ನಾಡಿನ ಅಭ್ಯುದಯದಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯ: ಶಾಸಕ ನಿಖಿಲ ಕತ್ತಿ

Ravi Talawar
ನಾಡಿನ ಅಭ್ಯುದಯದಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯ: ಶಾಸಕ ನಿಖಿಲ ಕತ್ತಿ
WhatsApp Group Join Now
Telegram Group Join Now

ಹುಕ್ಕೇರಿ : ನಾಡಿನ ಅಭ್ಯುದಯದಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯ. ಪತ್ರಕರ್ತರು ಸಮಾಜದ ಒಂದು ಅಂಗವಾಗಿದ್ದು ಸಮಾಜದ ಓರೆ-ಕೋರೆಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿವೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪತ್ರಿಕಾರಂಗ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಆಯೋಜಿಸಿದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಪತ್ರಿಕೆಗಳು ವರದಿ ಮಾಡಿ ಸರ್ಕಾರವನ್ನು ಎಚ್ಚರಿಸುತ್ತಿವೆ. ಯುವ ಜನಾಂಗ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದೇ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ತಾಲೂಕು ಘಟಕ ಅಧ್ಯಕ್ಷ ರವಿ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಪಿ.ಜಿ.ಕೊಣ್ಣೂರ, ಸಿಪಿಐ ಜಾವೀದ ಮುಶಾಪೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ, ಮುದ್ರಣ ಮತ್ತು ದೃಶ್ಯ ಮಾಧ್ಯಮ ಜನರಿಗೆ ಜ್ಞಾನ ನೀಡುತ್ತವೆ. ಯುವ ಜನಾಂಗ ಕೇವಲ ಮನರಂಜನೆಗೆ ಒತ್ತು ನೀಡದೇ ಜೀವನ ರೂಪಿಸುವ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಗೊಂದಿ, ತಹಸೀಲದಾರ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್.ಮಲ್ಲಾಡದ, ಮುಖಂಡರಾದ ಮಹಾವೀರ ನಿಲಜಗಿ, ಕಿರಣ ರಜಪೂತ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಪತ್ರಕರ್ತರಾದ ಚೇತನ ಹೊಳೆಪ್ಪಗೋಳ, ವಿಶ್ವನಾಥ ನಾಯಿಕ, ಸಚಿನ ಖೋತ, ಮಲ್ಲಿಕಾರ್ಜುನ ಗುಂಡಕಲ್ಲೆ, ರಾಮಣ್ಣಾ ನಾಯಿಕ, ಸಚಿನ ಕಾಂಬಳೆ, ರಾಜು ಕುರುಂದವಾಡೆ, ಬಿ.ಬಿ.ಕೋತೇಕರ, ಮಹಾದೇವ ನಾಯಿಕ, ರಾಜಕುಮಾರ ಬಾಗಲಕೋಟಿ, ಗಣೇಶ ಮಲಾಬಾದಿ, ಅಪ್ಪು ಹುಕ್ಕೇರಿ, ಸೋಹನ ವಾಗೋಜಿ, ಸಂಜೀವ ಮುಷ್ಟಗಿ, ಕಲ್ಲಪ್ಪಾ ಪಾಮನಾಯಿಕ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಸಂಜು ಮುತಾಲಿಕ ಸ್ವಾಗತಿಸಿದರು. ಶಿಕ್ಷಕ ಶಿವಾನಂದ ಪಾಟೀಲ ನಿರೂಪಿಸಿದರು. ಮಹಾದೇವ ನಾಯಿಕ ವಂದಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಪತ್ರಿಕಾ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕಂದಾಯ ಇಲಾಖೆಯಿಂದ ಶಿರಸ್ತೆದಾರ ಎನ್.ಆರ್.ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಪಿಡಿಒಗಳಾದ ಸಂತೋಷ ಕಬ್ಬಗೋಳ, ಅಶೋಕ ಕಂಠಿ, ಕೃಷಿ ಕ್ಷೇತ್ರದಿಂದ ನಿರುಪಾದಿ ಹಿರೇಮಠ, ಪೊಲೀಸ್ ಇಲಾಖೆಯಿಂದ ಅಪ್ಪಾಹುಸೇನ ಸನದಿ, ಶಿಕ್ಷಣ ಇಲಾಖೆಯಿಂದ ಮುಖ್ಯ ಶಿಕ್ಷಕ ಬಸವರಾಜ ಸದಲಗಿ, ಆರೋಗ್ಯ ಇಲಾಖೆಯಿಂದ ಡಾ.ರಿಯಾಜ್ ಮಕಾನದಾರ, ಡಾ.ಈರಣ್ಣ ಕಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೀತಾ ಅಂಗಡಿ, ಶೈಲಾ ಪಾಟೀಲ, ಪೌರಾಡಳಿತ ಇಲಾಖೆಯಿಂದ ಮಂಗಲ ತಮ್ಮಣ್ಣವರ, ಪಿಂಟು ಡೊಂಬಾರೆ, ಲೋಕೋಪಯೋಗಿ ಇಲಾಖೆಯಿಂದ ಪ್ರಭಾಕರ ಕಾಮತ, ವಿದ್ಯುತ್ ಸಂಘದ ರಾಮಪ್ಪಾ ಸೊಡ್ಡನ್ನವರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

 

WhatsApp Group Join Now
Telegram Group Join Now
Share This Article