ಘಟಪ್ರಭಾ: ಇಲ್ಲಿನ ಪ್ರತಿಷ್ಠಿತ ಗುಬ್ಬಲಗುಡ್ಡ, ಕೆಂಪಯ್ಯಸ್ವಾಮಿ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ 41 ನೇ ಜನ್ಮದಿನದ ಪ್ರಯುಕ್ತ ಇಂದು ಆಗಸ್ಟ್ 4 ಹಾಗೂ 5 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿ. 4 ರಂದು ಹಿಡಕಲ್ ಡ್ಯಾಮ್ ನ ಬುದ್ದಿಮಾಂಧ್ಯ ಮಕ್ಕಳ ಜೊತೆ ಜನ್ಮದಿನ ಆಚರಣೆ, ಮಕ್ಕಳ ಅರೋಗ್ಯ ತಪಾಸಣೆ, ಅವರೊಂದಿಗೆ ಊಟ ಮಾಡುವದು ನಂತರ ಘಟಪ್ರಭಾ ಅರೋಗ್ಯ ಧಾಮ ಮತ್ತು ಪಟ್ಟಣದ ಜೆ ಜಿ ಕೋ ಸಹಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಸದ್ಭಕ್ತರಿಂದ ಹಣ್ಣು ವಿತರಣೆ. ಶಿರಡಾಣ ಗ್ರಾಮದ ಡಾ ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಜೆ ಜಿ ಸಹಕಾರಿ ಆಸ್ಪತ್ರೆಯಲ್ಲಿ ವನಮಹೋತ್ಸವ ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಚರಣೆ ನೆರವೇರಿಸಲಾಗುವದು. ದಿ. 5 ರಂದು ಭಕ್ತರಿಂದ ಗುರುವಂದನಾ ಕಾರ್ಯಕ್ರಮ ಪ್ರಯುಕ್ತ ಐಚಿಕ ರಕ್ತದಾನ ಶಿಭಿರ, ಉಚಿತ ಅರೋಗ್ಯ ತಪಾಸಣೆ ಶಿಬಿರ ನೆರವೇರಲಿದೆ.ಬೆಳಗಾವಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಜೆ ಜಿ ಕೋ ಆಸ್ಪತ್ರೆ, ಗೋಕಾಕ ರೋಟರಿ ಕ್ಲಬ್, ಬೆಳಗಾವಿ ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆ,ಸ್ಥಳೀಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಕೆ ಎಲ್ ಇ ಆಸ್ಪತ್ರೆಯ 50 ಜನ ನುರಿತ ವೈದ್ಯರು ಈ ಅರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಯುಷ್ಮಾನ್ ಕಾರ್ಡ್, ಇ ಶ್ರಮ ಕಾರ್ಡ್, ಪ್ರಧಾನ ಮಂತ್ರಿ ಪಸಲ ಭೀಮಾ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ, ಪ್ರಧಾನ ಮಂತ್ರಿ ಮಾನ ಧನ ಯೋಜನೆ, ರಾಷ್ಟ್ರೀಯ ಪಿಂಚಣಿ ಯೋಜನೆಗಳ ಕಾರ್ಡ ವಿತರಿಸಲಾಗುವದು ಎಂದು ಭಕ್ತರು ತಿಳಿಸಿದ್ದಾರೆ. ಈ ಶಿಬಿರದ ಹೆಚ್ಚಿನ ವಿವರಗಳಿಗೆ ಮೊ. ನಂಬರ್ 9449200193 ಗೆ ಸಂಪರ್ಕಿಸಲು ಕೋರಲಾಗಿದೆ.