ನೇಸರಗಿ. ಭಾರತ ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ನಮ್ಮ ಭಾರತ ದೇಶದ ಸಂವಿದಾನ ಶಿಲ್ಪಿ ಅಗಿದ್ದು, ಅವರು ಬರೆದ ಸಂವಿದಾನ ಸರ್ವ ಜನಾಂಗಗಳ ಅಭಿವೃದ್ಧಿಗೆ ಸಹಕಾರಿಯಾಗಿದ್ದು , ಅವರು ಶಿಕ್ಷಣ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಕಾರ್ಪನ್ಯಗಳು ನೋಡಿ ನಾವು ಉನ್ನತ ವ್ಯಾಸಂಗ ಮಾಡಿ ಮುಂದೆ ಬರಬೇಕು ಎಂದು ಚನ್ನಮ್ಮನ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ ನೇಗಿನಹಾಳ ಗ್ರಾಮದಲ್ಲಿ ಸೋಮವಾರದಂದು ಕರ್ನಾಟಕ ಭೀಮ ಯುವ ಶಕ್ತಿ ಸಂಘ ರಾಜ್ಯ ಘಟಕದ ಸಹಯೋಗದಲ್ಲಿ ಗ್ರಾಮದ ಅಂಬೇಡ್ಕರ ಭವನದ ಹತ್ತಿರ ನಿರ್ಮಾಣವಾಗಿರುವ ಭಾರತ ದೇಶದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿ ಬೈಲೂರು ನಿಷ್ಕಲ ಮಠದ ಫಿಠಾಧಿಕಾರಿಗಳಾದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಮಾತನಾಡಿ ದಿನ ದಲಿತರ ಅಭಿವೃದ್ಧಿಗೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಡಾ ಅಂಬೇಡ್ಕರ ಅವರು ರಚಿಸಿದ ಸಂವಿಧಾನದಿಂದ ಅನೇಕರು ಇಂದು ಶ್ರಮದಿಂದ ಶಿಕ್ಷಣ ಪಡೆದು ಮುಂದೆ ಬಂದು ಅವರ ಆದರ್ಶಮಯ ಹಾದಿಯಲ್ಲಿ ಬೆಳೆದಿದ್ದಾರೆ. ಅವರ ಆದರ್ಶ ಜೀವನದ ಹಾದಿಯಲ್ಲಿ ನಾವು ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ದುರೀನ ನಾನಾಸಾಹೇಬ ಪಾಟೀಲ, ಖ್ಯಾತ ಅಂಕಿಶಾಸ್ತ್ರ ಹಾಗೂ ಆರ್ಥಿಕ ಸಲಹೆಗಾರ, ಸಮಾಜದ ಮುಖಂಡರಾದ ಪ್ರಶಾಂತರಾವ ಐಹೋಳೆ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷರಾದ ಯಮನಪ್ಪ ಗಡಿನಾಯಕ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ವೀರೂಪಾಕ್ಷ ಎಸ್ ಮೇತ್ರಿ,ಬುದ್ಧ ಬಸವ ಅಂಬೇಡ್ಕರ್ ಕಟ್ಟಡ ಹಾಗೂ ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಮಾರುತಿ ಕೆಳಗೇರಿ, ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಕೋಟಗಿ, ಮಂಜುನಾಥ ಸಿಡ್ಲೆವ್ವಗೋಳ, ಗ್ರಾಮದ ಮುಖಂಡರು, ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದಲಿತ ಮುಖಂಡರು, ಗ್ರಾಮಸ್ಥರು, ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.