ಯಾದಗಿರಿ: ಜಿಲ್ಲೆಯ ಶಹಾಪೂರ ನಗರದ ಬೆಟ್ಟದಲ್ಲಿನ ಜಗದ್ಗುರು ಶ್ರೀ ಮೌನೇಶ್ವರರ ದೇವಸ್ಥಾನದ ಆವರಣದಲ್ಲಿ ಶಾರದಹಳ್ಳಿ ಗ್ರಾಮದ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಐಕೂರಿನ ಮಾತೋಶ್ರೀ ಗಂಗಮ್ಮ ಗಂ. ದಿ. ಸೂಗಣ್ಣ ಸಾಹು ವಾರದ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಗಳ ಸಹಯೋಗದಡಿ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ “ಹಸಿರು ಭೂಮಿ ಆಂದೋಲನ” ದ ದ್ವಿತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಗಂಗಾಧರ ವಿಶ್ವಕರ್ಮ ಸಗರ, ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಾವು ಗಿಡ ಮರಗಳನ್ನು ಕಡಿಯುತ್ತಿದ್ದೇವೆ. ಇದರ ಪರಿಣಾಮ ಮುಂದೆ ಮಕ್ಕಳು ಶಾಲಾ ಕೈಚೀಲದೊಂದಿಗೆ ಒಂದು ಆಕ್ಸೀಜನ್ ಬಾಟಲ್ ಸಹ ಕೊಂಡೊಯ್ಯಬೇಕಾದ ಪರಿಸ್ಥಿತಿ ಬರಬಹುದು. ಆದ್ದರಿಂದ “ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ”, ಪರಿಸರವನ್ನು ಉಳಿಸಿ ಬೆಳೆಸಬೇಕೆಂದರು. ನಂತರ ಉಭಯ ಸಂಸ್ಥೆಗಳ ವತಿಯಿಂದ ದೇವಸ್ಥಾನ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಎರಡೂ ಸಂಸ್ಥೆಗಳ ಅಧ್ಯಕ್ಷರುಗಳಾದ ಸಂತೋಷ ಎಂ. ಆಚಾರ್ಯ ಶಾರದಹಳ್ಳಿ ಮತ್ತು ಮಹೇಶ ಎಸ್. ವಾರದ, ಮತ್ತು ಪ್ರಮುಖರಾದ ಗಣೇಶ ಪತ್ತಾರ ಶಹಾಪುರ, ತರುಣ್ ಎಂ. ಆಚಾರ್ಯ, ಮಹೇಶ ಡಿ. ಹಿರೇಮಠ, ಭೀಮಣ್ಣ ವಿಶ್ವಕರ್ಮ ಸಗರ, ಮಲ್ಲಿಕಾರ್ಜುನ ಬಿರಾದಾರ, ನಿಂಗರೆಡ್ಡಿ ದೇವಿಕೇರಿ, ಶಿವರುದ್ರ ನಾಗಲೀಕರ್, ಬಾಲರಾಜ ಎಂ ವಿಶ್ವಕರ್ಮ ಅರಳಗುಂಡಗಿ ಕು. ಸಮೃದ್ಧ ಎಸ್. ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.