ಬಳ್ಳಾರಿ ಆ. 04. : ಕೆಐಎಡಿಬಿ ವತಿಯಿಂದ ತಾಲೂಕಿನ ಕುಡುತಿನಿ ಮತ್ತು ಇತರೆ ಆರು ಗ್ರಾಮಗಳ ರೈತರಿಂದ ಬ್ರಹ್ಮಣಿ, ಲಕ್ಷ್ಮಿ ಮಿತ್ತಲ್ ಮತ್ತು ಎನ್ ಎಂ ಡಿ ಸಿ ಕಾರ್ಖಾನೆಗಳಿಗಾಗಿ ವಶಪಡಿಸಿಕೊಳ್ಳಲಾದ ಜಮೀನಿನ ಬೆಲೆಯಲ್ಲಿ ರೈತರಿಗೆ ಮೋಸವಾಗಿದ್ದು ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ಒಂದು ಕೋಟಿ ಒಂದು ಲಕ್ಷ ರೂಪಾಯಿಗಳನ್ನು ನೀಡಲು ನಾವು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದೊಂದಿಗೆ ಹಲವು ಬಾರಿ ಮಾತನಾಡಿದರು ಸಹ ಯಾವುದೇ ಉಪಯೋಗವಾಗಿಲ್ಲ, ಮತ್ತು ಕಳೆದ 961 ದಿನಗಳಿಂದ ಧರಣಿ ನಡೆಸುತ್ತಿದ್ದರು ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ನಮ್ಮ ಜಮೀನಿಗೆ ನ್ಯಾಯಯುತವಾದ ಬೆಲೆಯನ್ನು ನೀಡಲು ಆಗಸ್ಟ್ 7 ರಂದು ಸಂಡೂರಿನ ಶಾಸಕ ಮತ್ತು ಸಂಸದರ ಮನೆಗೆ ಪಾದಯಾತ್ರೆಯ ಮೂಲಕ ಹೋಗಿ ಮುತ್ತಿಗೆ ಹಾಕಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ರಾಜ್ಯ ಮುಖಂಡರಾದ ಯು ಬಸವರಾಜ್ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಈ ವಿಷಯದ ಕುರಿತು ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಕೆ ಐ ಎ ಡಿ ಬಿ ಅಥವಾ ಸರ್ಕಾರದ ಹತ್ತಿರ ನ್ಯಾಯಾಲಯದ ಆದೇಶದ ಪ್ರಕಾರ ಭೂಬೆಲೆಯನ್ನು ನೀಡಲು ಸಾಧ್ಯವಾಗದೇ ಇದ್ದಲ್ಲಿ ರೈತರಿಂದ ವಶಪಡಿಸಿಕೊಂಡ 12500 ಎಕರೆ ಜಮೀನಿನಲ್ಲಿ ಕಾರ್ಖಾನೆಗಳಿಗೆ ಬೇಕಾದ 6,000 ಎಕರೆ ಭೂಮಿಯನ್ನು ಇಟ್ಟುಕೊಂಡು ಉಳಿದ ಜಮೀನಿನನ್ನು ಕರ್ನಾಟಕ ಪ್ರದೇಶ ಕೈಗಾರಿಕಾ ಪ್ರದೇಶ ಅಭಿವೃದ್ಧಿ ವತಿಯಿಂದ ಅಭಿವೃದ್ಧಿಪಡಿಸಲಾದ ಜಮೀನನ್ನು ನೀಡಿ, ಅದು ಸಾಧ್ಯವಾಗದೆ ಹೋದಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಕಾರ ಒಂದು ಕೋಟಿ ಒಂದು ಲಕ್ಷ ರೂಪಾಯಿಗಳು ಹಾಗೂ ಅಭಿವೃದ್ಧಿಯ ವೆಚ್ಚ ಸೇರಿ ಒಟ್ಟು 1 ಕೋಟಿ 56 ಲಕ್ಷ ರೂಪಾಯಿಗಳ ನ್ಯಾಯಯುತವಾದ ಗೂಬೆಲೆಯನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಕೆ ಐ ಎ ಡಿ ಬಿ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಸಿಪಿಐ ನ ಜಿಲ್ಲಾ ಕಾರ್ಯದರ್ಶಿ ಸತ್ಯ ಬಾಬು, ಸಂಪತ್ ಜಂಬಣ್ಣ, bಜಲೀಲ್ ಸಾಬ್, ತಿಪ್ಪೇಸ್ವಾಮಿ ಸೇರಿದಂತೆ ಭೂಸಂತರಸ್ತ ಕುಡುತಿನಿ ರೈತರು ಇದ್ದರು.