ಟಾರ್ ಸುವರ್ಣ ವಾಹಿನಿ ಕಿರುತೆರೆಯಲ್ಲಿ ವೀಕ್ಷಕರಿಗೆ ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ತನ್ನದೇ
ಆದ ಛಾಪು ಮೂಡಿಸಿದೆ. ಪ್ರಸ್ತುತ ‘ನೀ ಇರಲು ಜೊತೆಯಲ್ಲಿ’ ಹೊಸ ಧಾರಾವಾಹಿ
ಇದೇ ಆಗಸ್ಟ್ 11ರಿಂದ ಪ್ರತಿ ದಿನ ರಾತ್ರಿ 7 ಘಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.
‘ನೀ ಇರಲು ಜೊತೆಯಲ್ಲಿ’ ಧಾರವಾಹಿಯ ನಾಯಕರಾಗಿ ನಟಿಸುತ್ತಿರುವ ಪವನ್ ರವೀಂದ್ರ ಅವರು “ವೈಯಕ್ತಿಕ ಕಾರಣದಿಂದಾಗಿ ಚೆನ್ನೈನಲ್ಲಿ ನೆಲಸಬೇಕಾಯಿತು. ಹಾಗಾಗಿ ಗ್ಯಾಪ್ ಆಯ್ತು. ಆದರೆ ಸಮಾಜಕ್ಕೆ ಒಳ್ಳೆ ಮೆಸೇಜ್ ಕೊಡುವ ಮತ್ತು ಮನಸ್ಸುಮುಟ್ಟುವ ಕಥೆ ಇದ್ರೆ ಮಾಡ್ತೀನಿ ಅಂತ ಹೇಳಿದ್ದೆ ಹಾಗಾಗಿ ‘ನೀ ಇರಲು ಜೊತೆಯಲ್ಲಿ’ ಧಾರವಾಹಿಯಲ್ಲಿ ನಟಿಸಿದ್ದೇನೆ. ನಾನು ಕಾಣಿಸಿಕೊಳ್ಳುತ್ತಿರುವ
ಕೃಷ್ಣ ದಿವಾನ್ ಪಾತ್ರ ಕುಟುಂಬದ ಎಲ್ಲರೂ ಜೊತೆಗಿರುವುದನ್ನು ಬಯಸುವ ಮತ್ತು ಎಲ್ಲರ ಜೊತೆಗಿರುವ ಪಾತ್ರ” ಎಂದರೆ,
ನಾಯಕಿಯಾಗಿ ನಟಿಸುತ್ತಿರುವ ಸಲೋಮಿ ಡಿಸೋಜಾ “ತೆಲುಗು ಸೇರಿದಂತೆ ಇದುವರೆಗೆ 7 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಮೊದಲ ಬಾರಿಗೆ ನಾಯಕಿಯಾಗಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದೇನೆ” ಎಂದು ಖುಷಿಯನ್ನು ಹಂಚಿಕೊಂಡರು. ತಂದೆಯ ಮಾತನ್ನು ಮೀರದ ಮಗಳಾಗಿ, ಯಾರನ್ನು ನೋಯಿಸದ ಮಾತೃ ಹೃದಯದ ರಚನಾ ಪಾಟೇಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆಕೆ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಮೋಹನ್ “ನನ್ನ ಪಾತ್ರಕ್ಕೆ ನಿರೀಕ್ಷೆಗೂ ಮೀರಿದ ಶೇಡ್ ಗಳಿದೆ” ಎಂದಿದ್ದಾರೆ
ಅಮೃತವರ್ಷಿಣಿ ಧಾರವಾಹಿಯಲ್ಲಿ ಹೆಸರು ಮಾಡಿದ್ದ ರಜಿನಿ, ಗ್ಯಾಪ್ ನಂತರ ಊರ್ಮಿಳಾ ದಿವಾನ್ ಹೆಸರಿನ ಅತ್ತಿಗೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ” ಎಲ್ಲರನ್ನೂ ಹೆದರಿಸುವಂತಹ, ಅಂದರೆ ನನ್ನ ನೋಡಿ ಎಲ್ಲರು ಹೆದರುವ ಭಿನ್ನ ರೀತಿಯಲ್ಲಿ ಟ್ರಾವೆಲ್ ಆಗುವ ಪಾತ್ರ ನನ್ನದು” ಎಂದ ರಜಿನಿ ಮೊದಲ ಬಾರಿಗೆ ನೆಗೆಟೀವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೃಷ್ಣ ದಿವಾನ್ ಅವನ ಅತ್ತಿಗೆ ಊರ್ಮಿಳಾ ದಿವಾನ್ ಮತ್ತು ರಚನಾ ಪಾಟೀಲ್ ಈ ಮೂರು ಪಾತ್ರವನ್ನು ಪ್ರಮುಖವಾಗಿಟ್ಟು ಮುಖ್ಯವಾಗಿ ದಿವಾನ್ ಮನೆತನದ ಕಥೆ ಹೇಳ ಹೊರಟಿದ್ದಾರೆ ನಿರ್ದೇಶಕ ಧರಣಿ ಜಿ ರಮೇಶ್. ಅವರೇ ಈ ಧಾರವಾಹಿ ನಿರ್ಮಾಪಕರಾಗಿದ್ದಾರೆ. ‘ನೀ ಇರಲು ಜೊತೆಗೆಯಲ್ಲಿ’ ನಮ್ಮ ಸಂಸ್ಕೃತಿ ಧಾರಾವಾಹಿಯಾಗಿ 2000 ಮೀರಿದ ಎಪಿಸೋಡ್ ಪ್ರಸಾರವಾಗಲಿದೆ
ಎನ್ನುವ ವಿಶ್ವಾಸ ಧರಣಿಯವರದ್ದು. ಈಗಾಗಲೇ ಮುದ್ದು ಲಕ್ಷ್ಮಿ, ಮರಳಿ ಮನಸಾಗಿದೆ, ಮರಳಿ ಬಂದಳು ಸೀತೆಯಂತಹ ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ ಧರಣಿ.
‘ನೀ ಇರಲು ಜೊತೆಯಲ್ಲಿ’ ಧಾರಾವಾಹಿ ಪ್ರಸಾರದ ಕುರಿತಂತೆ ತಿಳಿಸಲಾಗದ ಪತ್ರಿಕಾಗೋಷ್ಠಿಯಲ್ಲಿ ಸ್ಟಾರ್ ಸುವರ್ಣದ
ರಾಜ್ ನಿಕಮ್ (ಡೆಪ್ಯುಟಿ ಚಾನೆಲ್ ಹೆಡ್ ) ಮತ್ತು ಶಿಲ್ಪ ಕೊಟೆಚ (ಡೈರೆಕ್ಟರ್ ಫಿಕ್ಷನ್ ಪ್ರೋಗ್ರಾಮಿಂಗ್) ಉಪಸ್ಥಿತರಿದ್ದರು.
ಕಥಾ ಸಾರಾಂಶ :
ಸ್ವಾತಂತ್ರ ಹೋರಾಟಗಾರನ ಕುಟುಂಬದಲ್ಲಿ ಬೆಳೆದ ನಾಯಕ ಕೃಷ್ಣ ತಂತ್ರದಲ್ಲಿ ಕಪಟಿಯಾಗಿದ್ದರೂ, ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಆಧುನಿಕ ಯುಗದ ಶ್ರೀಕೃಷ್ಣ. ಆದರೆ ಅತ್ತಿಗೆ
ಊರ್ಮಿಳ ಮನೆ ಮಂದಿಯರನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿಕೊಂಡಿರುತ್ತಾಳೆ.
ಅಪ್ಪನ ಮುದ್ದಿನ ಮಗಳು ನಾಯಕಿ ರಚನಾಪಾಟೀಲ್ ವಿದ್ಯಾವಂತೆ. ಮುಂದೆ ಸೊಕ್ಕಿನಿಂದ ಮರೆಯುತ್ತಿರುವ ಅತ್ತಿಗೆಗೆ ಕೃಷ್ಣ ತಕ್ಕ ಪಾಠ ಕಲಿಸುತ್ತಾನಾ? ತದ್ವಿರುದ್ದ ಭಾವಗಳನ್ನು ಹೊಂದಿರುವ ಕೃಷ್ಣಾ-ರಚನಾ ಹೇಗೆ ಒಂದಾಗುತ್ತಾರೆ? ರಚನಾಗೆ ಆದರ್ಶವಾಗಿರೋ ಊರ್ಮಿಳ . ತನ್ನನ್ನೇ ಎದುರಾಳಿಯಾಗಿ ನೋಡಿದ್ರೆ ಮುಂದೇನಾಗಬಹುದು ಎಂಬುದು ಮುಖ್ಯ ಕಥಾ ಸಾರಾಂಶವಾಗಿದೆ.