ಅಂಕಲಗಿ ೦೬- ಸಮೀಪದ ಪಾಶ್ಚಾ ಪೂರ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಪಾಶ್ಚಾ ಪೂರ ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಇದೇ ಆಗಷ್ಟ್ 10 ರಿಂದ 12 ವರೆಗೆ ಅತೀ ವಿಜ್ರಂಬಣೆಯಿಂದ ಜರುಗಲಿದೆ.
ಕುಂದರನಾಡಿನ ಮಂತ್ರಾಲಯವೆಂದೇ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿ ಜಾತಿ,ಮತ, ಪಂಗಡವೆನ್ನದೇ ಜಾತ್ಯತೀತವಾಗಿ ಸೇರಿ ಸಮಭಾವದಿಂದ ಆಚರಿಸುವ 3 ದಿನಗಳ ಈ ಮಹೋತ್ಸವದಲ್ಲಿ ವಿವಿಧ ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯಲ್ಲದೆ, ಮಹೋತ್ಸವಕ್ಕೆ ಮಠಾದೀಶರು, ಗಣ್ಯರು ಆಗಮಿಸಲಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಕಾರ್ಯಕ್ರಮಗಳು ಜರುಗಲಿವೆ. ಸರ್ವ ಭಕ್ತಾದಿಗಳಿಗೂ ಮಹಾಪ್ರಸಾದದ ವ್ಯವಸ್ಥೆ ಇದ್ದು, ಸರ್ವರೂ ಆಗಮಿಸಿ . ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕೆಂದು ಮಲ್ಲಿಕಾರ್ಜುನ ದೇವಸ್ಥಾನದ ಆರಾಧನಾ ಕಮಿಟಿ ತಿಳಿಸಿದೆ.