ವೃದ್ಧಾಶ್ರಮದಲ್ಲಿ ಜಯ ಕರ್ನಾಟಕ ಜನ ಪರ ವೇದಿಕೆ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಅವರ ಜನ್ಮದಿನಾಚರಣೆ

Ravi Talawar
ವೃದ್ಧಾಶ್ರಮದಲ್ಲಿ ಜಯ ಕರ್ನಾಟಕ ಜನ ಪರ ವೇದಿಕೆ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಅವರ ಜನ್ಮದಿನಾಚರಣೆ
WhatsApp Group Join Now
Telegram Group Join Now
ಬಳ್ಳಾರಿ,ಆ.04: ನಗರದ ಸೂರ್ಯ ನಿವಾಸ ವೃದ್ಧಾಶ್ರಮದಲ್ಲಿ ಇದೇ ಆಗಸ್ಟ್ 01.ರಂದು ಶುಕ್ರವಾರ ರಾತ್ರಿ ಜಯ ಕರ್ನಾಟಕ ಜನ ವೇದಿಕೆ ವತಿಯಿಂದ ಜಿಲ್ಲಾಧ್ಯಕ್ಷರಾದ ಶಂಕರ್ ಬಸಪ್ಪ ಹಾಗೂ ನಗರಾಧ್ಯಕ್ಷ ಸೋಮಶೇಖರ ಅವರ ನೇತೃತ್ವದಲ್ಲಿ ಮತ್ತು ಸಂಘಟನೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಸಂಘಟನೆಯ  ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ಅವರ ಜನ್ಮ ದಿನವನ್ನು ವೃದ್ಧಾಶ್ರಮದಲ್ಲಿ ಬಿಸ್ಕೇಟ್ ಪಾಕೆಟ್ ಮತ್ತು ಸಿಹಿ ಹಂಚಿಕೆ ಕಟ್ ಮಾಡಿ ಜನ್ಮ ದಿನವನ್ನು ಆಚರಿಸಲಾಯಿತು.
ನಂತರ ಜಿಲ್ಲಾಧ್ಯಕ್ಷ ಶಂಕರ್ ಬಸಪ್ಪ ಅವರು ಮಾತನಾಡಿ ನಮ್ಮ ಸಂಸ್ಥಾಪಕ ಅಧ್ಯಕ್ಷರಾದ ಗುಣರಂಜಾನ್ ಶೆಟ್ಟಿಯವರು ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ಅವರು ಆದೇಶ ನೀಡಿದಲ್ಲಿ  ಮಾತ್ರ ನಾವು ಯಾವುದೇ ಹೋರಾಟಕ್ಕೆ ಸಿದ್ಧ, ಕಾನೂನಿನ ಚೌಕಟ್ಟಿನಲ್ಲಿ ಹೋರಾಟವನ್ನು ಮಾಡುತ್ತೇವೆ. ಅಷ್ಟೇ ಅಲ್ಲದೆ ಸಾರ್ವಜನಿಕ ಸಮಸ್ಯೆಗಳಿದ್ದಲ್ಲಿ ಜನಪರ ಹೋರಾಟವನ್ನು ಹಮ್ಮಿಕೊಂಡು ನಾಗರಿಕರಿಗೆ ಸಂಘಟನೆಯಿಂದ ಸ್ಪಂದಿಸಲಾಗುವುದು  ಎಂದು ತಿಳಿಸಿದರು.
 ಅಲ್ಲದೆ ಗುಣ ರಂಜನ್ ಶೆಟ್ಟಿ  ಮತ್ತು ಜೆ.ಶ್ರೀನಿವಾಸ್  ಮಾರ್ಗದಲ್ಲಿ ನಾವು ಹಲವಾರು ಬಾರಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ನೂರಾರು ಜನರ ಆರೋಗ್ಯ ತಪಾಸಣೆಯನ್ನು ಮಾಡಿ ಔಷಧಗಳನ್ನು ವಿಸ್ತರಿಸಿದ್ದೇವೆ . ಸಮಾಜ ಸೇವೆ ಅಲ್ಲದೆ ಹಲವು ಬಾರಿ ಹೋರಾಟಗಳನ್ನು ಕೂಡ ಮಾಡಿದ್ದೇವೆ ಇನ್ನು ಮುಂದಿನ ದಿನಗಳಲ್ಲಿ ಸಮಾಜ ಮುಖಿಯಾಗಿ ಜನರ ಪರವಾಗಿ ಸಂಘಟನೆಯಿಂದ ಕೆಲಸ ಮಾಡುತ್ತೇವೆ  ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ, ಪದಾಧಿಕಾರಿಗಳು ಸೂರ್ಯ ನಿವಾಸ ವೃದ್ಧಾಶ್ರಮದಲ್ಲಿ ಇರುವ ಹಿರಿಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article