ರನ್ನ ಬೆಳಗಲಿ: ಆ.೦೪., ಪಟ್ಟಣದ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಕ್ರಿಡಾಂಗಣದಲ್ಲಿ ಶ್ರೀ ಗುರು ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಸೋಮವಾರ ದಂದು ಸನ್ ೨೦೨೫-೨೬ನೇ ಸಾಲಿನ ರನ್ನ ಬೆಳಗಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಗಳು ಜರುಗಿದವು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಎಮ್ ಮುಲ್ಲಾ ಶಿಕ್ಷಣಾಧಿಕಾರಿಗಳು ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರಲು ಸಾಧ್ಯ. ಜೀವನಪಯಂತ ಮಾನಸಿಕವಾಗಿ,ದೈಹಿಕವಾಗಿ, ಸದೃಢವಾಗಿರಲು ಜ್ಞಾನದ ಜೊತೆಗೆ ಆರೋಗ್ಯವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಮಕ್ಕಳಿಗೆ ಓದಿನ ಜೊತೆಗೆ ಕ್ರೀಡೆಯನ್ನು ಬೆಂಬಲಿಸಿ,ಸರಕಾರಿ ಮಟ್ಟದ ಕ್ರೀಡಾಕೂಟಗಳಿಗೆ ಧಾನಿಗಳೇ ಶಕ್ತಿ ಧಾತರು ಅಂತ ಎಲ್ಲಾ ಧಾನಿಗಳಿಗೆ ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಶಿಕ್ಷಣ ಸಂಘದ ಅಧ್ಯಕ್ಷರಾದ ಭೀಮನಗೌಡ ಶಿವನಗೌಡ ಪಾಟೀಲ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಕರಾದ ಎಸ್ ಬಿ ರಡರಟ್ಟಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಸಾನಿಧ್ಯ ವಹಿಸಿದ ಕಾಡಯ್ಯ ಗಣಾಚಾರಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.ಆಡಳಿತ ಮಂಡಳಿಯವರಾದ ಲಕ್ಕಪ್ಪ ದೊಡಹಟ್ಟಿ,ಮಲ್ಲಪ್ಪ ಸನಹಟ್ಟಿ, ಮುತ್ತಪ್ಪ ಹೊಸಪೇಟಿ, ಗುರುನಾಥ ಹಿಪ್ಪರಗಿ, ಶಿವಪ್ಪ ಕೊಣ್ಣೂರ, ಪರಮಾನಂದ ಅಲಗೂರ, ಹನಮಂತ ಕಡಪಟ್ಟಿ, ಈರಪ್ಪ ಹಿಪ್ಪರಗಿ, ಚಿಕ್ಕಪ್ಪ ನಾಯಕ, ಪಂಡಿತ ಪೂಜಾರ, ರವೀಂದ್ರ ಮಂಟೂರ, ಬಸವಂತ ಮುರನಾಳ, ಮಾರುತಿ ಆರೇನಾಡ, ಗಜಾನನ ಸಿದ್ದಾಪೂರ,ಬಸಪ್ಪ ಮಂಟೂರ,ಪ್ರವೀಣ ಬರಮಣಿ, ಮಹಾಲಿಂಗಪ್ಪ ಹಂಪಿಹೊಳಿ ಮತ್ತು ದುಂಡಪ್ಪ ಬರಮನಿ,ಸದಾಶಿವ ಹೊಸಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಿಆರ್‌ಸಿಗಳಾದ ಬಸವರಾಜ ಬಳ್ಳಾರಿ ನಿರ್ಣಾಕಯಕರಿಗೆ ಆಟದ ನಿಯಮಗಳ ಬಗ್ಗೆ ತಿಳಿಸಿ, ಮಾರ್ಗದರ್ಶನ ನೀಡಿದರು.
ಮುಖ್ಯೋಪಾಧ್ಯಾಯರಾದ ಅಶೋಕ ಮುಡಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕರಾದ ಬಸವರಾಜ ಬೂದಿಹಾಳ ಸ್ವಾಗತಿಸಿದರು ವಸಂತ ಚವ್ಹಾನ ನಿರೂಪಿಸಿದರು,ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ವಂದಿಸಿದರು.