ಬೈಲಹೊಂಗಲ. ತಾಲೂಕಿನ ಉಡಿಕೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಸಹಯೋಗದಲ್ಲಿ ಜ್ಞಾನವಿಕಾಸ ಹೊಸ ಕೇಂದ್ರದ ಉದ್ಘಾಟನೆ ಮತ್ತು ಉಚಿತ ಕಣ್ಣಿನ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತ ಅಧ್ಯಕ್ಷರಾದ ಶ್ರೀಮತಿ ಭಾರತಿ ಬ ಪೂಜಾರ ವಹಿಸಿಕೊಂಡಿದ್ದರು. ಕೇಂದ್ರದ ಉದ್ಘಾಟನೆಯನ್ನು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಆಸಿಫ್ ಮ ಲತೀಫ ಮತ್ತು ಶ್ರೀ ದುರ್ಗಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೋಳಪ್ಪನವರ, ಗ್ರಾಮ ಪಂಚಾಯಿತ ಸದಸ್ಯರಾದ ಮಹಾಬಳೆಶ್ವರ ಗೂಳಪ್ಪನವರ ಹಾಗೂ ಉಮೇಶ್ ಹಿತ್ತಲಮನೆ, ಅಭಿದಲಿ ಸಾಯಿ ದೀಪ ಕಣ್ಣಿನ ಆಸ್ಪತ್ರೆ ಸಿಬ್ಬಂದಿ, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಮಾದೇವಿ ಸುತಗಟ್ಟಿ, ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀ ಮತಿ ಶೈಲಾ ಜೆ, ವಲಯದ ಮೇಲ್ವಿಚಾರಕರಾದ ಸಂತೋಷ ಕೆ ಟಿ ಹಾಗೂ ಎಲ್ಲರ ಸಮ್ಮುಖದಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶೈಲಾ ಜೆ ಮಾತನಾಡಿ ಯೋಜನೆಯ ಹಲವಾರು ಕಾರ್ಯಕ್ರಮಗಳ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮದ ಮಹತ್ವದ ಹಾಗೂ ಉದ್ದೇಶ ,ವಾತ್ಸಲ್ಯ ಮಾಶಾಸನ ಜ್ಞಾನವಿಕಾಸದಲ್ಲಿ ನಡೆಯುವ ಕಾನೂನು ಅರಿವು ಆರೋಗ್ಯ ಜ್ವಲಂತ, ನಾನು ಓದಿದ ಪುಸ್ತಕ, ಗ್ರಂಥಾಲಯ ಗೆಳತಿ ಕಾರ್ಯಕ್ರಮ ಹತ್ತು ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ಒಳಗೊಂಡಿರುವ ವಿಶೇಷ ಕಾರ್ಯಕ್ರಮ ಬಗ್ಗೆ ಹಾಗೂ ಜ್ಞಾನ ವಿಕಾಸ ಕೇಂದ್ರದ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಸಿಫ್ ಲತಿಫ್ ಮಾತನಾಡಿ ಗ್ರಾಮದಲ್ಲಿ ನಡೆಸುವಂತಹ ಕಾರ್ಯಗಳ ಬಗ್ಗೆ ಡಾ// ಡಿ ವೀರೇಂದ್ರ ಹೆಗ್ಡೆ ಅವರು ನಡೆಸುವಂತಹ ಗ್ರಾಮ ಅಭಿವೃದ್ಧಿ ಯೋಜನೆ ವಿಶೇಷ ಸೌಲಭ್ಯಗಳ ಬಗ್ಗೆ ಹಾಗೂ ಕಣ್ಣಿನ ತಪಾಸನೆ ಮುಖಾಂತರ ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆಯಾಗುವ ಕುರಿತು ಮತ್ತು ಮೊಬೈಲ್ ಬಳಕೆಯಿಂದ ಸಮಸ್ಯೆ ಆಗುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ತಾಯಂದಿರ ಜವಾಬ್ದಾರಿಯನ್ನು ಎಲ್ಲಾ ವಿಷಯಗಳಿಗೆ ವಿಶೇಷವಾಗಿ ಗುರ್ತಿಸುವಂತ ಕಾರ್ಯಕ್ರಮವೇ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ನೀಡುವಂತ ಸೌಲಭ್ಯಗಳನ್ನು ಗ್ರಾಮಸ್ಥರು ಮತ್ತು ಮಹಿಳೆಯರು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆ ಸೇವಾ ಪ್ರತಿನಿಧಿ ಪ್ರೇಮಾ,
ಸ್ವಾಗತ ವಲಯ ಮೇಲ್ವಿಚಾರಕರಾದ ಸಂತೋಷ ಕೆ ಟಿ,ವಂದನೆಯನ್ನು ಸೇವಾ ಪ್ರತಿನಿಧಿ ಮಂಗಲಾ ಹಾಗೂ ಸೇವಾ ಪ್ರತಿನಿಧಿ ಶೋಭಾ ಸುವಿದ, ಸಹಾಯಕರು, ಜ್ಞಾನವಿಕಾಸ ಸರ್ವ ಸದಸ್ಯರು ಊರಿನ ಸಮಸ್ತ ನಾಗರಿಕರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.