ವಿಜಯಪುರ : ‘ಜೀವನದಲ್ಲಿ ತಿರುವುಗಳು ಯಾವಾಗಲಾದರೂ ಬರಬಹುದು ಮಹಿಪತಿ ದಾಸರಿಸಿಗೆ ನಂಗಾಶಾಹಿ ಸೂಫಿಯ ಮೂಲಕವಾಗಿ ಅವರು ಆಧ್ಯಾತ್ಮದತ್ತ ಹೊರಳಿದರು’ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಹೇಳಿದರು.
ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ನಡೆದ, ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ)’ ಆಯೋಜನೆ ‘ಮಹಿಪತಿದಾಸರ ಜೀವನ, ಸಾಹಿತ್ಯ ಹಾಗೂ ಸಮಕಾಲೀನ ಇತಿಹಾಸ’ ವಿಷಯ ಮೇಲೆ ಮಾತಾಡಿದ ಅವರು ‘ಮಲ್ಲಿಕ್ ಕಾಫೂರ್, ಮಹಮ್ಮದ್ ಬಿನ್ ತುಘಲಕ್ ದಾಳಿಯ ನಂತರ ದಕ್ಷಿಣದ ತುಂಗಭದ್ರಾ ನದಿಯ ಕೆಳಗಿನ ಭಾಗದಲ್ಲಿ ‘ವಿಜಯನಗರ” ಸಾಮ್ರಾಜ್ಯ ; ನದಿಯ ಮೇಲ್ಬಾಗ ಬಹುಮನಿ ಸಾಮ್ರಾಜ್ಯಗಳು ಉದಯಿಸಿದವು. ಬಹುಮನಿ ಸಾಮ್ರಾಜ್ಯದಲ್ಲಿ ವಿಜಯಪುರ ಒಂದು ಸುಬೆಯಾಗಿದ್ದು ‘ಯೂಸುಫ್’ ಈ ಸುಬೆಯ ಸರ್ದಾರನಾಗಿದ್ದನು. ಅವನೇ ಮುಂದೇ ಆದಿಲ್ ಶಾಹಿ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಾನೆ. ಈ ಆದಿಲ್ ಶಾಹಿ ಮನೆತನದ ಎರಡನೇ ಅಲಿ ಆದಿಲ್ ಶಾಹಿ ಕಾಲದಲ್ಲಿ ಮಹಿಪತಿದಾಸರು ಹಣಕಾಸು ಇಲಾಖೆಯಲ್ಲಿದ್ದರು. ಅವರಿಗೆ ನಂಗಾಶಾಹಿ ಸೂಫಿಯ ಮೂಲಕ ಪರಿವರ್ತನೆಗೊಂಡು ಭಾಸ್ಕರಸ್ವಾಮಿಗಳ ಶಿಷ್ಯರಾಗುತ್ತಾರೆ. ಮಹಿಪತಿದಾಸರು ಯೋಗ ಸಾಧನ ಮೂಲಕ ದಿವ್ಯತೆಯನ್ನು ಪಡೆದರು. ಅದನ್ನು ಅವರ ಅನೇಕ ಕೀರ್ತನೆಗಳಲ್ಲಿ ಶಬ್ದದಲ್ಲಿ ಹಿಡಿದಿಟ್ಟಿದ್ದಾರೆ’ ಎಂದು ಮಹಿಪತಿದಾಸರ ಚರಿತ್ರೆಯನ್ನು ವಿವರಿಸಿದರು.
‘ಮಹಿಪತಿದಾಸರ ಕೀರ್ತನೆಗಳು ಈ ವರೆಗೂ ಸಂಪೂರ್ಣವಾಗಿ ಮುದ್ರಣವಾಗಿಲ್ಲ ,ಮುದ್ರಣವಾಗಬೇಕೆಂದು’ ಇನ್ನೋರ್ವ ಉಪನ್ಯಾಸಕಾರದ ನಾರಾಯಣ ಬಾಬಾನಗರ ಆಶಿಸಿದರು. ‘ದಾಸರ , ಶರಣ ,ಹಳೆಗನ್ನಡ ಕವಿಗಳ ಕುರಿತು ಸಾಹಿತ್ಯಕ ಕಾರ್ಯಕ್ರಮ ಆಗಾಗ ಆಗುತ್ತಿರಬೇಕೆಂದು’ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಹರ್ಷವರ್ಧನ ಸರಾಫ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾರ್ಥನೆ ಶ್ರೀಮತಿ ಪ್ರಿಯಾ ಹರಿದಾಸ, ಸ್ವಾಗತಪರಿಚಯ ಆನಂದ ಗೋಡ್ಸೆ,ನಿರೂಪಣೆ ರಾಹುಲ್ ಮರಳಿ , ವಂದನಾರ್ಪಣೆ ಶ್ರೀರಂಗ ಕುಲಕರ್ಣಿ ನಿರ್ವಹಣೆ ಮಾಡಿದರು. ವಿವೇಕ ಕುಲಕರ್ಣಿ ,ಶ್ರೀರಂಗ ಪುರಾಣಿಕ , ಅನಿಲ ಬಳ್ಳುಂಡಗಿ , ಸುಕಾಂತ ಕುಲಕರ್ಣಿ, ವರಣು ಸೋಲಾಪುರ, ಮಯೂರ ತಿಳಗೂಳಕರ , ಆನಂದ ಜೋಶಿ , ಶಶಿಧರ ಶಿರಾಳಶೆಟ್ಟಿ, ರವೀಂದ್ರ ಹಲ್ಯಾಳ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.